AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಕಾ ವಾಕಾ ಗಾಯಕಿ ಶಕೀರಾ ವಿರುದ್ಧ ಸ್ಪೇನ್​ನಲ್ಲಿ 117 ಕೋಟಿ ರೂ. ತೆರಿಗೆ ವಂಚಿಸಿರುವ ಆರೋಪ

ಅಂತರರಾಷ್ಟ್ರೀಯ ಟೂರ್ ಗಳ ಸಂದರ್ಭದಲ್ಲಿ ಗಳಿಸಿದ ಹಣ ಮತ್ತು ಯುಎಸ್ ನಲ್ಲಿ ನಡೆದ ‘ದಿ ವಾಯ್ಸ್’ ಕಾರ್ಯಕ್ರಮದಲ್ಲಿ ತೀರ್ಪುಗಾರಳಾಗಿ ಪಡೆದ ಸಂಭಾವನೆಯ ಮೇಲೆ ಬಾರ್ಸಿಲೋನಾದ ವಕೀಲರು ತೆರಿಗೆ ಕೇಳುತ್ತಿದ್ದಾರೆ. ಅ ಸಮಯದಲ್ಲಿ ತಾವು ಸ್ಪೇನ್ ದೇಶದ ಪೌರತ್ವ ಕೂಡ ಪಡೆದಿರಲಿಲ್ಲ ಎಂದು ಶಕೀರಾ ಹೇಳಿದ್ದಾರೆ.

ವಾಕಾ ವಾಕಾ ಗಾಯಕಿ ಶಕೀರಾ ವಿರುದ್ಧ ಸ್ಪೇನ್​ನಲ್ಲಿ 117 ಕೋಟಿ ರೂ. ತೆರಿಗೆ ವಂಚಿಸಿರುವ ಆರೋಪ
ಗಾಯಕಿ ಶಕೀರಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 5:59 PM

ಬಾರ್ಸಿಲೋನಾ: ವಿಶ್ವದ ಸೂಪರ್ ಸ್ಟಾರ್ ಗಾಯಕಿ ಶಕೀರಾಗೆ (Shakira) ಸ್ಲೇನ್ ನಲ್ಲಿ ಸಮಸ್ಯೆ ಎದುರಾಗಿದೆ. ಅವರ ವಿರುದ್ಧ ದಾಖಲಾಗಿರುವ ತೆರಿಗೆ ವಂಚನೆ ಆರೋಪಗಳನ್ನು ಇತ್ಯರ್ಥಗೊಳಿಸುವ ಒಪ್ಪಂದದ ಮನವಿಯೊಂದನ್ನು (plea) ‘ವಾಕಾ ವಾಕಾ’ ಗಾಯಕಿ ತಿರಸ್ಕರಿಸಿದ ಬಳಿಕ ಸ್ಪೇನ್ (Spain) ದೇಶದ ವಕೀಲರು ಅವರಿಗೆ ಸೆರೆವಾಸಕ್ಕೆ ಗುರಿ ಮಾಡುವ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಬಾರ್ಸಿಲೋನಾದ ವಕೀಲರು ಶಕೀರಾ ಮೇಲೆ 23 ಮಿಲಿಯನ್ ಯುರೋ (ಸುಮಾರು 194 ಕೋಟಿ ರೂ.) ದಂಡ ವಿಧಿಸುವಂತೆಯೂ ಕೋರ್ಟ್ ಗೆ ಮನವಿ ಮಾಡಲಿದ್ದಾರೆ. 2012 ಮತ್ತು 2014 ರ ನಡುವೆ 45-ವರ್ಷ-ವಯಸ್ಸಿನ ಗಾಯಕಿ ಸ್ಪ್ಯಾನಿಶ್ ತೆರಿಗೆ ಪ್ರಾಧಿಕಾರಕ್ಕೆ 14.5 ಮಿಲಿಯನ್ ಯೂರೋ (ಸುಮಾರು 117 ಕೋಟಿ ರೂ.) ತೆರಿಗೆ ವಂಚಿಸಿದ್ದಾರೆಂದು ಅರೋಪಿಸಲಾಗಿದೆ.

ತಮ್ಮ ಹಾಡುಗಳ 60 ಮಿಲಿಯನ್ ಗಳಿಗಿಂತ ಹೆಚ್ಚು ಅಲ್ಬಮ್ ಗಳನ್ನು ಮಾರಾಟ ಮಾಡಿರುವ ಶಕೀರಾ ಬುಧವಾರದಂದು ಬಾರ್ಸಿಲೋನಾ ವಕೀಲರ ಡೀಲನ್ನು ತಿರಸ್ಕರಿಸಿ, ‘ನಾನು ಅಮಾಯಕಳು ಅಂತ ಚೆನ್ನಾಗಿ ಗೊತ್ತಿದೆ,’ ಮತ್ತು ತಾವು ತಪ್ಪಿತಸ್ಥರಲ್ಲ ಅನ್ನೋದು ನಿಶ್ಚಿತವಾಗಿ ಸಾಬೀತಾಗುತ್ತದೆ ಎಂದು ತಮ್ಮ ವಕೀಲರ ಮುಖಾಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿಸಿದ್ದಾರೆ.

ನ್ಯಾಯಾಲಯಕ್ಕೆ ಇದುವರೆಗೆ ಔಪಚಾರಿಕ ಉಲ್ಲೇಖವನ್ನು ಘೋಷಿಸಲಾಗಿಲ್ಲ ಮತ್ತು ವಿಚಾರಣೆಯ ದಿನಾಂಕವನ್ನೂ ನಿಗದಿಗೊಳಿಸಿಲ್ಲ.

ಯಾವುದೇ ವಿಚಾರಣೆ ಆರಂಭಗೊಳ್ಳುವ ಮೊದಲು ಒಪ್ಪಂದವೊಂದಕ್ಕೆ ಬರುವ ಅವಕಾಶ ಇದೆಯೆಂದು ಶಕೀರಾ ವಕೀಲರು ಹೇಳಿದ್ದಾರೆ

ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ನ ಡಿಫೆಂಡರ್ ಜೆರಾರ್ಡ್ ಪಿಕೆ ಜೊತೆಗೆ ಪ್ರಣಯ ಸಾರ್ವಜನಿಕಗೊಂಡ ಬಳಿಕ ಶಕೀರಾ 2011 ರಲ್ಲಿ ಸ್ಪೇನ್ ಬಂದು ವಾಸ ಮಾಡಲಾನರಂಭಿಸಿದ್ದರೂ 2015ರವರೆಗೆ ಬಹಮಾಸ್ ದೇಶಕ್ಕೆ ತಮ್ಮ ತೆರಿಗೆಯನ್ನು ಪಾವತಿಸುತ್ತಿದ್ದರು. ಇಬ್ಬರು ಮಕ್ಕಳನ್ನು ಹೊಂದಿರುವ ಈ ದಂಪತಿ ಜೂನ್ ನಲ್ಲಿ ತಾವು ಬೇರ್ಪಟ್ಟಿರುವ ಸಂಗತಿಯನ್ನು ಹೊರಹಾಕಿದರು.

ಬಾರ್ಸಿಲೋನಾದ ವಕೀಲರರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದ್ದ ಶಕೀರಾ ತಮ್ಮ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಮತ್ತು ವಕೀಲರ ಕಚೇರಿ ತಮ್ಮ ವಿರುದ್ಧ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ ಎಂದು ಹೇಳಿದ್ದರು.

ಅಂತರರಾಷ್ಟ್ರೀಯ ಟೂರ್ ಗಳ ಸಂದರ್ಭದಲ್ಲಿ ಗಳಿಸಿದ ಹಣ ಮತ್ತು ಯುಎಸ್ ನಲ್ಲಿ ನಡೆದ ‘ದಿ ವಾಯ್ಸ್’ ಕಾರ್ಯಕ್ರಮದಲ್ಲಿ ತೀರ್ಪುಗಾರಳಾಗಿ ಪಡೆದ ಸಂಭಾವನೆಯ ಮೇಲೆ ಬಾರ್ಸಿಲೋನಾದ ವಕೀಲರು ತೆರಿಗೆ ಕೇಳುತ್ತಿದ್ದಾರೆ. ಅ ಸಮಯದಲ್ಲಿ ತಾವು ಸ್ಪೇನ್ ದೇಶದ ಪೌರತ್ವ ಕೂಡ ಪಡೆದಿರಲಿಲ್ಲ ಎಂದು ಶಕೀರಾ ಹೇಳಿದ್ದಾರೆ.

ಶಕೀರಾ 2013 ಮತ್ತು 2014 ರಲ್ಲಿ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿದ್ದರು. ಶಕೀರಾ ವಕೀಲರ ಪ್ರಕಾರ 2014 ರವರೆಗೆ ಅವರ ಗಳಿಕೆಯ ಹೆಚ್ಚಿನ ಭಾಗ ಅಂತರರಾಷ್ಟ್ರೀಯ ಟೂರ್ ಗಳ ಮೂಲಕ ಪ್ರಾಪ್ತವಾಗಿದ್ದು 2015 ರಲ್ಲೇ ಅವರು ಪೂರ್ಣ ಪ್ರಮಾಣದಲ್ಲಿ ಸ್ಪೇನ್ ಗೆ ಮೂವ್ ಆಗಿ ಅಲ್ಲಿನ ನಿಯಮಗಳ ಪ್ರಕಾರ ತೆರಿಗೆ ಪಾವತಿಸುತ್ತಿದ್ದಾರೆ.

ಸ್ಪ್ಯಾನಿಶ್ ತೆರಿಗೆ ಪ್ರಾಧಿಕಾರಕ್ಕೆ ತಾನು 17.2 ಮಿಲಿಯನ್ ಯೂರೋ (ಸುಮಾರು 139 ಕೋಟಿ ರೂ.) ತೆರಿಗೆ ಪಾವತಿಸಿದ್ದು ಈ ಬಾಬತ್ತಿನಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಶಕೀರಾ ಹೇಳಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳನ್ನು ಕೈ ಬಿಡಬೇಕೆಂದು ಶಕೀರಾ ಸಲ್ಲಿಸಿದ ಮನವಿಯೊಂದನ್ನು ಬಾರ್ಸಿಲೋನಾದ ನ್ಯಾಯಾಲಯವೊಂದು ಈ ವರ್ಷ ಮೇನಲ್ಲಿ ತಿರಸ್ಕರಿಸಿತು.

ಸಾರ್ವಜನಿಕ ವಲಯದ ವ್ಯಕ್ತಿಗಳು ವಿದೇಶಗಳಲ್ಲಿ ಕೂಡಿಟ್ಟ ಹಣ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಅಕ್ಟೋಬರ್ 2021ರಲ್ಲಿ ಹಣಕಾಸಿನ ವ್ಯವಹಾರಗಳ ಅತಿದೊಡ್ಡ ಸೋರಿಕೆ ಎಂದು ಹೆಸರಾದ ‘ಪಂಡೋರಾ ಪೇಪರ್ಸ್’ ನಲ್ಲಿ ಶಕೀರಾ ಹೆಸರು ಕೂಡ ಉಲ್ಲೇಖವಾಗಿತ್ತು.

ತಮ್ಮ ಹಾಡುಗಳಲ್ಲಿ ರಾಕ್ ಪ್ರಭಾವದ ಜೊತೆ ಲ್ಯಾಟಿನ್ ಮತ್ತು ಅರೇಬಿಕ್ ರಿದಮ್ ಗಳನ್ನು ಸಂಯೋಜನೆ ಮಾಡುವ ಶಕೀರಾ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಹಿಪ್ಸ್ ಡೋಂಟ್ ಲೈ,’ ‘ವ್ಹೆನ್ವೆರ್ ವ್ಹೇರೆವರ್’ ಮತ್ತು 2010 ಫಿಫಾ ವಿಶ್ವಕಪ್ ಅಧಿಕೃತ ಹಾಡು ‘ವಾಕಾ ವಾಕಾ’ ಮೊದಲಾದವುಗಳನ್ನು ವಿಶ್ವದಾದ್ಯಾಂತ ಜನ ಗುನುಗುನಿಸುತ್ತಾರೆ.