Salman Khan: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

Bigg Boss OTT season 2: ಸಲ್ಮಾನ್​ ಖಾನ್​ ಅವರಿಗೆ ಬಹಳ ಬೇಗ ಕೋಪ ಬರುತ್ತದೆ ಎಂಬುದು ನಿಜ. ಬಿಗ್​ ಬಾಸ್​ ಸ್ಪರ್ಧಿಗಳು ಮಿತಿ ಮೀರಿ ವರ್ತಿಸಿದಾಗ ಸಲ್ಮಾನ್​ ಖಾನ್​ ಸಿಟ್ಟು ಪ್ರದರ್ಶಿಸಿದ ಉದಾಹರಣೆ ಸಾಕಷ್ಟಿದೆ.

Salman Khan: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?
ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
|

Updated on: Jul 30, 2023 | 10:34 AM

ನಟ ಸಲ್ಮಾನ್​ ಖಾನ್​ (Salman Khan) ಅವರು ಸಿನಿಮಾ ಮಾತ್ರವಲ್ಲದೇ ಬಿಗ್​ ಬಾಸ್​ ನಿರೂಪಣೆ ಮಾಡುವ ಮೂಲಕವೂ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಅವರು ಈ ವರ್ಷದಿಂದ ಬಿಗ್​ ಬಾಸ್​ ಒಟಿಟಿ (Bigg Boss OTT season 2) ಆವೃತ್ತಿಗೂ ನಿರೂಪಕನಾಗಿದ್ದಾರೆ. ಕಳೆದ ವರ್ಷ ಕರಣ್​ ಜೋಹರ್​ ಅವರು ‘ಬಿಗ್​ ಬಾಸ್​ ಹಿಂದಿ ಒಟಿಟಿ’ ಶೋ ನಡೆಸಿಕೊಟ್ಟಿದ್ದರು. ಈ ಬಾರಿ ಸಲ್ಮಾನ್​ ಖಾನ್​ ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ನಿಭಾಯಿಸುತ್ತಿದ್ದಾರೆ. ಆದರೆ ಅವರು ಶೋನಿಂದ ಅರ್ಧಕ್ಕೆ ಹೊರನಡೆದಿದ್ದಾರೆ ಎಂಬ ವದಂತಿ ಹರಡಿತ್ತು. ಅದರಿಂದ ಸಲ್ಲು ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಆದರೆ ಸಲ್ಮಾನ್​ ಖಾನ್​ ಅವರು ಮತ್ತೆ ಬಿಗ್​ ಬಾಸ್ (Bigg Boss)​ ಒಟಿಟಿ ಶೋಗೆ ವಾಪಸ್​ ಬಂದಿದ್ದಾರೆ ಎಂಬುದು ಈಗ ಖಚಿತವಾಗಿದೆ.

ಸಲ್ಮಾನ್​ ಖಾನ್​ ಅವರಿಗೆ ಬಹಳ ಬೇಗ ಕೋಪ ಬರುತ್ತದೆ ಎಂಬುದು ನಿಜ. ಅನೇಕ ಸಂದರ್ಭಗಳಲ್ಲಿ ಅವರು ಕೂಗಾಡಿದ್ದುಂಟು. ಬಿಗ್​ ಬಾಸ್​ ಸ್ಪರ್ಧಿಗಳು ಮಿತಿ ಮೀರಿ ವರ್ತಿಸಿದಾಗ ಸಲ್ಮಾನ್​ ಖಾನ್​ ಅವರು ಸಿಟ್ಟು ಪ್ರದರ್ಶಿಸಿದ ಉದಾಹರಣೆ ಸಾಕಷ್ಟಿದೆ. ಇತ್ತೀಚೆಗೆ ಅವರು ಬಿಗ್​ ಬಾಸ್​ ಒಟಿಟಿ ಶೋ ನಿರೂಪಣೆ ಮಾಡುವಾಗ ಸಿಗರೇಟ್​ ಹಿಡಿದುಕೊಂಡಿದ್ದರು. ಅಲ್ಲದೇ, ಅವರ ಬಾಯಿಯಿಂದ ಕೆಲವು ಅಕ್ಷೇಪಾರ್ಹ ಪದಗಳು ಬಂದಿದ್ದವು. ನಂತರ ಅವರು ನಿರೂಪಣೆಯಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಹಬ್ಬಿತು.

ಇದನ್ನೂ ಓದಿ: Salman Khan: ವಂಶಿಕಾ ಮಾತ್ರವಲ್ಲ, ಸಲ್ಮಾನ್​ ಖಾನ್​ ಹೆಸರಲ್ಲೂ ನಡೆದಿದೆ ಮೋಸ; ಅಧಿಕೃಕವಾಗಿ ಹೇಳಿಕೆ ಬಿಡುಗಡೆ ಮಾಡಿದ ಸಲ್ಲು

ಈ ಘಟನೆ ಕುರಿತಂತೆ ಸುದ್ದಿ ಸಂಸ್ಥೆಯೊಂದಕ್ಕೆ ಸಲ್ಮಾನ್​ ಖಾನ್​ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಅಭಿಮಾನಿಗಳೇ ನನ್ನ ಪಾಲಿನ ಸಾಧನೆ ಮತ್ತು ಹೆಮ್ಮೆ. ಇಂದು ನಾನು ಏನಾಗಿದ್ದೇನೂ ಅದು ಅವರಿಂದಲೇ. ನನಗೆ ಕೋಪ ಬರುತ್ತದೆ ಮತ್ತು ನಾನು ಶೋನಿಂದ ಕೆಲವೊಮ್ಮೆ ಹೊರಬರುತ್ತೇನೆ ಎಂಬುದು ನಿಜ. ಆದರೆ ವೀಕೆಂಡ್​ ಕಾ ವಾರ್​ ಎಪಿಸೋಡ್​ನಲ್ಲಿ ನನ್ನನ್ನು ನೋಡಲು ತಾಳ್ಮೆಯಿಂದ ಕಾಯುವ ಅಭಿಮಾನಿಗಳಿಗಾಗಿ ನಾನು ವಾಪಸ್​ ಬರುತ್ತೇನೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ

ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಆ ಹಿನ್ನೆಲೆಯಲ್ಲಿ ಅವರು ಬುಲೆಟ್​ ಪ್ರೂಫ್​ ಕಾರುಗಳನ್ನು ಖರೀದಿಸಿದ್ದಾರೆ. ತಮ್ಮ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಂತ ಸಿನಿಮಾ ಮತ್ತು ನಿರೂಪಣೆ ಕೆಲಸಗಳಿಗೆ ಅವರು ಬ್ರೇಕ್​ ಹಾಕಿಲ್ಲ. ಎಂದಿನಂತೆ ಅವರು ಈ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಟೈಗರ್​ 3’ ಸಿನಿಮಾಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ