Nora Fatehi: ನೋರಾ ಫತೇಹಿ ಹೊಸ ಅವತಾರ ಕಂಡು ಕಣ್ಣರಳಿಸಿದ ಫ್ಯಾನ್ಸ್
ನೋರಾ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ಅಕ್ಷಯ್ ಕುಮಾರ್ ಆ್ಯಂಡ್ ಟೀಂ ವಿಶೇಷ ಕಾರ್ಯಕ್ರಮ ನೀಡಲು ಅಮೆರಿಕ ತೆರಳಿದ್ದು, ಅವರಿಗೆ ನೋರಾ ಕೂಡ ಸಾಥ್ ನೀಡಿದ್ದಾರೆ. ಡ್ಯಾನ್ಸ್ ಮೂಲಕ ಎಲ್ಲರನ್ನೂ ರಂಜಿಸುವ ಕೆಲಸ ಆಗುತ್ತಿದೆ.
Updated on: Mar 11, 2023 | 9:39 AM

ನೋರಾ ಫತೇಹಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನು ನಾಲ್ಕು ಕೋಟಿಗೂ ಅಧಿಕ ಮಂದಿ ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಿಸುತ್ತಿರುವುದೇ ಇದಕ್ಕೆ ಸಾಕ್ಷಿ. ನೋರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ನೋರಾ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ಅಕ್ಷಯ್ ಕುಮಾರ್ ಆ್ಯಂಡ್ ಟೀಂ ವಿಶೇಷ ಕಾರ್ಯಕ್ರಮ ನೀಡಲು ಅಮೆರಿಕ ತೆರಳಿದ್ದು, ಅವರಿಗೆ ನೋರಾ ಕೂಡ ಸಾಥ್ ನೀಡಿದ್ದಾರೆ. ಡ್ಯಾನ್ಸ್ ಮೂಲಕ ಎಲ್ಲರನ್ನೂ ರಂಜಿಸುವ ಕೆಲಸ ಆಗುತ್ತಿದೆ.

ನೋರಾ ಅವರು ಟೆಕ್ಸಾಸ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ವಿವಿಧ ಕಮೆಂಟ್ಗಳು ಬಂದಿವೆ.

ಟ್ರೆಂಪೇಚರ್ ಹೆಚ್ಚಿಸುವ ರೀತಿಯಲ್ಲಿ ನೋರಾ ಅವರ ಫೋಟೋಗಳು ಇವೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರಿಂದ ಈ ರೀತಿಯ ಮತ್ತಷ್ಟು ಫೋಟೋಗಳು ಬರಲಿ ಎಂದು ಆಶಿಸುತ್ತಿದ್ದಾರೆ.

ನೋರಾ ಅವರಿಗೆ ಇತ್ತೀಚೆಗೆ ಸಂಕಷ್ಟ ಎದುರಾಗಿತ್ತು. 200 ಕೋಟಿ ರೂಪಾಯಿ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಅವರು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದರಿಂದ ನೋರಾ ವಿಚಾರಣೆ ಕೂಡ ಎದುರಿಸಿದ್ದರು.