Salman Khan Death Threat: ‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ

ಲಾರೆನ್ಸ್ ಬಿಷ್ಣೋಯ್ ದೊಡ್ಡ ಗ್ಯಾಂಗ್​​ಸ್ಟರ್​. ಗಾಯಕ ಸಿಧು ಮೂಸೇವಾಲ ಕೊಲೆಯ ಹಿಂದೆ ಈತನ ಕೈವಾಡ ಇದೆ ಎನ್ನಲಾಗಿದೆ. ಈಗ ಸಲ್ಮಾನ್​ನ ಕೊಲ್ಲಲು ಲಾರೆನ್ಸ್ ಪ್ಲ್ಯಾನ್ ಮಾಡಿಕೊಂಡಿದ್ದಾನೆ.

Salman Khan Death Threat: ‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ  ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Apr 11, 2023 | 11:54 AM

ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಬಿಟ್ಟೂ ಬಿಡದೆ ಕೊಲೆ ಬೆದರಿಕೆ ಎದುರಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಅವರನ್ನು ಮುಗಿಸಲು ಲಾರೆನ್ಸ್ ಬಿಷ್ಣೋಯ್ ತಂಡದವರು ಪ್ಲ್ಯಾನ್ ರೂಪಿಸಿದ್ದಾರೆ. ಸಲ್ಲುಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಹೋದಲ್ಲಿ ಬಂದಲ್ಲಿ ಅವರನ್ನು ಕಾಯುತ್ತಿದ್ದಾರೆ. ಮನೆ ಬಳಿ ಅಭಿಮಾನಿಗಳು ನೆರೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಏಪ್ರಿಲ್ 30ರಂದು ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ರಾಕಿ ಹೆಸರಿನ ವ್ಯಕ್ತಿ ಕರೆ ಮಾಡಿದ್ದಾನೆ. ಸಲ್ಲುಗೆ ಇದರಿಂದ ಮತ್ತಷ್ಟು ಸಂಕಟ ಎದುರಾಗಿದೆ.

ಲಾರೆನ್ಸ್ ಬಿಷ್ಣೋಯ್ ದೊಡ್ಡ ಗ್ಯಾಂಗ್​​ಸ್ಟರ್​. ಗಾಯಕ ಸಿಧು ಮೂಸೇವಾಲ ಕೊಲೆಯ ಹಿಂದೆ ಈತನ ಕೈವಾಡ ಇದೆ ಎನ್ನಲಾಗಿದೆ. ಈಗ ಸಲ್ಮಾನ್​ನ ಕೊಲ್ಲಲು ಲಾರೆನ್ಸ್ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣ ಕೃಷ್ಣ ಮೃಗವನ್ನು ಸಲ್ಮಾನ್ ಖಾನ್ ಬೇಟೆ ಆಡಿದ್ದು. ಬಿಷ್ಣೋಯ್ ಸಮುದಾಯದವರಿಗೆ ಕೃಷ್ಣ ಮೃಗ ದೇವರ ಸಮಾನ. ಅದನ್ನೇ ಸಲ್ಲು ಹತ್ಯೆ ಮಾಡಿದ್ದರಿಂದ ಲಾರೆನ್ಸ್​​ಗೆ ದ್ವೇಷ ಹುಟ್ಟಿದೆ. ಈ ಮೊದಲು ಸಲ್ಲುನ ಕೊಲ್ಲಲು ಪ್ಲ್ಯಾನ್ ನಡೆದಿತ್ತು. ಹೀಗಿರುವಾಗಲೇ ಸಲ್ಲುಗೆ ಹೊಸ ಬೆದರಿಕೆ ಕರೆ ಬಂದಿದೆ.

ಇದನ್ನೂ ಓದಿ: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್​ ಖಾನ್​, ರಾಮ್​ ಚರಣ್​, ವೆಂಕಟೇಶ್​; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು

ಸೋಮವಾರ (ಏಪ್ರಿಲ್ 10) ರಾತ್ರಿ 9 ಗಂಟೆ ಸುಮಾರಿಗೆ ಮುಂಬೈ ಪೊಲೀಸರ ಕಂಟ್ರೋಲ್​ ರೂಂಗೆ ಕರೆ ಬಂದಿದೆ. ಏಪ್ರಿಲ್ 30ರಂದು ಸಲ್ಲುನ ಹತ್ಯೆ ಮಾಡಲಾಗುವುದು ಎಂದು ಕರೆಯಲ್ಲಿ ಹೇಳಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸದ್ಯ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: 40 ಪರ್ಸೆಂಟ್​ ಡೀಲ್​ಗೆ ಒಪ್ಪಿಕೊಂಡ ಶಾರುಖ್​, ಸಲ್ಮಾನ್​? ಭರ್ಜರಿ ಲಾಭ ಮಾಡಲು ಸಜ್ಜಾದ ನಟರು

ಪ್ರಾಥಮಿಕ ತನಿಖೆ ಪ್ರಕಾರ ರಾಕಿ ಎಂಬಾತ ಜೋದ್​​ಪುರದವನು. ಈತನಿಗೂ ಲಾರೆನ್ಸ್​ ಬಿಷ್ಣೋಯ್ ಗುಂಪಿಗೂ ಸಂಬಂಧ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಕರೆಯಿಂದ ಸ್ಟಾರ್ ನಟನಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

 ಭದ್ರತೆ ದೃಷ್ಟಿಯಿಂದ ಹೊಸ ಕಾರು ಖರೀದಿಸಿದ ಸಲ್ಲು

ಸಲ್ಮಾನ್​ ಖಾನ್​ ಅವರು ತಮ್ಮ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹೊಸ ಬುಲೆಟ್​ಪ್ರೂಫ್​ ಕಾರು ಖರೀದಿಸಿದ್ದಾರೆ ಎಂದು ವರದಿ ಆಗಿದೆ. ನಿಸಾನ್​ ಪಟ್ರೋಲ್​ ಎಸ್​ಯುವಿ ಕಾರಿಗೆ ಅವರು ಬರೋಬ್ಬರಿ 2 ಕೋಟಿ ರೂಪಾಯಿ ನೀಡಿದ್ದಾರೆ. ಇತ್ತೀಚೆಗೆ ‘ನೀತಾ ಮುಕೇಶ್​​ ಅಂಬಾನಿ ಕಲ್ಚರಲ್​ ಸೆಂಟರ್​’ ಉದ್ಘಾಟನೆಗೆ ಇದೇ ಕಾರಿನಲ್ಲಿ ಸಲ್ಮಾನ್​ ಖಾನ್​ ಆಗಮಿಸಿದ್ದರು. ಭದ್ರತೆಯ ಜೊತೆಗೆ ಹಲವು ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ