‘ಸರಿಯಾದ ವ್ಯಕ್ತಿ ನಿಮಗೆ ನೋವು ಮಾಡಲ್ಲ’; ಆಶಿಷ್​ ವಿದ್ಯಾರ್ಥಿ ಮರು ಮದುವೆಯಿಂದ ಮೊದಲ ಪತ್ನಿಗೆ ಬೇಸರ?

Rajoshi Vidyarthi: ಆಶಿಷ್ ವಿದ್ಯಾರ್ಥಿ ಅವರು ರೂಪಾಲಿ ಅವರನ್ನು ಮದುವೆ ಆಗಿರುವ ಬಗ್ಗೆ ಮೊದಲ ಪತ್ನಿ ರಾಜೋಶಿ ಪರೋಕ್ಷವಾಗಿ ಮಾತನಾಡಿದ್ದಾರೆ.  

‘ಸರಿಯಾದ ವ್ಯಕ್ತಿ ನಿಮಗೆ ನೋವು ಮಾಡಲ್ಲ’; ಆಶಿಷ್​ ವಿದ್ಯಾರ್ಥಿ ಮರು ಮದುವೆಯಿಂದ ಮೊದಲ ಪತ್ನಿಗೆ ಬೇಸರ?
ಆಶಿಷ್ ವಿದ್ಯಾರ್ಥಿ,ರೂಪಾಲಿ-ರಾಜೋಶಿ
Follow us
ರಾಜೇಶ್ ದುಗ್ಗುಮನೆ
|

Updated on: May 26, 2023 | 11:14 AM

ಹಿರಿಯ ನಟ ಆಶಿಷ್ ವಿದ್ಯಾರ್ಥಿ (Ashish Vidyarthi) ಅವರು 60ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ರೂಪಾಲಿ ಬರುವಾ ಅವರನ್ನು ಇತ್ತೀಚೆಗೆ ಮದುವೆ ಆಗಿದ್ದಾರೆ. ಇದು ಕೋರ್ಟ್ ಮ್ಯಾರೇಜ್ ಆಗಿದ್ದು, ಕೆಲವೇ ಕೆಲವು ಆಪ್ತರು ಈ ವಿವಾಹಕ್ಕೆ ಹಾಜರಿ ಹಾಕಿದ್ದರು. ಈ ಮದುವೆ ಆಶಿಷ್ ವಿದ್ಯಾರ್ಥಿ ಅವರ ಮೊದಲ ಪತ್ನಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಹಿಂದಿರೋ ಅರ್ಥ ಏನು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.

ಆಶಿಷ್ ವಿದ್ಯಾರ್ಥಿ ಹಾಗೂ ರಾಜೋಶಿ ವಿದ್ಯಾರ್ಥಿ ಮದುವೆ ಆಗಿದ್ದರು. ರಾಜೋಶಿ ಅವರು ಬೆಂಗಾಲಿ ನಟಿ ಶಾಕುಂತಲಾ ಬರುವಾ ಅವರ ಮಗಳು. ಇವರು ಆಶಿಷ್​ ವಿದ್ಯಾರ್ಥಿ ಆ್ಯಂಡ್ ಅಸೋಸಿಯೇಟ್​ನ ಸಹಸಂಸ್ಥಾಪಕಿ ಕೂಡ ಹೌದು. ಇಬ್ಬರೂ ನಂತರ ಬೇರೆ ಆಗಿದ್ದಾರೆ. ಆಶಿಷ್ ವಿದ್ಯಾರ್ಥಿ ಅವರು ರೂಪಾಲಿ ಅವರನ್ನು ಮದುವೆ ಆಗಿರುವ ಬಗ್ಗೆ ರಾಜೋಶಿ ಪರೋಕ್ಷವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮುದ್ದೆ ಊಟ ಸವಿದ ಆಶಿಶ್ ವಿದ್ಯಾರ್ಥಿ; ಏನು ವಿಶೇಷ? ಇಲ್ಲಿದೆ ನೋಡಿ

‘ನಿಮಗೆ ನೋವುಂಟಾಗುತ್ತದೆ ಎಂಬ ವಿಚಾರ ಗೊತ್ತಿದ್ದರೆ ಸರಿಯಾದ ವ್ಯಕ್ತಿ ಅದನ್ನು ಮಾಡುವುದಿಲ್ಲ. ನೆನಪಿನಲ್ಲಿಡಿ’ ಎಂದು ಮೊದಲ ಪೋಸ್ಟ್​ನಲ್ಲಿ ರಾಜೋಶಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ ಮಾಡಿರುವ ಅವರು, ‘ಅತಿಯಾದ ಆಲೋಚನೆ ಮತ್ತು ಅನುಮಾನವು ಇದೀಗ ನಿಮ್ಮ ಮನಸ್ಸಿನಿಂದ ಹೊರಬರಲಿ. ಸ್ಪಷ್ಟತೆ ಗೊಂದಲವನ್ನು ಬದಲಾಯಿಸಬಹುದು. ನಿಮ್ಮ ಜೀವನದಲ್ಲಿ ಶಾಂತಿ ತುಂಬಲಿ. ನಾನು ಸಾಕಷ್ಟು ಬಲಶಾಲಿ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 60ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ

ಆಶಿಷ್ ವಿದ್ಯಾರ್ಥಿ ಭಾರತದ ಜನಪ್ರಿಯ ಪೋಷಕ ನಟ ಹಾಗೂ ವಿಲನ್​ಗಳಲ್ಲಿ ಒಬ್ಬರು. ಕನ್ನಡ ಸೇರಿದಂತೆ 11 ಭಾಷೆಗಳ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ಆಶಿಷ್ ವಿದ್ಯಾರ್ಥಿ ಕೋವಿಡ್ ಬಳಿಕ ಯೂಟ್ಯೂಬ್​ ವಿಡಿಯೋ ಮಾಡುತ್ತಿದ್ದಾರೆ. ಹಲವು ನಗರಗಳಿಗೆ ತೆರಳಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಈ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ