ಸಲ್ಮಾನ್ ಖಾನ್ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರು; ಇಡೀ ಥಿಯೇಟರ್ ಬುಕ್ ಮಾಡಿದ ಅಬ್ದು ರೋಜಿಕ್

ಸಲ್ಲು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಲಕ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈಗ ಅವರು ತಮ್ಮದೇ ಸ್ಟೈಲ್​ನಲ್ಲಿ ಥಿಯೇಟರ್​ಗೆ ಬರುವಂತೆ ಫ್ಯಾನ್ಸ್​ಗೆ ಆಹ್ವಾನ ನೀಡಿದ್ದಾರೆ.

ಸಲ್ಮಾನ್ ಖಾನ್ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರು; ಇಡೀ ಥಿಯೇಟರ್ ಬುಕ್ ಮಾಡಿದ ಅಬ್ದು ರೋಜಿಕ್
ಅಬ್ದು-ಸಲ್ಲು
Follow us
|

Updated on: Apr 18, 2023 | 12:04 PM

ನಟ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಏಪ್ರಿಲ್ 21ರಂದು ಸಿನಿಮಾ ತೆರೆಗೆ ಬರುತ್ತಿದೆ. ಸಲ್ಲು ಜೊತೆಗೆ ಪೂಜಾ ಹೆಗ್ಡೆ, ಶೆಹನಾಜ್ ಗಿಲ್​, ಪಲಕ್ ತಿವಾರಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮೂರು ದಿನ ಮೊದಲು ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಸಲ್ಮಾನ್ ಖಾನ್ ಅವರು ತಮ್ಮದೇ ಸ್ಟೈಲ್​ನಲ್ಲಿ ಸಿನಿಮಾ ನೋಡಿ ಎಂದು ಅಭಿಮಾನಿಗಳ ಬಳಿ ಕೋರಿದ್ದಾರೆ. ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬೀಳುತ್ತಿದ್ದಾರೆ.

2017ರಲ್ಲಿ ತೆರೆಗೆ ಬಂದ ‘ಟೈಗರ್ ಜಿಂದಾ ಹೈ’ ಚಿತ್ರವೇ ಕೊನೆ. ಇದಾದ ಬಳಿಕ ಸಲ್ಲು ದೊಡ್ಡ ಗೆಲುವು ಕಂಡಿಲ್ಲ. 2018ರಲ್ಲಿ ಬಂದ ‘ರೇಸ್ 3’ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿತು. ಇದಾದ ಬಳಿಕ ಬಂದ ಚಿತ್ರಗಳೆಲ್ಲವೂ ಸೋಲು ಕಂಡವು. ಈ ಕಾರಣಕ್ಕೆ ಸಲ್ಲು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಲಕ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ಚಿತ್ರಕ್ಕೆ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈಗ ಅವರು ತಮ್ಮದೇ ಸ್ಟೈಲ್​ನಲ್ಲಿ ಥಿಯೇಟರ್​ಗೆ ಬರುವಂತೆ ಫ್ಯಾನ್ಸ್​ಗೆ ಆಹ್ವಾನ ನೀಡಿದ್ದಾರೆ.

ತಮ್ಮ ಫೋಟೋನ ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ನೀಡಿದ್ದಾರೆ. ‘ಚಿಲ್ ಮಾಡಬೇಡಿ. ಕಿಸಿ ಕ ಭಾಯ್ ಕಿಸಿ ಕಿ ಜಾನ್ ಚಿತ್ರಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ನೀವು ಕಷ್ಟಪಟ್ಟು ಕೆಲಸ ಮಾಡದಿದ್ದರೆ, ನಿಮ್ಮ ಕುಟುಂಬ ಹೇಗೆ ಈ ಸಿನಿಮಾ ನೋಡುತ್ತದೆ? ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಟಿಕೆಟ್‌ಗಳನ್ನು ಖರೀದಿಸಿ’ ಎಂದು ಸಲ್ಲು ಕೋರಿದ್ದಾರೆ.

ಇದನ್ನೂ ಓದಿ: ‘ಜೀವ ಅಂತ ಶುರು ಆಗತ್ತೆ, ಆ ಮೇಲೆ ಜೀವ ತೆಗೀತಾರೆ’: ಕೈ ಕೊಟ್ಟ ಹುಡುಗಿಯರ ಬಗ್ಗೆ ಸಲ್ಮಾನ್​ ಓಪನ್​ ಮಾತು

ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ 16ರ ಸ್ಪರ್ಧಿ ಆಗಿದ್ದ ಅಬ್ದು ರೋಜಿಕ್ ಅವರು ‘ನಾನು ಇಡೀ ಥಿಯೇಟರ್ ಬುಕ್ ಮಾಡುತ್ತಿದ್ದೇನೆ. ನನ್ನ ಜೊತೆ ಸಿನಿಮಾ ನೋಡೋಕೆ ಯಾರೆಲ್ಲ ಬರುತ್ತೀರಿ’ ಎಂದು ಪ್ರಶ್ನೆ ಮಾಡಿದ್ದಾರೆ. ಅಬ್ದು ಅವರು ಈ ಮೊದಲಿನಿಂದಲೂ ಸಲ್ಲು ಫ್ಯಾನ್​. ಹೀಗಾಗಿ, ಅವರು ಥಿಯೇಟರ್ ಬುಕ್ ಮಾಡುತ್ತಿದ್ದಾರೆ. ಫರ್ಹಾದ್ ಸಮ್ಜಿ ಅವರು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ