Ileana D’cruz: ತಾಯಿ ಆಗುತ್ತಿರುವ ನಟಿ ಇಲಿಯಾನಾ ಡಿಕ್ರೂಸ್ಗೆ ಖುಷಿಯೋ ಖುಷಿ; ತಂದೆ ಯಾರೆಂಬ ಸುಳಿವು ಇನ್ನೂ ಸಿಕ್ಕಿಲ್ಲ
Ileana D'cruz Viral Photo: ಇಲಿಯಾನಾ ಡಿಕ್ರೂಸ್ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ಮಗುವಿನ ತಂದೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ನಟಿ ಇಲಿಯಾನಾ ಡಿಕ್ರೂಸ್ (Ileana D’cruz) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ತಾವು ಪ್ರೆಗ್ನೆಂಟ್ (Pregnant) ಎಂಬ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ತಿಳಿಸಿದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಈಗ ಅವರು ಬೇಬಿ ಬಂಪ್ (baby bump) ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾಯಿ ಆಗುತ್ತಿರುವ ಅವರು ಬಹಳ ಖುಷಿಯಲ್ಲಿದ್ದಾರೆ. ಅದಕ್ಕೆ ಅವರು ಹಂಚಿಕೊಳ್ಳುತ್ತಿರುವ ಫೋಟೋಗಳೇ ಸಾಕ್ಷಿ. ಮದುವೆ ಆಗದೇ ಮಗು ಪಡೆಯುತ್ತಿರುವ ಇಲಿಯಾನಾ ಡಿಕ್ರೂಸ್ ಅವರ ನಿರ್ಧಾರಕ್ಕೆ ಅವರ ಕುಟುಂಬದವರ ಒಪ್ಪಿಗೆ ಕೂಡ ಇದೆ. ಈಗ ಇಲಿಯಾನಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಅವರ ಫ್ಯಾನ್ಸ್ ಪೇಜ್ಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಇಲಿಯಾನಾ ಡಿಕ್ರೂಸ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸದ್ಯ ಅವರು ಪ್ರೆಗ್ನೆನ್ಸಿ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಈ ಮೊದಲು ಕೂಡ ಇಲಿಯಾನಾ ಡಿಕ್ರೂಸ್ ಅವರು ಒಂದು ಫೋಟೋ ಹಂಚಿಕೊಂಡಿದ್ದರು. ‘ಬಂಪ್ ಅಲರ್ಟ್’ ಎಂದು ಅವರು ಅದಕ್ಕೆ ಕ್ಯಾಪ್ಷನ್ ನೀಡಿದ್ದರು. ಅದನ್ನು ನೋಡಿ ಸಾವಿರಾರು ಜನರು ಕಮೆಂಟ್ ಮಾಡಿದ್ದರು. ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರು. ಎಷ್ಟೇ ಟ್ರೋಲ್ ಆದರೂ ಕೂಡ ಇಲಿಯಾನಾ ಅವರು ತಮ್ಮ ಪಾರ್ಟ್ನರ್ ಹೆಸರು ಬಹಿರಂಗಪಡಿಸಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿದಿದೆ.
ಬಿಕಿನಿಯಲ್ಲಿ ಮಿಂಚಿದ ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಸ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಯಿತು. ಇತ್ತೀಚೆಗೆ ಇಲಿಯಾನಾ ಡಿಕ್ರೂಸ್ ಅವರು ನಟಿ ಕತ್ರಿನಾ ಕೈಫ್ ಸಹೋದರ ಸೆಬ್ಬಾಸ್ಟಿಯನ್ ಲೊರಾನ್ ಮಿಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು.
ನಟಿ ಇಲಿಯಾನ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?
2006ರಿಂದಲೂ ಇಲಿಯಾನಾ ಡಿಕ್ರೂಸ್ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಏಪ್ರಿಲ್ 24ರಂದು ಅವರ ಹೊಸ ಸಾಂಗ್ ಬಿಡುಗಡೆ ಆಗಿದೆ. ಇಲಿಯಾನಾ ಡಿಕ್ರೂಜ್ ಅವರು ಏಪ್ರಿಲ್ 14ರಂದು ತಾವು ಪ್ರೆಗ್ನೆಂಟ್ ಎಂಬ ವಿಷಯ ಬಹಿರಂಗಪಡಿಸಿದ್ದರು. ‘ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ ಎಂಬ ಡಾಲರ್ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಸ್ ಕೂಡ ಕಮೆಂಟ್ ಮಾಡಿದ್ದರು. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.