AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಶರ್ಮಾ ಕರಿಯರ್ ನಾಶ ಮಾಡಲು ಹೊರಟಿದ್ದ ಕರಣ್ ಜೋಹರ್; ‘ಅವರಿಗೆ ಅದೇ ಕೆಲಸ’ ಎಂದ ಕಂಗನಾ

2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅನುಷ್ಕಾ ಹಾಗೂ ಕರಣ್ ಒಂದೇ ವೇದಿಕೆ ಮೇಲಿದ್ದರು. ಈ ವೇಳೆ ಕರಣ್ ಈ ವಿಚಾರ ತೆರೆದಿಟ್ಟಿದ್ದರು.

ಅನುಷ್ಕಾ ಶರ್ಮಾ ಕರಿಯರ್ ನಾಶ ಮಾಡಲು ಹೊರಟಿದ್ದ ಕರಣ್ ಜೋಹರ್; ‘ಅವರಿಗೆ ಅದೇ ಕೆಲಸ’ ಎಂದ ಕಂಗನಾ
ಕರಣ್​-ಕಂಗನಾ
ರಾಜೇಶ್ ದುಗ್ಗುಮನೆ
|

Updated on: Apr 07, 2023 | 1:46 PM

Share

ಕರಣ್ ಜೋಹರ್ (Karan Johar) ಬಗ್ಗೆ ಯಾರು ಬೇಕಾದರೂ ನೆಗೆಟಿವ್ ಆಗಿ ಮಾತನಾಡಲಿ, ಅದಕ್ಕೆ ಕಂಗನಾ ಧ್ವನಿಗೂಡಿಸುತ್ತಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಕರಣ್ ಜೋಹರ್​​ನ ಕಂಡರೆ ಅವರಿಗೆ ಅಷ್ಟು ದ್ವೇಷ. ಹಾಗಂತ ಈ ಸಿಟ್ಟನ್ನು ಅವರು ಮುಚ್ಚಿಟ್ಟುಕೊಂಡಿಲ್ಲ. ಸಮಯ ಸಿಕ್ಕಾಗಲೆಲ್ಲ ಕರಣ್ ವಿರುದ್ಧ ಕಿಡಿಕಾರುತ್ತಲೇ ಇರುತ್ತಾರೆ. ಇತ್ತೀಚೆಗೆ ಕರಣ್ ಜೋಹರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ‘ಅನುಷ್ಕಾ ಶರ್ಮಾ ಅವರ ಕರಿಯರ್​ನ ನಾಶ ಮಾಡಬೇಕು ಎಂದುಕೊಂಡಿದ್ದೆ’ ಎಂಬುದಾಗಿ ಕರಣ್​ ಒಪ್ಪಿಕೊಂಡಿದ್ದರು. ಈ ವಿಡಿಯೋಗೆ ಕಂಗನಾ ಉತ್ತರ ನೀಡಿದ್ದಾರೆ.

2008ರಲ್ಲಿ ಬಂದ ಶಾರುಖ್ ಖಾನ್ ನಟನೆಯ ‘ರಬ್​ ನೇ ಬನಾದಿ ಜೋಡಿ’ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ಯಶ್ ಚೋಪ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋನ ಚಿತ್ರದ ನಿರ್ದೇಶಕ ಆದಿತ್ಯ ಚೋಪ್ರಾ ಅವರು ಕರಣ್​ ಜೋಹರ್​ಗೆ ತೋರಿಸಿದ್ದರಂತೆ. ಕರಣ್​ಗೆ ಅನುಷ್ಕಾ ಇಷ್ಟವಾಗಲೇ ಇಲ್ಲ. ಈ ಕಾರಣಕ್ಕೆ ಅವರು ಒಂದು ನಿರ್ಧಾರಕ್ಕೆ ಬಂದಿದ್ದರು.

2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅನುಷ್ಕಾ ಹಾಗೂ ಕರಣ್ ಒಂದೇ ವೇದಿಕೆ ಮೇಲಿದ್ದರು. ಈ ವೇಳೆ ಅವರು ಈ ವಿಚಾರ ತೆರೆದಿಟ್ಟಿದ್ದರು. ‘ಆದಿತ್ಯ ಚೋಪ್ರಾ ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ವೃತ್ತಿಜೀವನವನ್ನು ನಾಶಮಾಡಬೇಕು ಎಂದುಕೊಂಡಿದ್ದೆ. ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು’ ಎಂದು ಕರಣ್ ಜೋಹರ್ ಹೇಳಿದ್ದರು.

ಇದನ್ನೂ ಓದಿ: ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ

ಈ ವಿಡಿಯೋನ ಈಗ ಮತ್ತೆ ಶೇರ್ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಉತ್ತರಿಸಿರುವ ಕಂಗನಾ ಅವರು, ‘ಈ ಚಾಚಾ ಚೌಧರಿಗೆ ಇದೊಂದೇ ಕೆಲಸ’ ಎಂದಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಕಂಗನಾ ಈ ಪೋಸ್ಟ್ ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಮುಂಬೈನಲ್ಲಿ ಮಗಳ ಜೊತೆ ಗಣಪತಿ ದೇವರ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ; ಇಲ್ಲಿದೆ ಫೋಟೋ

ಇತ್ತೀಚೆಗೆ ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ ಅವರು, ಬಾಲಿವುಡ್​ನಿಂದ ನನ್ನ ಹೊರಗಿಡುವ ಪ್ರಯತ್ನ ಆಯಿತು ಎಂದು ಹೇಳಿದ್ದರು. ಈ ರೀತಿ ಮಾಡಿದ್ದು ಕರಣ್ ಜೋಹರ್ ಎನ್ನುವ ಆರೋಪವನ್ನು ಕಂಗನಾ ಮಾಡಿದ್ದರು. ಪ್ರಿಯಾಂಕಾ ಇತ್ತೀಚೆಗೆ ಮುಂಬೈಗೆ ಬಂದಿದ್ದಾರೆ. ಈ ವೇಳೆ ಪ್ರಿಯಾಂಕಾ ಅವರನ್ನು ಕರಣ್ ಹಗ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್