Salman Khan: ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಬುಲೆಟ್​ಪ್ರೂಫ್​ ಕಾರು ಖರೀದಿಸಿದ ಸಲ್ಮಾನ್​ ಖಾನ್; ಇದರ ಬೆಲೆ ಎಷ್ಟು?

Nissan Patrol SUV: ಸುತ್ತಾಡುವಾಗ ಸಲ್ಮಾನ್​ ಖಾನ್​ ಅವರಿಗೆ ತೊಂದರೆ ಎದುರಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಅವರ ರಕ್ಷಣೆಗೆ ಬುಲೆಟ್​ಪ್ರೂಫ್​ ಕಾರು ತುಂಬ ಅಗತ್ಯ.

Salman Khan: ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಬುಲೆಟ್​ಪ್ರೂಫ್​ ಕಾರು ಖರೀದಿಸಿದ ಸಲ್ಮಾನ್​ ಖಾನ್; ಇದರ ಬೆಲೆ ಎಷ್ಟು?
ಸಲ್ಮಾನ್​ ಖಾನ್​, ನಿಸಾನ್​ ಪಟ್ರೋಲ್​ ಎಸ್​ಯುವಿ
Follow us
ಮದನ್​ ಕುಮಾರ್​
|

Updated on:Apr 07, 2023 | 6:21 PM

ನಟ ಸಲ್ಮಾನ್​ ಖಾನ್​ (Salman Khan) ಅವರು ಸಿನಿಮಾ ಮಾತ್ರವಲ್ಲದೇ ಇತರೆ ಅನೇಕ ಕಿರಿಕ್​ಗಳ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್​ ಬಿಷ್ಣೋಯ್​ ಬಹಿರಂಗವಾಗಿಯೇ ಬೆದರಿಕೆ ಹಾಕಿರುವುದು ಕೆಲವೇ ದಿನಗಳ ಹಿಂದೆ ಸುದ್ದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ಅವರು ತಮ್ಮ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗ ಅವರು ಹೊಸ ಬುಲೆಟ್​ಪ್ರೂಫ್​ ಕಾರು (Bulletproof Car) ಖರೀದಿಸಿದ್ದಾರೆ ಎಂದು ವರದಿ ಆಗಿದೆ. ನಿಸಾನ್​ ಪಟ್ರೋಲ್​ ಎಸ್​ಯುವಿ (Nissan Patrol SUV) ಕಾರಿಗೆ ಅವರು ಬರೋಬ್ಬರಿ 2 ಕೋಟಿ ರೂಪಾಯಿ ನೀಡಿದ್ದಾರೆ. ಇತ್ತೀಚೆಗೆ ‘ನೀತಾ ಮುಕೇಶ್​​ ಅಂಬಾನಿ ಕಲ್ಚರಲ್​ ಸೆಂಟರ್​’ ಉದ್ಘಾಟನೆಗೆ ಇದೇ ಕಾರಿನಲ್ಲಿ ಸಲ್ಮಾನ್​ ಖಾನ್​ ಆಗಮಿಸಿದ್ದರು. ಭದ್ರತೆಯ ಜೊತೆಗೆ ಹಲವು ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ.

ಲಾರೆನ್ಸ್​ ಬಿಷ್ಣೋಯ್​ ಮತ್ತು ಸಲ್ಮಾನ್​ ಖಾನ್​ ನಡುವಿನ ದ್ವೇಷ ಹಲವು ವರ್ಷಗಳದ್ದು. ಬಿಷ್ಣೋಯ್​ ಸಮುದಾಯದವರು ಪವಿತ್ರವೆಂದು ಪರಿಗಣಿಸುವ ಕೃಷ್ಣ ಮೃಗವನ್ನು ಸಲ್ಮಾನ್​ ಖಾನ್​ ಬೇಟೆ ಆಡಿದ್ದನ್ನು ಖಂಡಿಸಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಕತ್ತಿ ಮಸೆಯುತ್ತಿದ್ದಾನೆ. ಆತನ ಗ್ಯಾಂಗ್​ನಿಂದ ಈಗಾಗಲೇ ಸಲ್ಮಾನ್​ ಖಾನ್​ಗೆ ಅನೇಕ ಬಾರಿ ಬೆದರಿಕೆ ಬಂದಿದೆ. ಹಾಗಾಗಿ ಭದ್ರತೆ ಹೆಚ್ಚಿಸಿಕೊಳ್ಳುವುದು ಸಲ್ಮಾನ್​ ಖಾನ್​ ಪಾಲಿಗೆ ಅನಿವಾರ್ಯ ಆಗಿದೆ.

ಇದನ್ನೂ ಓದಿ: Yentamma Song: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್​ ಖಾನ್​, ರಾಮ್​ ಚರಣ್​, ವೆಂಕಟೇಶ್​; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇತ್ತೀಚೆಗೆ ಇಮೇಲ್ ಮೂಲಕ ಸಲ್ಮಾನ್​ ಖಾನ್​ಗೆ ಮತ್ತೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ನಟನ ಅಪಾರ್ಟ್​ಮೆಂಟ್​ ಎದುರು ಪೊಲೀಸರು ಭದ್ರತೆ ಹೆಚ್ಚಿಸಿದರು. ಸಲ್ಲು ಒಡಾಡುವಾಗ ಅವರಿಗೆ ತೊಂದರೆ ಎದುರಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಅವರ ರಕ್ಷಣೆಗೆ ಬುಲೆಟ್​ಪ್ರೂಫ್​ ಕಾರು ತುಂಬ ಅಗತ್ಯ. ಈ ಮೊದಲು ತಮ್ಮ ಬಳಿ ಇದ್ದ ಐಷಾರಾಮಿ ಕಾರುಗಳ ಬದಲಿಗೆ ಹೊಸ ಬುಲೆಟ್​ಪ್ರೂಫ್​ ಕಾರುಗಳನ್ನು ಬಳಸಲು ಸಲ್ಲು ಆರಂಭಿಸಿದ್ದಾರೆ.

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು

ನಿಸಾನ್​ ಪಟ್ರೋಲ್​ ಕಾರಿನಲ್ಲಿ ಬಿ6 ಮತ್ತು ಬಿ7 ಹಂತದ ಭದ್ರತೆ ಇದೆ. ಬಿ7 ಹಂತದಲ್ಲಿ 78 ಎಂಎಂ ದಪ್ಪದ ಬುಲೆಟ್​ಪ್ರೂಫ್​ ಗಾಜು ಅಳವಡಿಕೆ ಆಗಿದೆ. ಬಲು ಶಕ್ತಿಶಾಲಿ ರೈಫೆಲ್​ಗಳ ಬುಲೆಟ್​ ಕೂಡ ಇದರ ಒಳನುಗ್ಗಲು ಸಾಧ್ಯವಿಲ್ಲ. ಬರೋಬ್ಬರಿ 2 ಕೋಟಿ ರೂಪಾಯಿ ನೀಡಿ ಈ ಕಾರನ್ನು ಖರೀದಿಸಲಾಗಿದೆ. ಭಾರತದಲ್ಲಿ ಈ ಕಾರುಗಳ ಮಾರಾಟ ಆಗುತ್ತಿಲ್ಲ. ಹಾಗಾಗಿ ಸಲ್ಮಾನ್​ ಖಾನ್​ ಅವರು ವಿದೇಶದಿಂದ ಇದನ್ನು ಆಮದು ಮಾಡಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್​ ಖಾನ್​ ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಸಲ್ಲು ಜೋಡಿಯಾಗಿ ನಟಿಸಿದ್ದಾರೆ. ಏಪ್ರಿಲ್​ 21ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:21 pm, Fri, 7 April 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ