AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದ’: ಗಂಡನ ಬಗ್ಗೆ ರಾಖಿ ಸಾವಂತ್ ಆರೋಪ

ಆದಿಲ್ ಖಾನ್​ ದುರಾನಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ರಾಖಿ ಸಾವಂತ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮಿಂದ ದೂರಾಗಿರುವ ಗಂಡನ ಬಗ್ಗೆ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ಅವರ ಸಂಸಾರದ ಗಲಾಟೆ ಈಗ ಮತ್ತೆ ಬೀದಿಗೆ ಬಂದಿದೆ. ಆದಿಲ್​ ಖಾನ್​ ಕೂಡ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ.

‘ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದ’: ಗಂಡನ ಬಗ್ಗೆ ರಾಖಿ ಸಾವಂತ್ ಆರೋಪ
ಆದಿಲ್​ ಖಾನ್​, ರಾಖಿ ಸಾವಂತ್​
ಮದನ್​ ಕುಮಾರ್​
|

Updated on: Aug 23, 2023 | 2:26 PM

Share

ನಟಿ ರಾಖಿ ಸಾವಂತ್​ (Rakhi Sawant) ಅವರು ಯಾವಾಗಲೂ ವಿವಾದದ ಮೂಲಕವೇ ಸುದ್ದಿ ಆಗುತ್ತಾರೆ. ಚಿತ್ರರಂಗದಲ್ಲಿ ಅವರಿಗೆ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವೈಯಕ್ತಿಕ ಜೀವನದ ವಿಚಾರಗಳು ಮೂಲಕ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಮೈಸೂರು ಮೂಲದ ಆದಿಲ್​ ಖಾನ್​ ದುರಾನಿ (Adil Khan Durrani) ಜೊತೆ ರಾಖಿ ಸಾವಂತ್​ ಮದುವೆ ಆಗಿದ್ದ ವಿಷಯ ಬಹಳ ದಿನಗಳ ಬಳಿಕ ಹೊರಬಿತ್ತು. ಆದರೆ ಅವರಿಬ್ಬರು ಹೆಚ್ಚು ದಿನಗಳ ಕಾಲ ಜೊತೆಯಾಗಿ ಸಂಸಾರ ಮಾಡಲಿಲ್ಲ. ಇಬ್ಬರ ನಡುವೆ ಕಿರಿಕ್​ ಉಂಟಾಯಿತು. ಅದರಿಂದ ಆದಿಲ್​ ಖಾನ್​ ಜೈಲಿಗೂ ಹೋಗಬೇಕಾಯಿತು. ಈಗ ಅವರು ಜೈಲಿನಿಂದ ಹೊರಬಂದಿದ್ದಾರೆ. ಆದಿಲ್​ ಖಾನ್​ ವಿರುದ್ಧ ರಾಖಿ ಸಾವಂತ್​ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ. ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದು ರಾಖಿ ಆರೋಪಿಸಿದ್ದಾರೆ.

ಆದಿಲ್ ಖಾನ್​ ದುರಾನಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ರಾಖಿ ಸಾವಂತ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮಿಂದ ದೂರಾಗಿರುವ ಗಂಡನ ಬಗ್ಗೆ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ಅವರ ಸಂಸಾರದ ಗಲಾಟೆ ಈಗ ಮತ್ತೆ ಬೀದಿಗೆ ಬಂದಿದೆ. ಆದಿಲ್​ ಖಾನ್​ ಕೂಡ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ. ಆಗ ಅವರು ರಾಖಿ ಸಾವಂತ್ ಮಾಡಿದ ಆರೋಪಗಳಿಗೆ ಉತ್ತರ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಬೆಂಬಲಿಸಿದ ರಾಖಿ ಸಾವಂತ್​​ಗೂ ಸಂಕಷ್ಟ; ಬಿಷ್ಣೋಯ್ ಗ್ಯಾಂಗ್​ನಿಂದ ಬಂತು ಎಚ್ಚರಿಕೆ

‘ಇಷ್ಟು ತಿಂಗಳ ಕಾಲ ಆದಿಲ್​ ಖಾನ್​ ದುರಾನಿ ಜೈಲಿನಲ್ಲಿ ಇದ್ದಿದ್ದು ನನ್ನ ಕಾರಣದಿಂದ ಅಲ್ಲ. ಆತನ ಇರಾನಿಯನ್ ಗರ್ಲ್​ಫ್ರೆಂಡ್​ ಅತ್ಯಾಚಾರದ ಕೇಸ್​ ಹಾಕಿದ್ದಳು. ನನಗೆ ಆತನ ಹೊಡೆದಿದ್ದ, ಟಾರ್ಚರ್​ ನೀಡಿದ್ದ. ಆ ಕಾರಣದಿಂದ ಅವನು ಜೈಲಿನಲ್ಲಿ ಇದ್ದಿದ್ದು 22 ದಿನ ಮಾತ್ರ. ಮನೆಯಲ್ಲಿ ಆತ ಬೇರೆ ಹುಡುಗಿಯರು ಮತ್ತು ಗಂಡಸರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನ್ನು ನಾನು ನೋಡಿದ್ದೇನೆ. ದುಬೈನಲ್ಲೂ ಅವನು ನನಗೆ ಹೊಡೆಯಲು ಪ್ರಯತ್ನಿಸಿದ. ಇಲ್ಲಿಯೂ ಕೂಡ. ಆದರೆ ನಾನು ಮೌನವಾಗಿದ್ದೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​

‘ಆತನ ಜೊತೆ ಇರಾನಿಯನ್​ ಪ್ರೇಯಸಿ 5 ವರ್ಷ ಇದ್ದಳು. ನನ್ನ ಜೊತೆ ಅವನ ಮದುವೆ ಆಗಿದೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ನನಗೂ, ಆಕೆಗೂ ಆತ ಸುಳ್ಳು ಹೇಳಿದ್ದ. ಆಕೆ ತನ್ನ ಸ್ನೇಹಿತೆ ಎಂದು ಹೇಳಿದ್ದ. ಬಿಗ್​ ಬಾಸ್​ಗೆ ಹೋಗಿ ರಾಖಿ ಸಾವಂತ್​ನನ್ನು ಭೇಟಿಯಾಗಿ ತಾನು ಫೇಮಸ್​ ಆಗಬೇಕು ಅಂತ ಬಯಸಿರುವುದಾಗಿ ಅವನು ತನ್ನ ಗರ್ಲ್​ಫ್ರೆಂಡ್​ ಬಳಿ ಹೇಳಿಕೊಂಡಿದ್ದ’ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಒಟ್ಟಿನಲ್ಲಿ ರಾಖಿ ಸಾವಂತ್​ ಅವರ ಮನೆಯ ರಂಪಾಟ ಮತ್ತೆ ಬೀದಿಗೆ ಬಂದಿದೆ. ಸಿನಿಮಾಗಳಲ್ಲಿ ರಾಖಿ ಸಾವಂತ್​ ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಅದರ ಬದಲು ಅವರು ಕೇವಲ ವಿವಾದಗಳಿಂದಲೇ ಪ್ರಚಾರ ಪಡೆಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.