AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಸ್ ಪ್ಯಾಕ್​ ವಿಎಫ್​ಎಕ್ಸ್ ಎಂದವರಿಗೆ ವೇದಿಕೆ ಮೇಲೆ ಶರ್ಟ್​ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್

Kisi Ka Bhai Kisi Ki Jaan Trailer: ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್​ ಪ್ಯಾಕ್​ ಉದ್ದೇಶಿಸಿ ಕೆಲವರು ಇದನ್ನು ವಿಎಫ್​ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ.

ಸಿಕ್ಸ್ ಪ್ಯಾಕ್​ ವಿಎಫ್​ಎಕ್ಸ್ ಎಂದವರಿಗೆ ವೇದಿಕೆ ಮೇಲೆ ಶರ್ಟ್​ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on:Apr 11, 2023 | 7:57 AM

Share

ಮುಖ್ಯಾಂಶಗಳು

  • ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್​ ವಿಡಿಯೋ ವೈರಲ್
  • ಏಪ್ರಿಲ್ 10 ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾದ ಟ್ರೇಲರ್ ಲಾಂಚ್ ನಡೆದಿದೆ
  • ವೇದಿಕೆ ಮೇಲೆ ಶರ್ಟ್​ ಬಿಚ್ಚಿ ತೋರಿಸಿದ ಸಲ್ಲು

ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ಹೀರೋಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೊವಿಡ್ ಸಂದರ್ಭದಲ್ಲಿ ರಿಲೀಸ್ ಆದ ಅವರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಬೆಳೆ ತೆಗೆಯಲು ವಿಫಲವಾದವು. ಈಗ ಕೊವಿಡ್​ ಕಡಿಮೆ ಆಗಿ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತಿವೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾ ರಿಲೀಸ್ ಆಗುತ್ತಿದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರ (Kisi Ka Bhai Kisi Ki Jaan) ಏಪ್ರಿಲ್ 21ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ಸಲ್ಲು ಸಿಕ್ಸ್ ಪ್ಯಾಕ್​ನಲ್ಲಿ ಮಿಂಚಿದ್ದಾರೆ. ಕೆಲವರು ಇದನ್ನು ವಿಎಫ್​ಎಕ್ಸ್ ಎಂದು ಕರೆದಿದ್ದಾರೆ. ಅವರಿಗೆ ಸಲ್ಲು ವೇದಿಕೆ ಮೇಲೆ ಉತ್ತರ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರು ವರ್ಕೌಟ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವಯಸ್ಸು 57 ದಾಟಿದರೂ ಅವರು ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರು ಜಿಮ್​ನಲ್ಲಿ ಸಮಯ ಕಳೆಯುತ್ತಾರೆ. ಈ ಕಾರಣಕ್ಕೆ ಅವರು ಬಾಡಿಯನ್ನು ಉತ್ತಮವಾಗಿ ಕಾಯ್ದುಕೊಂಡಿದ್ದಾರೆ. ಆದರೆ, ಕೆಲವರಿಗೆ ಈ ಬಗ್ಗೆ ಅನುಮಾನ ಇದೆ. ವೇದಿಕೆ ಮೇಲೆ ಈ ಅನುಮಾನವನ್ನು ಸಲ್ಮಾನ್ ಖಾನ್ ಬಗೆಹರಿಸಿದ್ದಾರೆ.

ಏಪ್ರಿಲ್ 10 ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಲ್ಮಾನ್ ಖಾನ್, ಚಿತ್ರದ ನಾಯಕಿ ಪೂಜಾ ಹೆಗ್ಡೆ ಮೊದಲಾದವರು ವೇದಿಕೆ ಏರಿದರು. ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್​ ಪ್ಯಾಕ್​ ಉದ್ದೇಶಿಸಿ ಕೆಲವರು ಇದನ್ನು ವಿಎಫ್​ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಶ್ರಮವಹಿಸಿ ಮಾಡಿದ ದೇಹ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: Salman Khan: ಈದ್​ಗೆ ಸಲ್ಮಾನ್​ ಖಾನ್​ ಕಡೆಯಿಂದ ಮನರಂಜನೆಯ ರಸದೌತಣ; ಇಲ್ಲಿದೆ ನೋಡಿ ಸ್ಯಾಂಪಲ್​

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರೇಕ್ಷಕರನ್ನೂ ಸೆಳೆಯುವ ಪ್ರಯತ್ನ ಕೂಡ ಆಗಿದೆ. ತೆಲುಗಿನ ಸ್ಟಾರ್​ ನಟ ದಗ್ಗುಬಾಟಿ ವೆಂಕಟೇಶ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ, ಜಗಪತಿ ಬಾಬು ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ. ತೆಲುಗು ಹುಡುಗಿ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ‘ಯೆಂಟಮ್ಮಾ..’ ಹಾಡಿನಲ್ಲಿ ರಾಮ್​ ಚರಣ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ಸಿನಿಮಾ ಹೈಪ್​ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Tue, 11 April 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More