ಆಲಿಯಾ ಸಿನಿಮಾ ನಿರ್ದೇಶನ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿಗೆ ಓವರ್ರೇಟೆಡ್ ಡೈರೆಕ್ಟರ್ ಎಂದಿದ್ದ ಮಹೇಶ್ ಭಟ್
ಓವರ್ರೇಟೆಡ್ ಸಿನಿಮಾ, ನಿರ್ದೇಶಕ ಹಾಗೂ ನಟಿಯ ಹೆಸರನ್ನು ಹೇಳುವಂತೆ ಕರಣ್ ಜೋಹರ್ ಕೇಳಿದರು. ಮಹೇಶ್ ಭಟ್ ಉತ್ತರಿಸಿದ್ದರು.
ಸಂಜಯ್ ಲೀಲಾ ಬನ್ಸಾಲಿ ಕೆಲಸದ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಅವರ ನಿರ್ದೇಶನದ ‘ಪದ್ಮಾವಾತ್’ ಮೊದಲಾದ ಚಿತ್ರಗಳು ಈಗಲೂ ಅನೇಕರ ಫೇವರಿಟ್ ಸಾಲಿನಲ್ಲಿದೆ. ಆದರೆ, ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಬನ್ಸಾಲಿ ಅವರನ್ನು ಓವರ್ರೇಟೆಡ್ ನಿರ್ದೇಶಕ ಎಂದು ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹೇಶ್ ಭಟ್ ಮಗಳು ಆಲಿಯಾ ಭಟ್ ಅವರು ಸಂಜಯ್ ಲೀಲಾ ಬನ್ಸಾಲಿ ಜೊತೆ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
‘ಕಾಫಿ ವಿತ್ ಕರಣ್’ ಶೋಗೆ ಅನೇಕರು ಬಂದು ಹೋಗಿದ್ದಾರೆ. ಇದು ವಿವಾದಾತ್ಮಕ ಶೋ. ಇಲ್ಲಿ ಅನೇಕ ವಿವಾದಾತ್ಮಕ ಪ್ರಶ್ನೆ ಕೇಳಲಾಗುತ್ತದೆ. ಕೆಲವರಿಗೆ ಅಶ್ಲೀಲ ಪ್ರಶ್ನೆಯೂ ಎದುರಾಗುತ್ತದೆ. ಕೆಲವರು ಮುಂದಾಗಬಹುದಾದ ವಿವಾದ ಗಮನಿಸಿ ಸುಮ್ಮನಾಗಿ ಬಿಡುತ್ತಾರೆ. ಆದರೆ, ಕೆಲವರು ನೇರವಾಗಿ ಉತ್ತರಿಸುತ್ತಾರೆ. ಒಮ್ಮೆ ಮಹೇಶ್ ಭಟ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕರಣ್ ಜೋಹರ್ ಒಂದಷ್ಟು ಪ್ರಶ್ನೆ ಕೇಳಿದ್ದರು.
ಓವರ್ರೇಟೆಡ್ ಸಿನಿಮಾ, ನಿರ್ದೇಶಕ ಹಾಗೂ ನಟಿಯ ಹೆಸರನ್ನು ಹೇಳುವಂತೆ ಕರಣ್ ಜೋಹರ್ ಕೇಳಿದರು. ಇದಕ್ಕೆ ಉತ್ತರಿಸಿದ ಮಹೇಶ್ ಭಟ್, ಬರ್ಫಿ, ಸಂಜಯ್ ಲೀಲಾ ಬನ್ಸಾಲಿ ಹಾಗೂ ಕಾಜೋಲ್ ಹೆಸರನ್ನು ಹೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಅನೇಕರು ‘ಕಾಫಿ ವಿತ್ ಕರಣ್ ಶೋ’ ಅನ್ನು ಓವರ್ ರೇಟೆಡ್ ಎಂದು ಕರೆದಿದ್ದಾರೆ. ಅಂದಹಾಗೆ, ಇದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ರಿಲೀಸ್ಗೂ ಮೊದಲೇ ನೀಡಿದ ಸಂದರ್ಶನ ಇದಾಗಿದೆ.
View this post on Instagram
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವಕ್ಕೆ ಮುದ್ದಿನ ಪತ್ನಿಗೆ 10 ಲಕ್ಷ ರೂ. ಬೆಲೆಯ ಬ್ಯಾಗ್ ಗಿಫ್ಟ್ ನೀಡಿದ ರಣಬೀರ್ ಕಪೂರ್
‘ಹೀರಾ ಮಂಡಿ’ ಹೆಸರಿನ ವೆಬ್ ಸೀರಿಸ್ ಡೈರೆಕ್ಷನ್ ಮಾಡೋಕೆ ಸಂಜಯ್ ಲೀಲಾ ಬನ್ಸಾಲಿ ರೆಡಿ ಆಗಿದ್ದಾರೆ. ಇದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಇದು ಬನ್ಸಾಲಿ ಪಾಲಿಗೆ ವಿಶೇಷ ಪ್ರಾಜೆಕ್ಟ್. ಏಕೆಂದರೆ, ಬೆಳ್ಳಿ ಪರದೆಯಲ್ಲಿ ಛಾಪು ಮೂಡಿಸಿರುವ ಅವರಿಗೆ ಇದು ಮೊದಲ ಒಟಿಟಿ ಪ್ರಾಜೆಕ್ಟ್. ಈ ವೆಬ್ ಸೀರಿಸ್ ಅನ್ನು ನೆಟ್ಫ್ಲಿಕ್ಸ್ ನಿರ್ಮಾಣ ಮಾಡುತ್ತಿದೆ. ಹೀರಾ ಮಂಡಿ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆಯಲ್ಲಿ ಸಾಗಲಿದೆ. ಇಡೀ ಕಥೆ ನಡೆಯುವುದು ಲಾಹೋರ್ನಲ್ಲಿ. ಘಟಾನುಘಟಿ ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀರಾ ಮಂಡಿ 7 ಎಪಿಸೋಡ್ಗಳಲ್ಲಿ ಮೂಡಿ ಬರುತ್ತಿದೆ. ಈ ಏಳು ಎಪಿಸೋಡ್ಗೆ ಬನ್ಸಾಲಿ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 35 ಕೋಟಿ. ಅಂದರೆ, ಒಂದು ಎಪಿಸೋಡ್ಗೆ ಅವರು ಪಡೆಯೋ ಸಂಭಾವನೆ 5 ಕೋಟಿ ರೂಪಾಯಿ. ಸದ್ಯ, ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ