‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ?’: ಶಾರುಖ್ ಖಾನ್ ಕೇಳಿದ ಈ ಪ್ರಶ್ನೆಗೆ 30 ದಿನದಲ್ಲಿ ಸಿಗಲಿದೆ ಉತ್ತರ
Shah Rukh Khan New Movie: ಈವರೆಗೂ ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಶಾರುಖ್ ಖಾನ್ ಅವರು ಜನರನ್ನು ರಂಜಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದ್ದ ಉದಾಹರಣೆಯೂ ಇದೆ.
ನಟ ಶಾರುಖ್ ಖಾನ್ (Shah Rukh Khan) ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ. ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ?’ ಎಂಬ ಪ್ರಶ್ನೆಯನ್ನು ಅವರು ಅಭಿಮಾನಿಗಳ ಎದುರು ಇಟ್ಟಿದ್ದಾರೆ. ಹಾಗಂತ ಇದು ಅವರ ವೈಯಕ್ತಿಕ ಜೀವನಕ್ಕೆ ಅಥವಾ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಬದಲಿಗೆ, ಸಿನಿಮಾಗೆ ಸಂಬಂಧಿಸಿದ್ದು. ಹೌದು, ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಡಿಫರೆಂಟ್ ಗೆಟಪ್ಗಳಿವೆ. ಈವರೆಗೂ ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಶಾರುಖ್ ಖಾನ್ ಅವರು ಜನರನ್ನು ರಂಜಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದ್ದ ಉದಾಹರಣೆಯೂ ಇದೆ. ಈಗ ಅವರು ‘ಜವಾನ್’ (Jawan) ಸಿನಿಮಾದಲ್ಲೂ ನೆಗೆಟಿವ್ ರೋಲ್ ಮಾಡಿದ್ದಾರಾ ಎಂಬ ಅನುಮಾನ ಮೂಡುವ ರೀತಿಯಲ್ಲಿ ಈ ಪೋಸ್ಟ್ ಮಾಡಿದ್ದಾರೆ.
‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಬೋಳು ತಲೆಯ ಗೆಟಪ್ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಿವ್ಯೂ ವಿಡಿಯೋದಲ್ಲಿ ಆ ಲುಕ್ ಬಹಿರಂಗ ಆಗಿತ್ತು. ಈಗ ಅದೇ ಗೆಟಪ್ನ ಇನ್ನೊಂದು ಪೋಸ್ಟರ್ ಅನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ? ತಿಳಿದುಕೊಳ್ಳಲು ಇನ್ನು 30 ದಿನ ಇದೆ, ರೆಡಿನಾ’ ಎಂದು ಶಾರುಖ್ ಖಾನ್ ಅವರ ಬರೆದುಕೊಂಡಿದ್ದಾರೆ.
Main achha hoon ya bura hoon… 30 days to find out. Ready AH?#1MonthToJawan#Jawan releasing worldwide on 7th September 2023, in Hindi, Tamil & Telugu. pic.twitter.com/O47jh05lnj
— Shah Rukh Khan (@iamsrk) August 7, 2023
ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ‘ಜವಾನ್’ ಸಿನಿಮಾ ನಿರ್ಮಾಣ ಆಗಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರವನ್ನು ಮಾಡಲಾಗಿದೆ. ಕಲಾವಿದರ ಸಂಭಾವನೆಗಾಗಿ ನೂರಾರು ಕೋಟಿ ರೂಪಾಯಿ ಸುರಿಯಲಾಗಿದೆ. ಶಾರುಖ್ ಖಾನ್ ಜೊತೆ ವಿಜಯ್ ಸೇತುಪತಿ, ನಯನಾತಾರಾ, ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ ಮುಂತಾದವರು ಅಭಿನಯಿಸಿದ್ದಾರೆ. ಈ ಎಲ್ಲ ಕಲಾವಿದರಿಗೂ ಬಹುಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಜೋರಾಯ್ತು ‘ಜವಾನ್’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಅವರು ‘ಜವಾನ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಕಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ‘ಜವಾನ್’ ಮೂಲಕ ಬಾಲಿವುಡ್ನಲ್ಲೂ ಅವರು ಮೋಡಿ ಮಾಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳದ್ದು. ಸೆಪ್ಟೆಂಬರ್ 7ರಂದು ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ‘ಪಠಾಣ್’ ಚಿತ್ರದ ರೀತಿಯೇ ‘ಜವಾನ್’ ಕೂಡ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.