AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಹಾಲಿವುಡ್ ಹೀರೋ ಜೊತೆಗಿನ ಕಿಸ್ಸಿಂಗ್ ಪ್ರಕರಣ; ಮುಂಬೈ ಕೋರ್ಟ್​ನಿಂದ ಶಿಲ್ಪಾ ಶೆಟ್ಟಿಗೆ ರಿಲೀಫ್

ಶಿಲ್ಪಾ ಶೆಟ್ಟಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್​ ನಟ ರಿಚರ್ಡ್​ ಗಿಯರ್​ ಅವರು ಕಾರ್ಯಕ್ರಮದಲ್ಲಿ ಶಿಲ್ಪಾಗೆ ಮುತ್ತಿಟ್ಟಿದ್ದರು.

Shilpa Shetty: ಹಾಲಿವುಡ್ ಹೀರೋ ಜೊತೆಗಿನ ಕಿಸ್ಸಿಂಗ್ ಪ್ರಕರಣ; ಮುಂಬೈ ಕೋರ್ಟ್​ನಿಂದ ಶಿಲ್ಪಾ ಶೆಟ್ಟಿಗೆ ರಿಲೀಫ್
ಶಿಲ್ಪಾ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on:Apr 04, 2023 | 12:22 PM

Share

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. ಇದರ ಜೊತೆಗೆ ಅವರು ಒಂದಷ್ಟು ವಿವಾದ ಕೂಡ ಮಾಡಿಕೊಂಡಿದ್ದಾರೆ. ಇದರಲ್ಲಿ 2007ರಲ್ಲಿ ನಡೆದ ಕಿಸ್ಸಿಂಗ್ ಪ್ರಕರಣ ಕೂಡ ಒಂದು. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ರಿಲೀಫ್ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮುಂಬೈನ ಸೆಷನ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈಗ ಈ ಪ್ರಕರಣದಲ್ಲಿ ತೀರ್ಪು ಬಂದಿದೆ. ಸೆಷನ್ ಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಶಿಲ್ಪಾಗೆ ರಿಲೀಫ್ ಸಿಕ್ಕಿದೆ.

ಅದು 2007ರ ಸಮಯ. ಶಿಲ್ಪಾ ಶೆಟ್ಟಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್​ ನಟ ರಿಚರ್ಡ್​ ಗಿಯರ್​ ಅವರು ಕಾರ್ಯಕ್ರಮದಲ್ಲಿ ಶಿಲ್ಪಾಗೆ ಮುತ್ತಿಟ್ಟಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಅಶ್ಲೀಲತೆ ಮೆರೆದಿದ್ದಾರೆ ಎಂದು ಆರೋಪಿಸಿ ಶಿಲ್ಪಾ ಶೆಟ್ಟಿ ವಿರುದ್ಧ ಕೇಸ್​ ದಾಖಲಾಗಿತ್ತು. ಕಳೆದ 16 ವರ್ಷಗಳಿಂದ ಈ ಪ್ರಕರಣ ಕೋರ್ಟ್​ನಲ್ಲಿಯೇ ಇತ್ತು. ಈಗ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್​ ಸಿಕ್ಕಿದೆ.

ಇದನ್ನೂ ಓದಿ: Shilpa Shetty: ‘ಕೆಡಿ’ ಸಹವಾಸ ಮಾಡಿದ ಶಿಲ್ಪಾ ಶೆಟ್ಟಿ; ಸತ್ಯವತಿ ಅವತಾರದಲ್ಲಿ ಬಳುಕುವ ಬಳ್ಳಿ

ಅಶ್ಲೀಲತೆ ತೋರಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ವಿರುದ್ಧ ರಾಜಸ್ಥಾನದಲ್ಲಿ ಎರಡು​ ಹಾಗೂ ಗಜಿಯಾಬಾದ್​ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಮುಂಬೈಗೆ ವರ್ಗಾಯಿಸಲು 2017ರಲ್ಲಿ ಸುಪ್ರೀಂಕೋರ್ಟ್​ ಅವಕಾಶ ನೀಡಿತ್ತು. ಈ ಪ್ರಕರಣಗಳನ್ನು ಕೈಬಿಡುವಂತೆ ಶಿಲ್ಪಾ ಅವರು ಅರ್ಜಿ ಸಲ್ಲಿಕೆ ಮಾಡಿದ್ದರು. ಕಳೆದ ವರ್ಷ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೇತಕಿ ಚವಾಣ್ ಅವರು ಪ್ರಕರಣವನ್ನು ರದ್ದು ಮಾಡಿದ್ದರು. ಇದನ್ನು ಸೆಷನ್​ಕೋರ್ಟ್​ನಲ್ಲಿ ಪ್ರಶ್ನೆ ಮಾಡಲಾಯಿತು. ಈಗ ಮ್ಯಾಜಿಸ್ಟ್ರೇಟ್​ ಕೋರ್ಟ್ ಆದೇಶವನ್ನು ಅವರು ಎತ್ತಿಹಿಡಿದ್ದಾರೆ.

ಇದನ್ನೂ ಓದಿ: ರಾಕೇಶ್​ ಬಾಪಟ್​​ನ ಮರೆತು ಮುಂದೆ ಸಾಗಿದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ; ಇಲ್ಲಿವೆ ಕ್ಯೂಟ್​ ಫೋಟೋಗಳು 

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಜೈಲಿಗೆ ಹೋಗಿ ಬಂದರು. ಪತಿ ಇಂಥ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದು ಶಿಲ್ಪಾ ಶೆಟ್ಟಿಗೆ ತುಂಬಾನೇ ಮುಜುಗರ ಆಗಿತ್ತು. ಆದರೆ, ಯಾವಾಗಲೂ ಅವರು ಪತಿ ಪರವಾಗಿ ನಿಂತಿದ್ದರು. ಶಿಲ್ಪಾ ಶೆಟ್ಟಿ ಅವರು ‘ಇಂಡಿಯನ್ ಪೊಲೀಸ್ ಫೋರ್ಸ್​’ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಇದನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:22 pm, Tue, 4 April 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?