Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರ್​ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್​ಟಿಆರ್

Jr NTR: ‘ವಾರ್ 2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಸೀಕ್ವೆಲ್​ನಲ್ಲಿ ಹೃತಿಕ್​ ಜೊತೆ ಜೂನಿಯರ್ ಎನ್​ಟಿಆರ್ ಕೂಡ ನಟಿಸುತ್ತಿದ್ದಾರೆ.

‘ವಾರ್​ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್​ಟಿಆರ್
ಹೃತಿಕ್​-ಜೂನಿಯರ್ ಎನ್​ಟಿಆರ್
Follow us
ರಾಜೇಶ್ ದುಗ್ಗುಮನೆ
|

Updated on: Apr 07, 2023 | 7:50 AM

ಜೂನಿಯರ್ ಎನ್​ಟಿಆರ್ ಅವರ ನಟನೆಯ ‘ಆರ್​ಆರ್​ಆರ್​’ ಸಿನಿಮಾ (RRR Movie) ಯಶಸ್ಸು ಕಂಡಿತು. ಈ ಚಿತ್ರ ಹಿಟ್ ಆದ ಬೆನ್ನಲ್ಲೇ ಜೂನಿಯರ್​ ಎನ್​ಟಿಆರ್ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈ ಚಿತ್ರದ ಹಾಡು ‘ನಾಟು ನಾಟು..’ಗೆ ಆಸ್ಕರ್ ಗರಿ ಸಿಕ್ಕ ನಂತರದಲ್ಲಿ ಜೂನಿಯರ್ ಎನ್​ಟಿಆರ್ (Jr NTR) ಅವರನ್ನು ನೋಡುವ ರೀತಿ ಬದಲಾಗಿದೆ. ಅವರಿಗೆ ಮೊದಲಿಗಿಂತಲೂ ಹೆಚ್ಚಿನ ಗೌರವ ಸಿಗುತ್ತಿದೆ. ವಿಶ್ವಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಈಗ ಅವರು ‘ವಾರ್ 2’ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್ 2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಸೀಕ್ವೆಲ್​ನಲ್ಲಿ ಹೃತಿಕ್​ ಜೊತೆ ಜೂನಿಯರ್ ಎನ್​ಟಿಆರ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿ ಕೆಲವೇ ಕೆಲವು ಬಾಲಿವುಡ್ ಸ್ಟಾರ್​ಗಳು ​ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ಈ ವಿಚಾರ ಜೂನಿಯರ್ ಎನ್​ಟಿಆರ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ವರ್ಸಸ್​ ವಿರಾಟ್​ ಕೊಹ್ಲಿ; ಯಾರು ಗ್ರೇಟ್​ ಎಂಬ ವಿಚಾರದಲ್ಲಿ ಫ್ಯಾನ್ಸ್​ ವಾರ್​

‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸಿದ್ದಾರ್ಥ್​ ಆನಂದ್ ಅವರು ‘ವಾರ್ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ. ಸೀಕ್ವೆಲ್​ಗೆ ನಿರ್ದೇಶನ ಮಾಡುತ್ತಿರುವುದು ಅಯಾನ್ ಮುಖರ್ಜಿ. ಕಳೆದ ವರ್ಷ ತೆರೆಗೆ ಬಂದ ‘ಬ್ರಹ್ಮಾಸ್ತ್ರ’ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದರು. ಈಗ ಅವರು ಆ್ಯಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತೆರೆಗೆ ಬಂದ ಬಳಿಕವೇ ‘ಬ್ರಹ್ಮಾಸ್ತ್ರ 2’ ಹಾಗೂ ‘ಬ್ರಹ್ಮಾಸ್ತ್ರ 3’ ಸಿನಿಮಾ ಕೆಲಸಗಳಲ್ಲಿ ಅವರು ಸಂಪೂರ್ಣವಾಗಿ ತೊಡಗಿಕೊಳ್ಳೋ ಸಾಧ್ಯತೆ ಇದೆ.

ಇದನ್ನೂ ಓದಿ: ಗ್ರಾಫಿಕ್ಸ್ ವಿಚಾರದಲ್ಲಿ ಹೆದರಿದ ಜೂನಿಯರ್ ಎನ್​ಟಿಆರ್​; ಮಹತ್ವದ ನಿರ್ಧಾರ ತೆಗೆದುಕೊಂಡ ಟೀಂ

ಜೂನಿಯರ್ ಎನ್​ಟಿಆರ್​ ಅವರು ಕೊರಟಾಲ ಶಿವ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಅವರ 30ನೇ ಸಿನಿಮಾ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಇದಲ್ಲದೆ ಪ್ರಶಾಂತ್ ನೀಲ್ ಸಿನಿಮಾದಲ್ಲೂ ಜೂನಿಯರ್ ಎನ್​ಟಿಆರ್ ನಟಿಸುತ್ತಿದ್ದಾರೆ. ಈಗ ಅವರು ‘ವಾರ್ 2’ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ