Taapsee Pannu: ಗ್ಲಾಮರಸ್​ ಬಟ್ಟೆ ಜತೆ ಲಕ್ಷ್ಮೀ ದೇವಿಯ ಸರ ಧರಿಸಿದ್ದಕ್ಕೆ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

Taapsee Pannu Controversy: ತಾಪ್ಸಿ ಪನ್ನು ಅವರು ಮೈ ಕಾಣುವ ರೀತಿಯಲ್ಲಿ ಬಟ್ಟೆ ಧರಿಸಿ, ಅದರ ಜೊತೆ ಲಕ್ಷ್ಮಿ ದೇವಿಯ ಚಿತ್ರ ಇರುವ ಆಭರಣ ಧರಿಸಿದ್ದು ಸರಿಯಲ್ಲ ಎಂದು ಏಕಲವ್ಯ ಗೌರ್​ ಟೀಕೆ ಮಾಡಿದ್ದಾರೆ.

Taapsee Pannu: ಗ್ಲಾಮರಸ್​ ಬಟ್ಟೆ ಜತೆ ಲಕ್ಷ್ಮೀ ದೇವಿಯ ಸರ ಧರಿಸಿದ್ದಕ್ಕೆ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ತಾಪ್ಸಿ ಪನ್ನು ವೈರಲ್ ಫೋಟೋ
Follow us
ಮದನ್​ ಕುಮಾರ್​
|

Updated on: Mar 28, 2023 | 6:52 PM

ಸೆಲೆಬ್ರಿಟಿಗಳು ಏನೇ ಮಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯಲು ಕೆಲವು ಮಂದಿ ಕಾದು ಕುಳಿತಿರುತ್ತಾರೆ. ನಟಿ ತಾಪ್ಸಿ ಪನ್ನು (Taapsee Pannu) ಅವರು ಧರಿಸಿದ್ದ ಬಟ್ಟೆ ಮತ್ತು ಆಭರಣ ಈಗ ವಿವಾದಕ್ಕೆ ಕಾರಣ ಆಗಿದೆ. ಹಿಂದೂಗಳ (Hindu) ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಅವರ ವಿರುದ್ಧ ದೂರು ನೀಡಲಾಗಿದೆ. ತಮ್ಮ ನೇರ ನಡೆ-ನುಡಿಯ ವ್ಯಕ್ತಿತ್ವದ ಕಾರಣದಿಂದ ನಟಿ ತಾಪ್ಸಿ ಪನ್ನು ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಾರೆ. ಅವರಿಗೆ ಕಾಂಟ್ರವರ್ಸಿ (Controversy) ಹೊಸದೇನೂ ಅಲ್ಲ. ಈಗ ಬಟ್ಟೆ ವಿಚಾರಕ್ಕೆ ಅವರನ್ನು ಕೆಲವರು ವಿರೋಧಿಸಿದ್ದಾರೆ. ಅಷ್ಟಕ್ಕೂ ತಾಪ್ಸಿ ಧರಿಸಿದ ಬಟ್ಟೆಯಿಂದ ಕಿರಿಕ್​ ಆಗಿದ್ದು ಯಾಕೆ? ಇಲ್ಲಿದೆ ವಿವರ..

ಮೈ ಕಾಣುವಂತಹ ಬಟ್ಟೆ ಧರಿಸಿ, ಅದರ ಜೊತೆಗೆ ಲಕ್ಷ್ಮಿ ದೇವಿಯ ಚಿತ್ರ ಇರುವಂತಹ ಆಭರಣ ಧರಿಸಿದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಬಿಜೆಪಿ ಶಾಸಕಿ ಮಾಲಿನಿ ಗೌರ್​ ಅವರ ಪುತ್ರ ಏಕಲವ್ಯ ಗೌರ್​ ಅವರು ದೂರು ನೀಡಿದ್ದಾರೆ. ಸನಾತನ ಧರ್ಮಕ್ಕೆ ಅವಮಾನ ಮಾಡುವ ಸಲುವಾಗಿ ಮಾಡಿದ ಉದ್ದೇಶ ಪೂರ್ವಕ ಕೃತ್ಯ ಇದು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ
Image
Taapsee Pannu: ಮನಮೋಹಕ ಚೆಲುವೆ ತಾಪ್ಸಿ ಪನ್ನು ಕ್ಯೂಟ್ ಫೋಟೋಆಲ್ಬಂ
Image
Taapsee Pannu: ಬಾಲಿವುಡ್​ನಲ್ಲಿ ಮಹಿಳಾ ನಟಿಯರ ಸಂಭಾವನೆ ನಿಗದಿಯಾಗೋದು ಹೇಗೆ? ತಾಪ್ಸಿ ಪನ್ನು ಹೇಳಿದ್ದಿಷ್ಟು..
Image
‘ನಿಮ್ಮ ದೇಹ ಗಂಡಸರ ರೀತಿ ಇದೆ’; ತಾಪ್ಸಿ ಪನ್ನು ಬಾಡಿ ಬಗ್ಗೆ ನೆಟ್ಟಿಗರ ಕಮೆಂಟ್​; ಖುಷಿಯಾದ ನಟಿ
Image
Haseen Dillruba Trailer: ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ

Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ

ಮಾರ್ಚ್​ 12ರಂದು ಮುಂಬೈನಲ್ಲಿ ಲ್ಯಾಕ್​ಮೆ ಫ್ಯಾಷನ್​ ವೀಕ್​ ನಡೆಯಿತು. ಅದರಲ್ಲಿ ತಾಪ್ಸಿ ಪನ್ನು ಅವರು ರ‍್ಯಾಂಪ್​ ವಾಕ್​ ಮಾಡಿದರು. ಈ ವೇಳೆ ಅವರು ಧರಿಸಿ​ದ್ದ ಗೌನ್​ ಗಮನ ಸೆಳೆಯಿತು. ಸಖತ್​ ಗ್ಲಾಮರಸ್​ ಆಗಿದ್ದ ಬಟ್ಟೆ ಧರಿಸಿ ಅವರು ಕಾಣಿಸಿಕೊಂಡರು. ಆ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಆದರೆ ಇಷ್ಟೆಲ್ಲ ಮೈ ಕಾಣುವ ರೀತಿಯಲ್ಲಿ ಬಟ್ಟೆ ಧರಿಸಿ, ಅದರ ಜೊತೆ ಲಕ್ಷ್ಮಿ ದೇ​ವಿಯ ಚಿತ್ರ ಇರುವ ಆಭರಣ ಧರಿಸಿದ್ದು ಸರಿಯಲ್ಲ ಎಂದು ಏಕಲವ್ಯ ಗೌರ್​ ಟೀಕೆ ಮಾಡಿದ್ದಾರೆ.

View this post on Instagram

A post shared by Taapsee Pannu (@taapsee)

ಹಾಟ್​ ಆಗಿರುವ ಫೋಟೋಗಳನ್ನು ತಾಪ್ಸಿ ಪನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ತಾಪ್ಸಿ ಪನ್ನುಗೆ ನಾಚಿಕೆ ಆಗಬೇಕು. ಓರ್ವ ಸೆಲೆಬ್ರಿಟಿಯಾಗಿ ಧಾರ್ಮಿಕ ಚಿಹ್ನೆಗಳಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಜ್ಞಾನ ಇರಬೇಕು’ ಎಂದು ಕೆಲವರು ಪಾಠ ಮಾಡಿದ್ದಾರೆ. 6 ಲಕ್ಷಕ್ಕೂ ಅಧಿಕ ಜನರು ಈ ಫೋಟೋಗಳಿಗೆ ಲೈಕ್​ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ತಾಪ್ಸಿ ಪನ್ನು ಅವರು ಸಖತ್​ ಆ್ಯಕ್ಟೀವ್​ ಆಗಿದ್ದಾರೆ. 2 ಕೋಟಿಗೂ ಅಧಿಕ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ