Aryan Khan: ನಿಜಕ್ಕೂ ಆರ್ಯನ್ ಖಾನ್ ವ್ಯಕ್ತಿತ್ವ ಹೇಗೆ? ಶಾರುಖ್ ಮಗನ ನಿಜವಾದ ಮುಖ ತೆರೆದಿಟ್ಟ ಯುವ ನಟಿ

ಆರ್ಯನ್ ಖಾನ್ ಮೊದಲಾದವರ ಜೊತೆ ಪಲಕ್ ಸುತ್ತಾಟ ಮಾಡುತ್ತಿರುತ್ತಾರೆ. ಹೀಗಾಗಿ ಆರ್ಯನ್ ಖಾನ್ ಹೇಗೆ ಎಂಬುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ.

Aryan Khan: ನಿಜಕ್ಕೂ ಆರ್ಯನ್ ಖಾನ್ ವ್ಯಕ್ತಿತ್ವ ಹೇಗೆ? ಶಾರುಖ್ ಮಗನ ನಿಜವಾದ ಮುಖ ತೆರೆದಿಟ್ಟ ಯುವ ನಟಿ
ಆರ್ಯನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Apr 15, 2023 | 9:54 AM

ಸ್ಟಾರ್ ನಟರ ಮಕ್ಕಳಿಗೆ ಅಹಂ ಜಾಸ್ತಿ ಎನ್ನುವ ನಂಬಿಕೆ ಅನೇಕರದ್ದು. ಅಪ್ಪನ ಪ್ರಭಾವ ಹಾಗೂ ದುಡ್ಡಿದೆ ಎನ್ನುವ ಕಾರಣಕ್ಕೆ ಅವರು ಬೇಕಾಬಿಟ್ಟಿ ನಡೆದುಕೊಳ್ಳುತ್ತಾರೆ ಎನ್ನುವ ಆರೋಪ ಅನೇಕರದ್ದು. ಇದಕ್ಕೆ ಪೂರಕವಾಗಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಅವರು ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಪಾರ್ಟಿ ಮಾಡುತ್ತಿದ್ದಾಗ ಡ್ರಗ್ ಹೊಂದಿದ್ದ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಲಾಯಿತು. ಆದರೆ, ಕೋರ್ಟ್ ಅವರನ್ನು ನಿರಪರಾಧಿ ಎಂದು ಘೋಷಿಸಿತು. ಈ ಘಟನೆಯಿಂದ ಆರ್ಯನ್ ಖಾನ್ ಹೆಸರು ಹಾಳಾಯಿತು. ಅನೇಕರಿಗೆ ಶಾರುಖ್ ಬಗ್ಗೆ ಇದ್ದ ಗೌರವ ಕಡಿಮೆ ಆಯಿತು. ಹಾಗಾದರೆ ನಿಜಕ್ಕೂ ಆರ್ಯನ್ ಖಾನ್ ಹೇಗೆ? ಈ ಪ್ರಶ್ನೆಗೆ ನಟಿ ಪಲಕ್ ತಿವಾರಿ (Palak Tiwari) ಉತ್ತರ ಕೊಟ್ಟಿದ್ದಾರೆ.

ಪಲಕ್ ತಿವಾರಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ವಿಡಿಯೋ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್​ಗೆ ಅವರ ಎಂಟ್ರಿ ಆಗುತ್ತಿದೆ. ಅವರು ಆರ್ಯನ್ ಖಾನ್ ಮೊದಲಾದವರ ಜೊತೆ ಸುತ್ತಾಟ ಮಾಡುತ್ತಿರುತ್ತಾರೆ. ಹೀಗಾಗಿ ಆರ್ಯನ್ ಖಾನ್ ಹೇಗೆ ಎಂಬುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ.

ಇದನ್ನೂ ಓದಿ: ಸ್ಟಾರ್ ನಟಿಯ ತಂಗಿ ಜತೆ ಆರ್ಯನ್ ಖಾನ್ ಸುತ್ತಾಟ; ಪಾರ್ಟಿ ಫೋಟೋ ವೈರಲ್

‘ಆರ್ಯನ್ ಖಾನ್ ಹೇಗೆ ಕಾಣಿಸಿಕೊಳ್ಳುತ್ತಾರೋ ಹಾಗೆಯೇ ಇದ್ದಾರೆ. ಆರ್ಯನ್ ನಿಜವಾಗಲೂ ಸ್ವೀಟ್ ವ್ಯಕ್ತಿ. ಪಾರ್ಟಿಯಲ್ಲಿ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಬಳಿಕ ತಮ್ಮ ಪಾಡಿಗೆ ತಾವಿರುತ್ತಾರೆ. ಆ ವಿಷಯದಲ್ಲಿ ನಾನು ಕೂಡ ಹಾಗೆಯೇ. ಆರ್ಯನ್ ಖುಷಿಯಿಂದ ಎರಡು ಮಾತನಾಡಿ ಮೂಲೆಯಲ್ಲಿ ಹೋಗಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ​. ಆರ್ಯನ್‌ ಅವರದ್ದು ನಿಗೂಢ ವ್ಯಕ್ತಿತ್ವ ಎನಿಸುತ್ತದೆ. ಇದು ಆಕರ್ಷಣೆಯ ಭಾಗವೂ ಹೌದು’ ಎಂಬುದು ಪಲಕ್ ಮಾತು.

 ಸಲ್ಲು ಡ್ರೆಸ್​ಕೋಡ್ ಬಗ್ಗೆ ಪಲಕ್ ಮಾತು

‘ಅಂತಿಮ್​: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ಪಲಕ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು. ಆಯುಷ್ ಶರ್ಮಾ ನಟನೆಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಾರಣಕ್ಕೆ ಸಲ್ಲು ಕೆಲ ನಿಯಮ ತಂದಿದ್ದರು.

‘ಸಲ್ಮಾನ್ ಖಾನ್ ಅವರು ಸೆಟ್​​ನಲ್ಲಿ ಮಹಿಳೆಯರಿಗೆ ನಿಯಮ ತಂದಿದ್ದರು. ಸರಿಯಾಗಿರೋ ಡ್ರೆಸ್​ನ ಮಾತ್ರ ಹಾಕಬೇಕು. ಕತ್ತಿನ ಬಳಿ ಡ್ರೆಸ್​ ಸರಿಯಾಗಿ ಇರಬೇಕು. ದೇಹದ ಮುಖ್ಯ ಪಾರ್ಟ್ ಕವರ್ ಆಗಿರಬೇಕಿತ್ತು’ ಎಂದಿದ್ದಾರೆ ಪಲಕ್​. ಒಮ್ಮೆ ಪಲಕ್ ಸೆಟ್​ಗೆ ಹೊರಟಿದ್ದರು. ಅವರು ತೊಟ್ಟಿದ್ದ ಸಾಂಪ್ರದಾಯಿಕ ಬಟ್ಟೆ ನೋಡಿ ಅವರ ತಾಯಿ ಶ್ವೇತಾ ತಿವಾರಿಗೆ ಅಚ್ಚರಿ ಆಗಿತ್ತು. ಈ ಬಗ್ಗೆ ಕೇಳಿದಾಗ ಸಲ್ಲು ನಿಯಮದ ಬಗ್ಗೆ ಹೇಳಿದ್ದರು ಪಲಕ್​. ಇದರಿಂದ ಶ್ವೇತಾಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:14 am, Sat, 15 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ