ಅಂದುಕೊಂಡಂತೆ ನಡೆಯಲಿಲ್ಲ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮ್ಯಾಜಿಕ್; ಮೊದಲ ದಿನದ ಕಲೆಕ್ಷನ್ ಎಷ್ಟು?

ರಣವೀರ್ ಸಿಂಗ್, ಆಲಿಯಾ ಭಟ್ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ ಎಂದಾಗ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ಆದರೆ, ಅಂದುಕೊಂಡಷ್ಟು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕಲೆಕ್ಷನ್ ಮಾಡಿಲ್ಲ.

ಅಂದುಕೊಂಡಂತೆ ನಡೆಯಲಿಲ್ಲ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮ್ಯಾಜಿಕ್; ಮೊದಲ ದಿನದ ಕಲೆಕ್ಷನ್ ಎಷ್ಟು?
ರಣವೀರ್-ಆಲಿಯಾ
Follow us
|

Updated on: Jul 29, 2023 | 10:46 AM

ರಣವೀರ್ ಸಿಂಗ್ (Ranveer Singh) ಹಾಗೂ ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Kii Prem Kahaani) ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಒಂದಷ್ಟು ಮಂದಿ ಚಿತ್ರವನ್ನು ಮೆಚ್ಚಿದರೆ ಮತ್ತೊಂದಷ್ಟು ಮಂದಿ ಇದು ಟಿಪಿಕಲ್ ಬಾಲಿವುಡ್ ಸಿನಿಮಾ ಎಂದು ಕರೆದಿದ್ದಾರೆ. ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಲ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಕೇವಲ 11.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ರಣವೀರ್ ಸಿಂಗ್, ಆಲಿಯಾ ಭಟ್ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ ಎಂದಾಗ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ಆದರೆ, ಅಂದುಕೊಂಡಷ್ಟು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಇಂದು (ಜುಲೈ 29) ಹಾಗೂ ನಾಳೆ (ಜುಲೈ 30) ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಶುಕ್ರವಾರ ಮುಂಜಾನೆ ಸಂದರ್ಭದಲ್ಲಿ ಶೇ. 12, ಸಂಜೆ ವೇಳೆಗೆ ಶೇ. 20 ಹಾಗೂ ರಾತ್ರಿವೇಳೆ ಶೇ. 36.85 ತುಂಬಿತ್ತು. ಇಂದು ಹಾಗೂ ನಾಳೆ ಈ ಚಿತ್ರವನ್ನು ಎಷ್ಟು ಮಂದಿ ಕಣ್ತುಂಬಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರೇಟಿಂಗ್ ವಿಚಾರದಲ್ಲೂ ಸಿನಿಮಾ ಹಿಂದೆ ಬಿದ್ದಿದೆ. ಶನಿವಾರ ಮುಂಜಾನೆ 10:30ರ ವೇಳೆಗೆ ಈ ಸಿನಿಮಾ ಐಎಂಡಿಬಿಯಲ್ಲಿ 6.5/10 ಹಾಗೂ ಬುಕ್​ ಮೈ ಶೋನಲ್ಲಿ 7.3/10 ರೇಟಿಂಗ್ ಪಡೆದುಕೊಂಡಿದೆ. ಇದು ಕೂಡ ಚಿತ್ರದ ಹಿನ್ನಡೆಗೆ ಕಾರಣ ಆಗಬಹುದು.

ಇದನ್ನೂ ಓದಿ: ‘ನೀವು ಸಲಿಂಗ ಕಾಮಿ ತಾನೇ?’: ನೇರ ಪ್ರಶ್ನೆಗೆ ಉತ್ತರ ನೀಡಿದ ಕರಣ್​ ಜೋಹರ್​

ಅಚ್ಚರಿಯ ವಿಚಾರ ಎಂದರೆ ಕರಣ್​ ಜೋಹರ್ ಅವರು ಈ ಚಿತ್ರವನ್ನು ಸಕ್ಸಸ್ ಸಿನಿಮಾ ಎಂದು ಘೋಷಣೆ ಮಾಡಿಕೊಂಡಾಗಿದೆ. ಜುಲೈ 28ರಂದು ಕರಣ್ ಜೋಹರ್ ಮನೆಯಲ್ಲಿ ಸಕ್ಸಸ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಣಬೀರ್ ಕಪೂರ್, ಮನೀಷ್ ಮಲ್ಹೋತ್ರಾ ಮೊದಲಾದವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ