AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಖಾನ್​ ವರ್ಸಸ್​ ವಿರಾಟ್​ ಕೊಹ್ಲಿ; ಯಾರು ಗ್ರೇಟ್​ ಎಂಬ ವಿಚಾರದಲ್ಲಿ ಫ್ಯಾನ್ಸ್​ ವಾರ್​

Shah Rukh Khan Vs Virat Kohli: ಶಾರುಖ್​ ಖಾನ್​ ಮತ್ತು ವಿರಾಟ್​ ಕೊಹ್ಲಿ ಅವರ ಕಾರ್ಯಕ್ಷೇತ್ರವೇ ಬೇರೆ ಬೇರೆ. ಇಬ್ಬರ ನಡುವೆ ಹೋಲಿಕೆಯೇ ಸರಿಯಲ್ಲ. ಆದರೂ ಕೂಡ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ.

ಶಾರುಖ್​ ಖಾನ್​ ವರ್ಸಸ್​ ವಿರಾಟ್​ ಕೊಹ್ಲಿ; ಯಾರು ಗ್ರೇಟ್​ ಎಂಬ ವಿಚಾರದಲ್ಲಿ ಫ್ಯಾನ್ಸ್​ ವಾರ್​
ಶಾರುಖ್ ಖಾನ್, ವಿರಾಟ್ ಕೊಹ್ಲಿ
ಮದನ್​ ಕುಮಾರ್​
|

Updated on:Mar 29, 2023 | 11:51 AM

Share

ಕ್ರಿಕೆಟರ್​ ವಿರಾಟ್​ ಕೊಹ್ಲಿ (Virat Kohli) ಮತ್ತು ನಟ ಶಾರುಖ್​ ಖಾನ್​ ನಡುವೆ ಯಾವುದೇ ವೈಮನಸ್ಸು ಇಲ್ಲ. ಆದರೆ ಅವರಿಬ್ಬರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ವಿರಾಟ್​ ಕೊಹ್ಲಿಯೇ ಹೆಚ್ಚು ಜನಪ್ರಿಯ​ ಎಂದು ಅವರ ಫ್ಯಾನ್ಸ್​ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಮ್ಮ ಹೀರೋನೇ ಗ್ರೇಟ್​ ಎಂದು ಶಾರುಖ್​ ಖಾನ್​ ಫ್ಯಾನ್ಸ್​ (Shah Rukh Khan Fans) ಕೂಗಾಡುತ್ತಿದ್ದಾರೆ. ಇದೇ ವಿಚಾರವಾಗಿ ಟ್ವಿಟರ್​​ನಲ್ಲಿ ಫ್ಯಾನ್ಸ್​ ವಾರ್​ ನಡೆಯುತ್ತಿದೆ. ತಮ್ಮ ಸೆಲೆಬ್ರಿಟಿಯೇ ಶ್ರೇಷ್ಠ ಎಂಬುದನ್ನು ಸಾಬೀತು ಮಾಡಲು ಅಭಿಮಾನಿಗಳು ಹಲವು ವಿಚಾರಗಳಲ್ಲಿ ಹೋಲಿಕೆ ಮಾಡುತ್ತಿದ್ದಾರೆ. ಬಗೆಬಗೆಯ ಮೀಮ್ಸ್​ ಮಾಡಿ ಹರಿಬಿಡಲಾಗುತ್ತಿದೆ. ಈ ಬಗ್ಗೆ ಶಾರುಖ್​ ಖಾನ್ (Shah Rukh Khan)​ ಮತ್ತು ವಿರಾಟ್​ ಕೊಹ್ಲಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಶಾರುಖ್​ ಖಾನ್​ ಮತ್ತು ವಿರಾಟ್​ ಕೊಹ್ಲಿ ಅವರ ಕಾರ್ಯಕ್ಷೇತ್ರವೇ ಬೇರೆ. ಒಬ್ಬರು ಸಿನಿಮಾದಲ್ಲಿ ಸೂಪರ್​ ಸ್ಟಾರ್, ಇನ್ನೊಬ್ಬರು ಕ್ರಿಕೆಟ್​ನಲ್ಲಿ ಸೂಪರ್​ ಸ್ಟಾರ್​. ಇಬ್ಬರ ನಡುವೆ ಹೋಲಿಕೆಯೇ ಸರಿಯಲ್ಲ. ಆದರೂ ಕೂಡ ಅಭಿಮಾನಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ. ಶಾರುಖ್​ ಖಾನ್​ ಅವರ ಜನಪ್ರಿಯ ಸಿನಿಮಾಗಳ ದೃಶ್ಯಗಳನ್ನು ತೋರಿಸಿ, ‘ಈ ಒಂದು ಸೀನ್​ಗೆ ವಿರಾಟ್​ ಕೊಹ್ಲಿಯ ಇಡೀ ಜೀವನ ಸಮ’ ಎಂದು ಕಿಂಗ್​ ಖಾನ್​ ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ವಿರಾಟ್​ ಕೊಹ್ಲಿ ಅವರ ಬಗ್ಗೆ ಅನೇಕ ಫುಟ್​ಬಾಲ್​ ಆಟಗಾರರು ಈ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಅದನ್ನೆಲ್ಲ ತಂದು ತೋರಿಸಿ, ‘ವಿರಾಟ್​ ಕೊಹ್ಲಿ ರೀತಿ ಶಾರುಖ್​ ಖಾನ್​ ಅವರು ಇಷ್ಟೆಲ್ಲ ದೊಡ್ಡವರಲ್ಲ’ ಎಂದು ಕೊಹ್ಲಿ ಫ್ಯಾನ್ಸ್​ ಗೇಲಿ ಮಾಡುತ್ತಿದ್ದಾರೆ. ‘ಗೂಗಲ್​ನಲ್ಲಿ ಜಗತ್ತಿನ ಬೆಸ್ಟ್​ ಕ್ರಿಕೆಟರ್​ ಎಂದು ಹುಡುಕಿದರೆ ಕೊಹ್ಲಿ ಹೆಸರು ಬರುತ್ತದೆ. ಆದರೆ ಜಗತ್ತಿನ ಬೆಸ್ಟ್​ ನಟ ಅಂತ ಹುಡುಕಿದರೆ ಶಾರುಖ್​ ಖಾನ್​ ಹೆಸರು ಬರುವುದಿಲ್ಲ’ ಎಂದು ಕೂಡ ವ್ಯಂಗ್ಯ ಮಾಡಲಾಗಿದೆ.

ಒಂದು ವೇಳೆ ವಿರಾಟ್​ ಕೊಹ್ಲಿ ಅವರು ಸಿನಿಮಾ ಕ್ಷೇತ್ರಕ್ಕೆ ಬಂದರೆ ಅವರು ಟಾಮ್​ ಕ್ರೂಸ್​ ರೀತಿ ಮಿಂಚುತ್ತಾರೆ. ಆದರೆ ಶಾರುಖ್​ ಖಾನ್​ ಅವರು ಕ್ರಿಕೆಟ್​ ಆಡಿದರೆ ಮೈದಾನದಲ್ಲೇ ಸುಸ್ತಾಗಿ ಬೀಳುತ್ತಾರೆ’ ಎಂದು ಹೀಯಾಳಿಸುವಂತಹ ಮೀಮ್​ ವೈರಲ್​ ಆಗಿದೆ.

ಅಭಿಮಾನಿಗಳ ಈ ಕಿತ್ತಾಟದ ಬಗ್ಗೆ ಕೆಲವರು ಛೀಮಾರಿ ಹಾಕಿದ್ದಾರೆ. ‘ವಿರಾಟ್​ ಕೊಹ್ಲಿ ಮತ್ತು ಶಾರುಖ್​ ಖಾನ್​ ಇಬ್ಬರೂ ಕೂಡ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಹೆಸರನ್ನು ಇಟ್ಟುಕೊಂಡು ಈ ರೀತಿ ಜಗಳ ಮಾಡುವುದು ನಿಲ್ಲಿಸಿ’ ಎಂದು ಕೆಲವು ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:51 am, Wed, 29 March 23

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್