Sign In

By signing in or creating an account, you agree with Associated Broadcasting Company's Terms & Conditions and Privacy Policy.

‘500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಗದರ್​ 2’: ಭವಿಷ್ಯ ನುಡಿದ ಬಾಕ್ಸ್​ ಆಫೀಸ್​ ತಜ್ಞರು

ಮೊದಲ ದಿನವೇ ‘ಗದರ್​ 2’ ಸಿನಿಮಾ ಬರೋಬ್ಬರಿ 40.10 ಕೋಟಿ ರೂಪಾಯಿ ಮಾಡಿತು. ಆ ನಂತರ ಬಂದ ವೀಕೆಂಡ್​ ಮತ್ತು ರಜಾ ದಿನಗಳಲ್ಲಿ ಈ ಚಿತ್ರ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಬಹುತೇಕ ಎಲ್ಲ ಕಡೆಗಳಲ್ಲೂ ಹೌಸ್​ಪುಲ್​ ಪ್ರದರ್ಶನ ಆಗಿದೆ. ಸನ್ನಿ ಡಿಯೋಲ್​ ಅವರ ಅಪ್ಪಟ ಅಭಿಮಾನಿಗಳು ಎರಡು-ಮೂರು ಬಾರಿ ಸಿನಿಮಾ ನೋಡುತ್ತಿದ್ದಾರೆ.

‘500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಗದರ್​ 2’: ಭವಿಷ್ಯ ನುಡಿದ ಬಾಕ್ಸ್​ ಆಫೀಸ್​ ತಜ್ಞರು
ಗದರ್ 2
Follow us
ಮದನ್​ ಕುಮಾರ್​
|

Updated on: Aug 23, 2023 | 12:36 PM

ಬಾಲಿವುಡ್​ನ ಬಾಕ್ಸ್​ ಆಫೀಸ್​ನಲ್ಲಿ ಹೊಸ ಚೈತನ್ಯ ಮೂಡಿದೆ. ಅದಕ್ಕೆ ಕಾರಣ ‘ಗದರ್​ 2’ (Gadar 2) ಸಿನಿಮಾ. ಆಗಸ್ಟ್​ 11ರಂದು ಬಿಡುಗಡೆ ಆದ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾದಿಂದ ನಟ ಸನ್ನಿ ಡಿಯೋಲ್​ (Sunny Deol) ಅವರು ಭರ್ಜರಿ ಗೆಲವು ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನಾಗಾಲೋಟ ಮುಂದುವರಿಸಿದೆ. ಬಿಡುಗಡೆಯಾಗಿ 12 ದಿನಗಳು ಕಳೆದಿದ್ದರೂ ಕೂಡ ಸಿನಿಮಾದ ಕಲೆಕ್ಷನ್​ ಚೆನ್ನಾಗಿಯೇ ಆಗುತ್ತಿದೆ. ಹೊಸ ಸಿನಿಮಾಗಳ ರಿಲೀಸ್​ ನಡುವೆಯೂ ‘ಗದರ್​ 2’ ಚಿತ್ರ ಉತ್ತಮವಾಗಿ ಕಮಾಯಿ ಮಾಡಿದೆ. ಸದ್ಯಕ್ಕೆ ಈ ಚಿತ್ರದ ಗಳಿಕೆ 400 ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾ 500 ಕೋಟಿ ರೂಪಾಯಿ ಗಡಿ ಮುಟ್ಟಲಿದೆ ಎಂದು ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ (Taran Adarsh) ಅವರು ಭವಿಷ್ಯ ನುಡಿದಿದ್ದಾರೆ.

‘ಗದರ್​ 2’ ಸಿನಿಮಾ ಈ ಪರಿ ಕಲೆಕ್ಷನ್​ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಚಿತ್ರದಲ್ಲಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಅನಿಲ್​ ಶರ್ಮಾ ನಿರ್ದೇಶನ ಮಾಡಿದ್ದಾರೆ. 2001ರಲ್ಲಿ ಬಂದ ‘ಗದರ್​’ ಸಿನಿಮಾದ ಸೀಕ್ವೆಲ್​ ಆಗಿ ಈ ಚಿತ್ರ ಮೂಡಿಬಂದಿದೆ. ಇದರಲ್ಲಿನ ಆ್ಯಕ್ಷನ್​ ದೃಶ್ಯಗಳಿಗೆ ಅಭಿಮಾನಿಗಳು ಮನ ಸೋತಿದ್ದಾರೆ. ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಬೇರೆ ಸಿನಿಮಾಗಳ ಪೈಪೋಟಿ ನಡುವೆಯೂ ಉತ್ತಮವಾಗಿ ಕಲೆಕ್ಷನ್​ ಆಗುತ್ತಿದೆ.

‘ಗದರ್​ 2’ ಯಶಸ್ಸು ಸಹಿಸದ ಕಿಡಿಗೇಡಿಗಳು; ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ

ಮೊದಲ ದಿನವೇ ‘ಗದರ್​ 2’ ಸಿನಿಮಾ ಬರೋಬ್ಬರಿ 40.10 ಕೋಟಿ ರೂಪಾಯಿ ಮಾಡಿತು. ಆ ನಂತರ ಬಂದ ವೀಕೆಂಡ್​ ಮತ್ತು ರಜಾ ದಿನಗಳಲ್ಲಿ ಈ ಚಿತ್ರ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಬಹುತೇಕ ಎಲ್ಲ ಕಡೆಗಳಲ್ಲೂ ಹೌಸ್​ಪುಲ್​ ಪ್ರದರ್ಶನ ಆಗಿದೆ. ಸನ್ನಿ ಡಿಯೋಲ್​ ಅವರ ಅಪ್ಪಟ ಅಭಿಮಾನಿಗಳು ಎರಡು-ಮೂರು ಬಾರಿ ಸಿನಿಮಾ ನೋಡುತ್ತಿದ್ದಾರೆ. ಉತ್ತಮ ಬಾಯಿ ಮಾತಿನ ಪ್ರಚಾರ ಈ ಚಿತ್ರಕ್ಕೆ ಸಿಕ್ಕಿದೆ. ಈ ಎಲ್ಲ ಕಾರಣಗಳಿಂದಾಗಿ ‘ಗದರ್​ 2’ ಸಿನಿಮಾದ ಅಬ್ಬರ ಜೋರಾಗಿದೆ.

‘ಗದರ್ 2’ ಸಿನಿಮಾ ‘ಬಾಹುಬಲಿ 2’ ಮತ್ತು ‘ಪಠಾಣ್​’ ಸಿನಿಮಾದ ಕಲೆಕ್ಷನ್​ಗೆ ಸವಾಲು ಹಾಕಲಿದೆ. ವಿರೋಧಿಗಳಿಗೆಲ್ಲ ಈ ಸಿನಿಮಾ ಶಾಕ್​ ನೀಡುತ್ತಿದೆ. ಈಗ 400 ಕೋಟಿ ರೂಪಾಯಿ ದಾಡಿದೆ. ಈ ಸಿನಿಮಾ 500 ಕೋಟಿ ರೂಪಾಯಿ ಗಳಿಸಿದೆ ಎಂಬ ಭರವಸೆ ನನಗೆ ಇದೆ’ ಎಂದು ತರಣ್​ ಆದರ್ಶ್​ ಅವರು ಟ್ವೀಟ್​ ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಈ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರಿಂದ ಸನ್ನಿ ಡಿಯೋಲ್​ ಅವರ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ