‘ಜೀವ ಅಂತ ಶುರು ಆಗತ್ತೆ, ಆ ಮೇಲೆ ಜೀವ ತೆಗೀತಾರೆ’: ಕೈ ಕೊಟ್ಟ ಹುಡುಗಿಯರ ಬಗ್ಗೆ ಸಲ್ಮಾನ್​ ಓಪನ್​ ಮಾತು

The Kapil Sharma Show: ಸಲ್ಮಾನ್​ ಖಾನ್​ ಅವರ ಬದುಕಿನಲ್ಲಿ ಅನೇಕ ಹುಡುಗಿಯರ ಎಂಟ್ರಿ ಆಗಿತ್ತು. ಆದರೆ ಯಾರೂ ಮದುವೆ ಆಗುವ ಮನಸ್ಸು ಮಾಡಲಿಲ್ಲ.

‘ಜೀವ ಅಂತ ಶುರು ಆಗತ್ತೆ, ಆ ಮೇಲೆ ಜೀವ ತೆಗೀತಾರೆ’: ಕೈ ಕೊಟ್ಟ ಹುಡುಗಿಯರ ಬಗ್ಗೆ ಸಲ್ಮಾನ್​ ಓಪನ್​ ಮಾತು
ಸಲ್ಮಾನ್ ಖಾನ್Image Credit source: Sony Tv
Follow us
ಮದನ್​ ಕುಮಾರ್​
|

Updated on:Apr 14, 2023 | 6:01 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಈಗ 57 ವರ್ಷ ವಯಸ್ಸು. ಆದರೂ ಕೂಡ ಅವರಿಗೆ ಮದುವೆ ಆಗುವ ಮನಸ್ಸಿಲ್ಲ. ಅವರ ಸಮಕಾಲೀನ ಹೀರೋಗಳಾದ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ಆಮಿರ್​ ಖಾನ್​ ಮುಂತಾದವರು ಮದುವೆ-ಮಕ್ಕಳು ಅಂತ ಸಂಸಾರದಲ್ಲಿ ಬ್ಯುಸಿಯಾದರು. ಆದರೆ ಸಲ್ಮಾನ್​ ಖಾನ್​ ಮಾತ್ರ ಬ್ಯಾಚುಲರ್​ ಆಗಿಯೇ ಉಳಿದುಕೊಂಡಿದ್ದಾರೆ. ಸಲ್ಲು ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಎದುರಾಗುತ್ತದೆ. ಆ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕಂತೂ ಸಲ್ಮಾನ್​ ಖಾನ್​ ಮದುವೆ ಆಗುವ ಲಕ್ಷಣ ಕಾಣುತ್ತಿಲ್ಲ. ಈಗ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾದ ಬಿಡುಗಡೆಯ ತಯಾರಿಯಲ್ಲಿ ಅವರಿದ್ದಾರೆ. ರಿಯಲ್​ ಲೈಫ್​ನಲ್ಲಿ ‘ಜಾನ್​’ (ಜೀವ) ಎಂದು ಕರೆಯಲು ಯಾರಿಗೂ ಅವರು ಅಧಿಕಾರ ನೀಡಿಲ್ಲ! ‘ದಿ ಕಪಿಲ್​ ಶರ್ಮಾ ಶೋ’ (The Kapil Sharma Show) ವೇದಿಕೆಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್​ ಖಾನ್​ ಅವರ ಬದುಕಿನಲ್ಲಿ ಅನೇಕ ಹುಡುಗಿಯರ ಎಂಟ್ರಿ ಆಗಿತ್ತು. ಅನೇಕರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಯಾರೂ ಮದುವೆ ಆಗುವ ಮನಸ್ಸು ಮಾಡಲಿಲ್ಲ. ಜಾನ್​ ಎಂದು ಕರೆಸಿಕೊಂಡರೆ ಏನಾಗುತ್ತದೆ ಎಂಬುದನ್ನು ಸಲ್ಮಾನ್​ ಖಾನ್​ ವಿವರಿಸಿದ್ದಾರೆ. ‘ನಿಮ್ಮನ್ನು ಎಲ್ಲರೂ ಭಾಯ್​ ಅಂತ ಕರೆಯುತ್ತಾರೆ. ಆದರೆ ಜಾನ್​ ಎಂದು ಕರೆಯುವ ಅಧಿಕಾರ ಯಾರಿಗಾದರೂ ಕೊಟ್ಟಿದ್ದೀರಾ’ ಎಂದು ಸಲ್ಮಾನ್​ ಖಾನ್​ಗೆ ಕಪಿಲ್​ ಶರ್ಮ ಕೇಳಿದರು. ಅದಕ್ಕೆ ಸಲ್ಲು ನೀಡಿದ ಉತ್ತರ ಸಖತ್​ ಫನ್ನಿ ಆಗಿತ್ತು.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

‘ಜಾನ್​ (ಜೀವ) ಎಂದು ಕರೆಯುವ ಹಕ್ಕನ್ನು ಯಾರಿಗೂ ನೀಡಬಾರದು. ಮೊದಲು ಜಾನ್​ ಎನ್ನುತ್ತಾರೆ. ಆಮೇಲೆ ಜಾನ್​ ತೆಗೆಯುತ್ತಾರೆ. ನಿನ್ನ ಜೊತೆ ಇರಲು ನಂಗೆ ಬಹಳ ಸಂತೋಷ ಆಗುತ್ತದೆ ಎನ್ನುತ್ತಾರೆ. ಸ್ವಲ್ಪ ಸಮಯ ಕಳೆದ ಬಳಿಕ ಐ ಲವ್​ ಯೂ ಎನ್ನುತ್ತಾರೆ. ನಾವು ಬಲೆಗೆ ಬಿದ್ವಿ ಅಂತ ಗೊತ್ತಾದ ತಕ್ಷಣ ನಮ್ಮ ಜೀವನ ಹಾಳು ಮಾಡ್ತಾರೆ. ಜಾನ್​ ಎಂಬುದು ಒಂದು ಅಪೂರ್ಣ ಪದ. ಅದರ ಹಿಂದೆ ಇಡೀ ವಾಕ್ಯ ಅಡಗಿರುತ್ತದೆ. ಮೊದಲು ನಿನ್ನ ಜಾನ್​ ತೆಗೆಯುತ್ತೇನೆ. ನಂತರ ಬೇರೆಯವನನ್ನು ಜಾನ್​ ಮಾಡಿಕೊಳ್ಳುತ್ತೇನೆ. ಆಮೇಲೆ ಅವನ ಜಾನ್​ ಕೂಡ ತೆಗೆಯುತ್ತೇನೆ ಎಂಬುದು ಅದರ ಪೂರ್ಣ ಅರ್ಥ ಆಗಿರಬಹುದು’ ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ ಸಲ್ಮಾನ್​ ಖಾನ್​.

ಇದನ್ನೂ ಓದಿ: Salman Khan: ಈದ್​ಗೆ ಸಲ್ಮಾನ್​ ಖಾನ್​ ಕಡೆಯಿಂದ ಮನರಂಜನೆಯ ರಸದೌತಣ; ಇಲ್ಲಿದೆ ನೋಡಿ ಸ್ಯಾಂಪಲ್​

ಈದ್​ ಪ್ರಯುಕ್ತ ಏಪ್ರಿಲ್​ 21ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಒಂದು ಮುಖ್ಯ ಪಾತ್ರದಲ್ಲಿ ದಗ್ಗುಬಾಟಿ ವೆಂಕಟೇಶ್​ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:01 pm, Fri, 14 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ