‘ಇದು ಭಾರತ, ನಗ್ನತೆ ಪ್ರಸಾರ ನಿಲ್ಲಬೇಕು’: ಒಟಿಟಿ ಬಗ್ಗೆ ಅಸಮಾಧಾನ ಹೊರ ಹಾಕಿದ ಸಲ್ಮಾನ್ ಖಾನ್

‘ಒಟಿಟಿಗೆ ಸೆನ್ಸಾರ್​ಶಿಪ್ ಬೇಕು. ನಗ್ನತೆ, ಕೆಟ್ಟ ಪದಗಳ ಬಳಕೆ ನಿಲ್ಲಬೇಕು. ಸಣ್ಣ ಮಕ್ಕಳು ಕೂಡ ಮೊಬೈಲ್​ನಲ್ಲಿ ಈ ರೀತಿಯ ಕಾಂಟೆಂಟ್​​ನ ನೋಡುವ ಸಾಧ್ಯತೆ ಇರುತ್ತದೆ’ ಎಂದಿದ್ದಾರೆ ಸಲ್ಮಾನ್ ಖಾನ್.

‘ಇದು ಭಾರತ, ನಗ್ನತೆ ಪ್ರಸಾರ ನಿಲ್ಲಬೇಕು’: ಒಟಿಟಿ ಬಗ್ಗೆ ಅಸಮಾಧಾನ ಹೊರ ಹಾಕಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
Follow us
|

Updated on:Apr 06, 2023 | 3:15 PM

ನಟ ಸಲ್ಮಾನ್ ಖಾನ್ (Salman Khan) ಅವರು ವೃತ್ತಿ ಜೀವನದಲ್ಲಿ ತಮ್ಮದೇ ಆದ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅವರು ತೆರೆಮೇಲೆ ಲಿಪ್ ಲಾಕ್ ಮಾಡುವುದಿಲ್ಲ. ಅವರ ಸಿನಿಮಾಗಳಲ್ಲಿ ಅಸಭ್ಯ ದೃಶ್ಯಗಳಿಗೆ ಜಾಗ ಇರೋದಿಲ್ಲ. ಇದನ್ನು ಸಲ್ಲು ಈಗಲೂ ಫಾಲೋ ಮಾಡುತ್ತಿದ್ದಾರೆ. ಎಷ್ಟೇ ಕೋಟಿ ರೂಪಾಯಿ ಕೊಡುತ್ತೇನೆ ಎಂದರೂ ಸಲ್ಲು ಈ ನಿಯಮ ಮೀರೋದಿಲ್ಲ. ಈಗ ಸಲ್ಮಾನ್ ಖಾನ್ ಅವರು ಒಟಿಟಿ ಬಗ್ಗೆ ಮಾತನಾಡಿದ್ದಾರೆ. ಒಟಿಟಿಯಲ್ಲಿ ಪ್ರಸಾರ ಆಗುವ ಕಾಂಟೆಂಟ್​​ಗಳಿಗೆ ಯಾವುದೇ ಸೆನ್ಸಾರ್ ಇಲ್ಲದ ಕಾರಣ ಅಶ್ಲೀಲ ದೃಶ್ಯಗಳು ಹೇರಳವಾಗಿ ಸಿಗುತ್ತಿವೆ. ಇದನ್ನು ಸಲ್ಮಾನ್ ಖಾನ್ ಖಂಡಿಸಿದ್ದಾರೆ. ‘ಇದು ಭಾರತ. ನಗ್ನತೆಯ ಪ್ರಸಾರ ನಿಲ್ಲಬೇಕು’ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.

ಕಾರ್ಯಕ್ರಮ ಒಂದರಲ್ಲಿ ಒಟಿಟಿಯ ಒಳಿತು ಹಾಗೂ ಕೆಡಕುಗಳ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ‘ಒಟಿಟಿಗೆ ಸೆನ್ಸಾರ್​ಶಿಪ್ ಬೇಕು. ನಗ್ನತೆ, ಕೆಟ್ಟ ಪದಗಳ ಬಳಕೆ ನಿಲ್ಲಬೇಕು. ಸಣ್ಣ ಮಕ್ಕಳು ಕೂಡ ಮೊಬೈಲ್​ನಲ್ಲಿ ಈ ರೀತಿಯ ಕಾಂಟೆಂಟ್​​ನ ನೋಡುವ ಸಾಧ್ಯತೆ ಇರುತ್ತದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದನ್ನು ನೋಡುತ್ತೇನೆ ಎಂದು ನಿಮ್ಮ ಮಗಳು ಮೊಬೈಲ್​ ತೆಗೆದುಕೊಂಡು ಈ ರೀತಿಯದ್ದನ್ನು ನೋಡಿದರೆ ಅದನ್ನು ನೀವು ಇಷ್ಟಪಡುತ್ತೀರಾ? ಒಟಿಟಿಗೆ ಸೆನ್ಸಾರ್​ಶಿಪ್ ತಂದರೆ ವೀಕ್ಷಕರ ಸಂಖ್ಯೆ ಹೆಚ್ಚಲಿದೆ’ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ.

ಬಿಕಿನಿ, ಕಿಸ್ಸಿಂಗ್ ದೃಶ್ಯಗಳ ಬಗ್ಗೆಯೂ ಸಲ್ಲು ಅಸಮಾಧಾನ ಹೊರಹಾಕಿದ್ದಾರೆ. ‘ನೀವು ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುತ್ತೀರಿ. ದೇಹವನ್ನು ಎಕ್ಸ್​ಪೋಸ್ ಮಾಡುತ್ತೀರಿ. ಮನೆಗೆ ಹೋದಾಗ ನಿಮ್ಮ ಮನೆಯ ವಾಚ್​ಮನ್ ಕೂಡ ಅದನ್ನೇ ವೀಕ್ಷಿಸುತ್ತಿರುತ್ತಾನೆ. ಭದ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ನೀವು ಯಾವಾಗಾಲೂ ನಿಮ್ಮ ಗಡಿ ದಾಟಬಾರದು. ನಾವು ಇರೋದು ಭಾರತದಲ್ಲಿ’ ಎಂದು ಸಲ್ಲು ನೆನಪಿಸಿದ್ದಾರೆ.

ಇದನ್ನೂ ಓದಿ: ಈ ವಯಸ್ಸಲ್ಲೂ ಸಲ್ಮಾನ್ ಖಾನ್​ದು ಅದೆಂಥ ಫಿಟ್ನೆಸ್; ಸಿಕ್ಸ್ ಪ್ಯಾಕ್​ ಫೋಟೋ ನೋಡಿ ಫ್ಯಾನ್ಸ್ ಫಿದಾ

ಈ ಮೊದಲು ಒಟಿಟಿ ಕಾಂಟೆಂಟ್​ಗಳಿಗೆ ಸೆನ್ಸಾರ್​ ಆಗಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಪ್ರಕರಣ ಕೋರ್ಟ್​ಮೆಟ್ಟಿಲೇರಿತ್ತು ಕೂಡ. ಆದರೆ, ಅರ್ಜಿಯನ್ನು ರಿಜೆಕ್ಟ್ ಮಾಡಲಾಯಿತು. ‘ವೆಬ್​ ಸಿರೀಸ್​ಗಳಿಗೆ ಸೆನ್ಸಾರ್​ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್​ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್​ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:44 pm, Thu, 6 April 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್