Rakhi Sawant: ಸಲ್ಮಾನ್ ಖಾನ್ ಬೆಂಬಲಿಸಿದ ರಾಖಿ ಸಾವಂತ್​​ಗೂ ಸಂಕಷ್ಟ; ಬಿಷ್ಣೋಯ್ ಗ್ಯಾಂಗ್​ನಿಂದ ಬಂತು ಎಚ್ಚರಿಕೆ

ಸಲ್ಮಾನ್ ಖಾನ್​ಗೆ ಬೆದರಿಕೆ ಬಂದಿತ್ತು. ಎಲ್ಲರ ಎದುರು ಸಲ್ಲು ಕ್ಷಮೆ ಕೇಳಿದರೆ ಬಿಟ್ಟು ಬಿಡುವುದಾಗಿ ಬೆದರಿಕೆ ಪತ್ರದಲ್ಲಿತ್ತು. ಸಲ್ಮಾನ್ ಖಾನ್ ಪರ ರಾಖಿ ಮಾತನಾಡಿದ್ದರು. ಇದರಿಂದ ಅವರಿಗೆ ತೊಂದರೆ ಎದುರಾಗಿದೆ.

Rakhi Sawant: ಸಲ್ಮಾನ್ ಖಾನ್ ಬೆಂಬಲಿಸಿದ ರಾಖಿ ಸಾವಂತ್​​ಗೂ ಸಂಕಷ್ಟ; ಬಿಷ್ಣೋಯ್ ಗ್ಯಾಂಗ್​ನಿಂದ ಬಂತು ಎಚ್ಚರಿಕೆ
ಸಲ್ಮಾನ್​-ರಾಖಿ
Follow us
ರಾಜೇಶ್ ದುಗ್ಗುಮನೆ
|

Updated on: Apr 20, 2023 | 7:00 AM

ನಟ ಸಲ್ಮಾನ್ ಖಾನ್ (Salman Khan)  ಅವರಿಗೆ ಇತ್ತೀಚೆಗೆ ಸಾಕಷ್ಟು ಕೊಲೆ ಬೆದರಿಕೆ ಬರುತ್ತಿದೆ. ದೂರವಾಣಿ ಕರೆ, ಇ-ಮೇಲ್​, ಪತ್ರಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಈ ಕಾರಣಕ್ಕೆ ಸಲ್ಲುಗೆ ಭದ್ರತೆ ಹೆಚ್ಚಿಸಲಾಗಿದೆ. ಈಗ ಸಲ್ಮಾನ್ ಖಾನ್ ಬೆಂಬಲಿಸಿದ ನಟಿ ರಾಖಿ ಸಾವಂತ್​​ಗೂ ಸಂಕಷ್ಟ ಎದುರಾಗಿದೆ. ಈ ವಿಚಾರದಿಂದ ದೂರ ಇರುವಂತೆ ಅವರಿಗೆ ಎಚ್ಚರಿಸಲಾಗಿದೆ. ಇದನ್ನು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್​ನವರೇ ಮಾಡಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸಲ್ಮಾನ್ ಖಾನ್​ ಅವರನ್ನು ಬೆಂಬಲಿಸಲು ಹೋಗಿ ರಾಖಿ ತೊಂದರೆಗೆ ಸಿಲುಕಿದ್ದಾರೆ.

ಸಲ್ಮಾನ್ ಖಾನ್ ಅವರು ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿದ್ದರು. ಈ ಪ್ರಾಣಿಯನ್ನು ಬಿಷ್ಣೋಯ್ ಗ್ಯಾಂಗ್​ನವರು ಪೂಜಿಸುತ್ತಾರೆ. ಹೀಗಾಗಿ ಸಲ್ಲು ಕೃಷ್ಣಮೃಗ ಸಾಯಿಸಿದ ಬಗ್ಗೆ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ಗೆ ಸೇಡಿದೆ. ಸಲ್ಮಾನ್ ಖಾನ್ ಹತ್ಯೆ ಮಾಡಿ ಈ ಸೇಡನ್ನು ತೀರಿಸಿಕೊಳ್ಳಬೇಕು ಎಂಬುದು ಬಿಷ್ಣೋಯ್ ಗ್ಯಾಂಗ್ ನಿರ್ಧಾರ. ಈ ಮೊದಲು ಸಲ್ಲುನ ಹತ್ಯೆ ಮಾಡಲು ಅನೇಕ ಪ್ರಯತ್ನಗಳು ನಡೆದಿದ್ದವು. ಆದರೆ, ಸಾಧ್ಯವಾಗಿರಲಿಲ್ಲ. ಈಗ ಈ ಗ್ಯಾಂಗ್ ಮತ್ತೆ ಸಿಟ್ಟಿಗೆದ್ದಿದೆ. ಸಲ್ಮಾನ್ ಖಾನ್​ನ ಸಾಯಿಸಿಯೇ ತೀರುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದಿದೆ.

ಸಲ್ಮಾನ್ ಖಾನ್​ಗೆ ಬೆದರಿಕೆ ಬಂದಿತ್ತು. ಎಲ್ಲರ ಎದುರು ಸಲ್ಲು ಕ್ಷಮೆ ಕೇಳಿದರೆ ಬಿಟ್ಟು ಬಿಡುವುದಾಗಿ ಬೆದರಿಕೆ ಪತ್ರದಲ್ಲಿತ್ತು. ‘ಬಿಷ್ಣೋಯ್ ಸಮಾಜದವರ ಬಳಿ ಸಲ್ಮಾನ್ ಖಾನ್ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ’ ಎಂದು ರಾಖಿ ಸಾವಂತ್​ ತಿಂಗಳ ಹಿಂದೆ ಹೇಳಿಕೆ ನೀಡಿದ್ದರು. ಈಗ ಸಲ್ಲುಗೆ ಬಂದ ಹೊಸ ಬೆದರಿಕೆ ಪತ್ರದಲ್ಲಿ ರಾಖಿ ಸಾವಂತ್​ಗೂ ಎಚ್ಚರಿಕೆ ಬಂದಿದೆ.

ಇದನ್ನೂ ಓದಿ:  ‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ

ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಎರಡು ದಿನ ಮೊದಲು (ಏಪ್ರಿಲ್ 19) ಸಲ್ಲುಗೆ ಇ-ಮೇಲ್ ಮೂಲಕ ಬೆದರಿಕೆ ಪತ್ರ ಬಂದಿದೆ. ಅವರನ್ನು ಸಾಯಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ‘ಈ ವಿಚಾರದಿಂದ ಅವರಿಗೆ (ರಾಖಿ ಸಾವಂತ್​​) ಹೊರಗೆ ಉಳಿಯೋಕೆ ಹೇಳಿ’ ಎನ್ನುವ ಎಚ್ಚರಿಕೆಯನ್ನೂ ರವಾನಿಸಲಾಗಿದೆ.

ಇದನ್ನೂ ಓದಿ: ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಬುಲೆಟ್​ಪ್ರೂಫ್​ ಕಾರು ಖರೀದಿಸಿದ ಸಲ್ಮಾನ್​ ಖಾನ್; ಇದರ ಬೆಲೆ ಎಷ್ಟು?

ಈ ಮೊದಲು ರಾಖಿ ಸಾವಂತ್​ ಬಿಗ್ ಬಾಸ್​ಗೆ ಬಂದಿದ್ದರು. ಅದನ್ನು ನಿರೂಪಿಸಿದ ಸಲ್ಮಾನ್ ಖಾನ್ ಜೊತೆ ಅವರಿಗೆ ವಿಶೇಷ ಗೌರವ ಬಂದಿತ್ತು. ರಾಖಿ ಸಾವಂತ್ ತಾಯಿಗೆ ಅನಾರೋಗ್ಯ ಆದಾಗ ಸಲ್ಮಾನ್ ಖಾನ್ ಆರ್ಥಿಕ ಸಹಾಯ ಮಾಡಿದ್ದರು. ಈ ಕಾರಣದಿಂದಲೂ ಸಲ್ಲು ಮೇಲೆ ರಾಖಿಗೆ ವಿಶೇಷ ಪ್ರೀತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್