Sign In

By signing in or creating an account, you agree with Associated Broadcasting Company's Terms & Conditions and Privacy Policy.

Yentamma Song: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್​ ಖಾನ್​, ರಾಮ್​ ಚರಣ್​, ವೆಂಕಟೇಶ್​; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು

Kisi Ka Bhai Kisi Ki Jaan: ‘ಯೆಂಟಮ್ಮಾ..’ ಹಾಡಿಗೆ ಪಾಯಲ್​ ದೇವ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಗೀತೆಯಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ.

Yentamma Song: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್​ ಖಾನ್​, ರಾಮ್​ ಚರಣ್​, ವೆಂಕಟೇಶ್​; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು
ರಾಮ್ ಚರಣ್, ಸಲ್ಮಾನ್ ಖಾನ್, ದಗ್ಗುಬಾಟಿ ವೆಂಕಟೇಶ್
Follow us
ಮದನ್​ ಕುಮಾರ್​
|

Updated on:Apr 04, 2023 | 1:53 PM

ಹಿಂದಿ ಚಿತ್ರರಂಗ ಮತ್ತು ದಕ್ಷಿಣ ಭಾರತದ ಸಿನಿಮಾರಂಗದ ನಡುವೆ ದೊಡ್ಡ ಪೈಪೋಟಿ ನಡೆಯುತ್ತಿರುವುದು ಗೊತ್ತೇ ಇದೆ. ಆದರೆ ಚಿತ್ರರಂಗದಲ್ಲಿ ಭಾಷೆಗಳ ಗಡಿ ಅಳಿಸಲು ಕೆಲವು ಸ್ಟಾರ್​ ನಟರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾದ ಹೊಸ ಹಾಡು ಮೂಡಿಬಂದಿದೆ. ‘ಯೆಂಟಮ್ಮಾ..’ ಎಂಬ ಈ ಸಾಂಗ್​ನಲ್ಲಿ ಸಲ್ಮಾನ್​ ಖಾನ್​ (Salman Khan) ಅವರು ಪಕ್ಕಾ ಸೌತ್​ ಇಂಡಿಯನ್​ ಶೈಲಿಯ ಕಾಸ್ಟ್ಯೂಮ್​ ಧರಿಸಿ ಮಿಂಚಿದ್ದಾರೆ. ಪಂಚೆಯಲ್ಲಿ ಅವರು ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಅವರಿಗೆ ಸಾಥ್​ ನೀಡಿರುವುದು ರಾಮ್​ ಚರಣ್​ (Ram Charan) ಹಾಗೂ ದಗ್ಗುಬಾಟಿ ವೆಂಕಟೇಶ್​. ಸದ್ಯ ಸಿನಿಪ್ರಿಯರ ವಲಯದಲ್ಲಿ ಈ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಸ್ಟಾರ್​ ನಟರ ಜೊತೆ ನಟಿ ಪೂಜಾ ಹೆಗ್ಡೆ ಕೂಡ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ.

ಸಲ್ಮಾನ್​ ಖಾನ್​ ಮತ್ತು ಪೂಜಾ ಹೆಗ್ಡೆ ನಟಿಸಿರುವ ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದ ಮೊದಲ ಹಾಡು ಕೆಲವು ಕಾರಣದಿಂದ ಟ್ರೋಲ್​ ಆಗಿತ್ತು. ಆದರೆ ಈಗ ‘ಯೆಂಟಮ್ಮಾ..’ ಸಾಂಗ್​ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಸಲ್ಮಾನ್​ ಖಾನ್​, ರಾಮ್​ ಚರಣ್​, ದಗ್ಗುಬಾಟಿ ವೆಂಕಟೇಶ್​ ಅವರು ಪಂಚೆ ಎತ್ತಿಕಟ್ಟಿ ಕುಣಿದಿದ್ದಾರೆ. ಪಾಯಲ್​ ದೇವ್​ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್​ ನೀಡುತ್ತಿದೆ. ಅಂದಹಾಗೆ, ರಾಮ್​ ಚರಣ್​ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಅವರು ಈ ಹಾಡಿನಲ್ಲಿ ಗೆಸ್ಟ್​ ಅಪಿಯರೆನ್ಸ್​ ನೀಡಿದ್ದಾರೆ ಅಷ್ಟೇ.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಈಗ 57 ವರ್ಷ ವಯಸ್ಸು; ಡೇಟಿಂಗ್​ ಇತಿಹಾಸ ದೊಡ್ಡದಿದೆ; ಶಾದಿ ಬಗ್ಗೆ ಮಾತೇ ಇಲ್ಲ

ಏಪ್ರಿಲ್​ 21ರಂದು ಈದ್​ ಹಬ್ಬದ ಪ್ರಯುಕ್ತ ‘ಕಿಸಿ ಕಿ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ಮಾಣವನ್ನೂ ಸಲ್ಮಾನ್​ ಖಾನ್​ ಅವರೇ ಮಾಡಿದ್ದಾರೆ. ಅವರ ಬ್ಯಾನರ್​ನಲ್ಲಿ ಸಖತ್​ ಅದ್ದೂರಿಯಾಗಿ ಈ ಚಿತ್ರ ಮೂಡಿಬಂದಿದೆ. ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದಾರೆ.

ಬೇರೆ ನಟರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಪರದೆಯಲ್ಲಿ ದರ್ಶನ ನೀಡಿದ್ದು ಬಿಟ್ಟರೆ 2022ರಲ್ಲಿ ಸಲ್ಮಾನ್​ ಖಾನ್​ ಅವರು ಯಾವುದೇ ಸಿನಿಮಾ ರಿಲೀಸ್​ ಆಗಲಿಲ್ಲ. ಹಾಗಾಗಿ ಬಹುದಿನಗಳ ಬಳಿಕ ಅವರ ಸಿನಿಮಾ ತೆರೆ ಕಾಣುತ್ತಿರುವುದರಿಂದ ಅಭಿಮಾನಿಗಳ ಮನದಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:53 pm, Tue, 4 April 23

ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ