AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಕ್ಷನ್ ಚಿತ್ರಕ್ಕೆ ಸಹಿ ಹಾಕಿದ ಸಲ್ಮಾನ್ ಖಾನ್; ಕರಣ್ ಜೋಹರ್ ನಿರ್ಮಾಣದ ಈ ಚಿತ್ರಕ್ಕೆ 8 ತಿಂಗಳು ಶೂಟಿಂಗ್

ಸಲ್ಮಾನ್-ಕರಣ್​ ಮತ್ತೆ ಒಂದಾಗಲಿದ್ದಾರೆ ಎಂದು ಹಲವು ವರ್ಷಗಳ ಹಿಂದೆಯೇ ಸುದ್ದಿ ಆಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಫೈನಲ್ ಆಗಲೇ ಇಲ್ಲ. ಈಗ ಇದಕ್ಕೆ ಮುಹೂರ್ತ ಕೂಡಿ ಬಂದಿದೆ.

ಆ್ಯಕ್ಷನ್ ಚಿತ್ರಕ್ಕೆ ಸಹಿ ಹಾಕಿದ ಸಲ್ಮಾನ್ ಖಾನ್; ಕರಣ್ ಜೋಹರ್ ನಿರ್ಮಾಣದ ಈ ಚಿತ್ರಕ್ಕೆ 8 ತಿಂಗಳು ಶೂಟಿಂಗ್
ಸಲ್ಮಾನ್ ಖಾನ್-ಕರಣ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 08, 2023 | 11:21 AM

ಕರಣ್ ಜೋಹರ್ (Karan Johar) ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಿಂದ ಸಾಧಾರಣ ಗೆಲುವು ಕಂಡಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದಿಂದ ಸಲ್ಮಾನ್ ಖಾನ್ (Salman Khan) ಸೋಲು ಕಂಡಿದ್ದಾರೆ. ಈಗ ಇಬ್ಬರೂ ಹೊಸ ಸಿನಿಮಾಗಾಗಿ ಒಂದಾಗುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅಷ್ಟೇ ಅಲ್ಲ ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ಮೂಡಿ ಬರಲಿದೆ ಎಂದು ತಿಳಿದು ಬಂದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾದ ಕೆಲಸಗಳು ಈ ವರ್ಷ ನವೆಂಬರ್​ನಲ್ಲಿ ಆರಂಭ ಆಗಲಿದೆ.

ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕರಣ್ ಜೋಹರ್ ನಿರ್ಮಾಣದ ‘ಕುಚ್ ಕುಚ್ ಹೋತಾ ಹೈ’ (1998) ಚಿತ್ರದಲ್ಲಿ ಸಲ್ಲು ಅತಿಥಿ ಪಾತ್ರ ಮಾಡಿದ್ದರು. ಇವರಿಬ್ಬರೂ ಒಟ್ಟಾಗಿ ಕೆಲಸ ಮಾಡಿದ ಮೊದಲ ಹಾಗೂ ಕೊನೆಯ ಸಿನಿಮಾ ಇದು. ಸಲ್ಮಾನ್-ಕರಣ್​ ಮತ್ತೆ ಒಂದಾಗಲಿದ್ದಾರೆ ಎಂದು ಹಲವು ವರ್ಷಗಳ ಹಿಂದೆಯೇ ಸುದ್ದಿ ಆಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಫೈನಲ್ ಆಗಲೇ ಇಲ್ಲ. ಈಗ ಇದಕ್ಕೆ ಮುಹೂರ್ತ ಕೂಡಿ ಬಂದಿದೆ.

ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ಚಿತ್ರಕ್ಕೆ ನಿರ್ದೇಶಕ ವಿಷ್ಣು ವರ್ಧನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. 2021ರ ಸೂಪರ್ ಹಿಟ್ ಸಿನಿಮಾ ‘ಶೇರ್ಷಾ’ ಚಿತ್ರವನ್ನು ವಿಷ್ಣು ವರ್ಧನ್ ನಿರ್ದೇಶನ ಮಾಡಿದ್ದರು. ಕಳೆದ ಆರು ತಿಂಗಳಿಂದ ಈ ಸಿನಿಮಾದ ಮಾತುಕತೆ ನಡೆಯುತ್ತಲೇ ಇತ್ತು. ಕೊನೆಗೂ ಈ ಚಿತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅವರು ಒಪ್ಪಿದ್ದಾರೆ. ಇವರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಕರಣ್ ಜೋಹರ್ ಅವರು ರೊಮ್ಯಾಂಟಿಕ್ ಚಿತ್ರಗಳನ್ನು ನಿರ್ಮಾಣ ಮಾಡೋಕೆ ಫೇಮಸ್. ಧರ್ಮ ಪ್ರೊಡಕ್ಷನ್ ಮೂಲಕ ಹಲವು ಪ್ರೇಮ ಕಥೆಗಳನ್ನು ಅವರು ನೀಡಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೂಡ ಇದೇ ಮಾದರಿಯಲ್ಲಿ ಮೂಡಿ ಬಂದಿತ್ತು. ಈಗ ಅವರು ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈ ವರ್ಷ ನವೆಂಬರ್​ನಿಂದ ಆರಂಭ ಆಗಲಿದೆ. ಹಲವು ಹಂತಗಳಲ್ಲಿ ಶೂಟಿಂಗ್ ನಡೆಯಲಿದೆ. ಒಟ್ಟೂ 8 ತಿಂಗಳು ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ. 2024ರ ಕ್ರಿಸ್​ಮಸ್​ಗೆ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

ಸಲ್ಮಾನ್ ಖಾನ್ ಅವರು ಸದ್ಯ ‘ಟೈಗರ್ 3’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ. ಯಶ್ ರಾಜ್ ಫಿಲ್ಮ್ಸ್​​ನ ಸ್ಪೈ ಯೂನಿವರ್ಸ್ ಅಡಿಯಲ್ಲಿ ಸಿನಿಮಾ ಸಿದ್ಧಗೊಂಡಿದೆ. ‘ಪಠಾಣ್​’ ಚಿತ್ರದ ನಾಯಕ ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರದ ಶೂಟಿಂಗ್ ಕೂಡ ಇತ್ತೀಚೆಗೆ ಪೂರ್ಣಗೊಂಡಿದೆ. ಈ ವರ್ಷ ದೀಪಾವಳಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ