ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ಅರ್ಜುನ್ ಕಪೂರ್ ಸಹಾಯ; ಭೇಷ್ ಎಂದ ನೆಟ್ಟಿಗರು
ಸಚಿನ್ ತೆಂಡುಲ್ಕರ್ ರೀತಿ ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ.
ನಟ ಅರ್ಜುನ್ ಕಪೂರ್ (Arjun Kapoor) ಅವರದ್ದು ಫಿಲ್ಮಿ ಕುಟುಂಬ. ಅವರ ತಂದೆ ಬೋನಿ ಕಪೂರ್ ಬಾಲಿವುಡ್ನಲ್ಲಿ ಪ್ರಭಾವಿ ನಿರ್ಮಾಪಕ. ಹಾಗಿದ್ದರೂ ಕೂಡ ಅರ್ಜುನ್ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಈ ನಡುವೆ ಅವರು ಮಲೈಕಾ ಅರೋರಾ ಜೊತೆಗಿನ ರಿಲೇಷನ್ಶಿಪ್ ಕಾರಣದಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಆದರೆ ಈಗ ಜನಮೆಚ್ಚುವಂತಹ ಒಂದು ಕಾರ್ಯವನ್ನು ಅರ್ಜುನ್ ಕಪೂರ್ ಮಾಡಿದ್ದಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್ (Anisha Rout) ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ. ಅನಿಶಾಗೆ ಈಗ 11 ವರ್ಷ ವಯಸ್ಸು. ಆಕೆಗೆ 18ರ ಪ್ರಾಯ ಆಗುವ ತನಕ ಕ್ರಿಕೆಟ್ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್ ಕಪೂರ್ ಪೂರೈಸಲಿದ್ದಾರೆ.
ಕ್ರಿಕೆಟ್ನಲ್ಲಿ ಮೊದಲಿನಿಂದಲೂ ಪುರುಷರ ಪ್ರಾಬಲ್ಯ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕೂಡ ಈ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯ ಬಹಳ ಇದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಲಕ್ಷಾಂತರ ಹುಡುಗಿಯರು ಇದ್ದಾರೆ. ಆದರೆ ಎಲ್ಲರಿಗೂ ಸೂಕ್ತ ತರಬೇತಿ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಅರ್ಜುನ್ ಕಪೂರ್ ಅವರು ಅನಿಶಾ ರಾವತ್ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್ ಕಪೂರ್; ವೈರಲ್ ಆಯ್ತು ಫೋಟೋ
ಸಚಿನ್ ತೆಂಡುಲ್ಕರ್ ರೀತಿ ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸಲು ಅವರಿಗೆ ಕಷ್ಟ ಆಗುತ್ತಿದೆ. ಈಗ ಅರ್ಜುನ್ ಕಪೂರ್ ಸಹಾಯ ಹಸ್ತ ಚಾಚಿರುವುದರಿಂದ ಅನಿಶಾ ಕನಸಿಗೆ ರೆಕ್ಕ ಬಂದಂತೆ ಆಗಿದೆ.
ಇದನ್ನೂ ಓದಿ: 20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್
ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅವರ ಜೀವನವನ್ನು ಆಧರಿಸಿ ‘ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾ ಮೂಡಿಬಂದಿತ್ತು. ಆ ಸಿನಿಮಾವನ್ನು ನೋಡಿದ ಬಳಿಕ ಅನಿಶಾಗೆ ಕ್ರಿಕೆಟ್ ಆಡುವ ಬಯಕೆ ಉಂಟಾಯಿತು. 10ನೇ ವಯಸ್ಸಿನಲ್ಲಿ ಆಕೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪರವಾಗಿ ಅಂಡರ್-15 ಮಹಿಳಾ ತಂಡದಲ್ಲಿ ಕ್ರಿಕೆಟ್ ಆಡಿದ್ದಾಳೆ. ಮೂರು ಹಾಫ್ ಸೆಂಚುರಿ ಬಾರಿಸಿದ್ದಾಳೆ. ಪ್ರಸ್ತುತ ಎಂಐಜಿ ಕ್ಲಬ್ ಪರವಾಗಿ ಓಪನಿಂಗ್ ಬ್ಯಾಟರ್ ಆಗಿ ಆಡುತ್ತಿದ್ದಾಳೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:17 pm, Tue, 11 April 23