ಕರಣ್ ಹೇಳಿಕೆಗೆ ಕಂಗನಾ ರನೌತ್ ಪ್ರತಿಕ್ರಿಯೆ: ಮತ್ತೆ ಅದೇ ಮರುಕಳಿಸುವ ಭೀತಿ

Kangana-Karan: ತಮ್ಮ 'ಎಮರ್ಜೆನ್ಸಿ' ಸಿನಿಮಾ ನೋಡಲು ಕಾತರವಾಗಿರುವುದಾಗಿ ಹೇಳಿದ ಕರಣ್ ಜೋಹರ್​ ಹೇಳಿಕೆಗೆ ಕಂಗನಾ ತಿರುಗೇಟು ನೀಡಿದ್ದಾರೆ. ಕಳೆದ ಬಾರಿ ಕರಣ್ ಇದೇ ರೀತಿ ಹೇಳಿದಾಗ ನನ್ನ ವಿರುದ್ಧ ಆರೋಪಗಳ ಸುರಿಮಳೆಯಾಗಿತ್ತು, ಈಗ ನನಗೆ ಭಯವಾಗುತ್ತಿದೆ ಎಂದಿದ್ದಾರೆ.

ಕರಣ್ ಹೇಳಿಕೆಗೆ ಕಂಗನಾ ರನೌತ್ ಪ್ರತಿಕ್ರಿಯೆ: ಮತ್ತೆ ಅದೇ ಮರುಕಳಿಸುವ ಭೀತಿ
ಕರಣ್-ಕಂಗನಾ
Follow us
ಮಂಜುನಾಥ ಸಿ.
|

Updated on:Aug 22, 2023 | 9:11 PM

ಕಂಗನಾ ರನೌತ್ (Kangana Ranaut) ಅವಕಾಶ ಸಿಕ್ಕಾಗೆಲ್ಲ ಬಾಲಿವುಡ್ ಬಿಗ್ ಸೆಲೆಬ್ರಿಟಿಗಳ ಬಗ್ಗೆ ಆರೋಪ, ನಿಂದನೆಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲಿಯೂ ಸ್ವಜನಪಕ್ಷಪಾತಕ್ಕೆ (ನೆಪೊಟಿಸಂ) ಹೆಸರುವಾಸಿಯಾಗಿರುವ ಕರಣ್ ಜೋಹರ್ (Karan Johar) ವಿಷಯದಲ್ಲಂತೂ ಕಂಗನಾ ತುಸು ಆಕ್ರಮಣಕಾರಿಯಾಗಿಯೇ ದಾಳಿ ಮಾಡುತ್ತಾರೆ. ಕರಣ್ ಜೋಹರ್ ಸಹ ಆಗಾಗ್ಗೆ ಕಂಗನಾಗೆ ಕಟುವಾದ ಪ್ರತಿಕ್ರಿಯೆಗಳನ್ನೇ ನೀಡುತ್ತಾ ಬಂದಿದ್ದಾರೆ. ಆದರೆ ಇದೀಗ, ಕಂಗನಾರ ‘ಎಮರ್ಜೆನ್ಸಿ’ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಕರಣ್ ಹೇಳಿ ಆಶ್ಚರ್ಯ ಮೂಡಿಸಿದ್ದರು. ಕರಣ್​ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಮತ್ತೊಮ್ಮೆ ಕರಣ್ ಕಾಲೆಳೆದಿದ್ದಾರೆ.

ತಮ್ಮ ಸಿನಿಮಾ ನೋಡಲು ಉತ್ಸುಕರಾಗಿರುವ ಬಗ್ಗೆ ಕರಣ್ ನೀಡಿರುವ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಕಂಗನಾ ರನೌತ್, ”ಈ ಹಿಂದೆ ‘ಮಣಿಕರ್ಣಿಕಾ’ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಕರಣ್ ಹೇಳಿದ್ದರು. ಆ ಸಿನಿಮಾ ಬಿಡುಗಡೆ ಆಗುವಾಗ ನನ್ನ ಜೀವನದ ಅತ್ಯಂತ ಕೆಟ್ಟ ವೈಯಕ್ತಿಕ ದಾಳಿಯನ್ನು ವ್ಯಕ್ತಿತ್ವ ಹರಣ ಪ್ರಯತ್ನವನ್ನು ನಾನು ನೋಡಿದೆ. ಆ ಸಿನಿಮಾದಲ್ಲಿ ನಟಿಸಿರುವ ಬಹುತೇಕ ದೊಡ್ಡ ನಟರು ಹಣ ಪಡೆದು ನನ್ನ ಮೇಲೆ ನಿಂದನೆಗಳನ್ನು ಮಾಡಿದರು. ಸಿನಿಮಾ ಬಿಡುಗಡೆ ಆಗಿ ಒಳ್ಳೆಯ ಯಶಸ್ಸನ್ನು ಮೊದಲ ವಾರಾಂತ್ಯದಲ್ಲಿ ಪಡೆಯಿತಾದರೂ ನನ್ನ ಮೇಲೆ ನಡೆದ ವಾಗ್ದಾಳಿ ನನ್ನನ್ನು ದುಸ್ವಪ್ನದಂತೆ ಕಾಡಲು ಆರಂಭಿಸಿತು. ಈಗ ಮತ್ತೆ ಕರಣ್, ನನ್ನ ಸಿನಿಮಾ ನೋಡಲು ಉತ್ಸುಕನಾಗಿರುವದಾಗಿ ಹೇಳಿದ್ದಾರೆ. ನನಗೆ ಭಯ ಶುರುವಾಗಿದೆ” ಎಂದಿದ್ದಾರೆ.

ಕಂಗನಾ ರನೌತ್ ಟ್ವೀಟ್

ಕರಣ್ ಜೋಹರ್, ಸ್ಟಾರ್ ನಟರ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡಿ ಬಾಲಿವುಡ್​ನಲ್ಲಿ ನೆಪೋಟಿಸಂಗೆ ಬೆಂಬಲ ನೀಡುತ್ತಿದ್ದಾರೆ ಎಂದೂ. ಕರಣ್ ಜೋಹರ್ ಬಾಲಿವುಡ್ ಮಾಫಿಯಾದ ಸದಸ್ಯ, ಹೊರಗಿನಿಂದ ಬಾಲಿವುಡ್​ಗೆ ಬಂದವರನ್ನು ಸತತವಾಗಿ ತುಳಿಯುವ ಪ್ರಯತ್ನವನ್ನು ಕರಣ್ ಮಾಡುತ್ತಿದ್ದಾರೆ ಎಂದು ಸತತವಾಗಿ ಕಂಗನಾ ರನೌತ್ ಆರೋಪ ಮಾಡುತ್ತಲೇ ಬಂದಿದ್ದಾರೆ. ಕರಣ್ ಜೋಹರ್​ರ ‘ಕಾಫಿ ವಿತ್ ಕರಣ್’ ಶೋ ಅನ್ನೂ ಸಹ ಟೀಕಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ:ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ

ಇದೀಗ ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾದಲ್ಲಿ ಇಂದಿರಾ ಗಾಂದಿ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಸಿನಿಮಾವನ್ನು ಕಂಗನಾ ರನೌತ್ ಸ್ವತಃ ನಿರ್ದೇಶನ ಮಾಡಿದ್ದು, ಚಿತ್ರಕತೆಯನ್ನು ರಿತೇಶ್ ಶಾ ಚಿತ್ರಕತೆ ಬರೆದಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನೂ ಕಂಗನಾ ಅವರೇ ಹೂಡಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಕಂಗನಾ, ಇಂದಿರಾ ಗಾಂಧಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವುದು ಟೀಸರ್​ನಿಂದಲೇ ತಿಳಿದು ಬರುತ್ತಿದೆ.

ಇದರ ಹೊರತಾಗಿ ಕಂಗನಾ ರನೌತ್, ತಮಿಳಿನ ‘ಚಂದ್ರಮುಖಿ 2’ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಕಂಗನಾ ಒಳ್ಳೆಯ ನಟಿ ಹೌದು ಆದರೆ ಒಳ್ಳೆಯ ಡ್ಯಾನ್ಸರ್ ಅಲ್ಲವೆಂದು ಹಾಡು ನೋಡಿದ ಹಲವರು ಟೀಕಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Tue, 22 August 23