ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ

Priyanka Chopra | Karan Johar: ಪ್ರಿಯಾಂಕಾ ಚೋಪ್ರಾ ಹಾಗೂ ಕರಣ್​ ಜೋಹರ್ ನಡುವೆ ಯಾವುದೇ ಮನಸ್ಥಾಪ ಇಲ್ಲ ಎಂಬುದಕ್ಕೆ ಒಂದು ವೈರಲ್​ ವಿಡಿಯೋ ಸಾಕ್ಷಿ ಆಗಿದೆ. ಆದರೆ ನೇರವಾಗಿ ಮಾತನಾಡಿದ ಕಂಗನಾ ರಣಾವತ್​ ಅವರು ನಿಷ್ಠುರ ಕಟ್ಟಿಕೊಳ್ಳುವಂತಾಗಿದೆ.

ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ
ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಕಂಗನಾ ರಣಾವತ್
Follow us
ಮದನ್​ ಕುಮಾರ್​
|

Updated on:Apr 02, 2023 | 10:58 AM

ಬಾಲಿವುಡ್​ನಲ್ಲಿ ಹಲವು ಸೆಲೆಬ್ರಿಟಿಗಳ ನಡುವೆ ಮುಸುಕಿನ ಗುದ್ದಾಟ ಇದೆ. ಅದು ಆಗಾಗ ಬಹಿರಂಗ ಆಗುತ್ತದೆ. ಕೆಲವೇ ದಿನಗಳ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಬಾಲಿವುಡ್​ ಒಳರಾಜಕೀಯದ ಬಗ್ಗೆ ಮಾತನಾಡಿದ್ದರು. ಆದರೆ ಅವರು ಯಾರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ. ಪ್ರಿಯಾಂಕಾ ಬಾಲಿವುಡ್​ ತೊರೆಯಲು ಕರಣ್​ ಜೋಹರ್​ (Karan Johar) ಕಾರಣ ಎಂದು ಅನೇಕರು ಊಹಿಸಿದ್ದರು. ನಟಿ ಕಂಗನಾ ರಣಾವತ್​ (Kangana Ranaut) ಕೂಡ ಓಪನ್​ ಆಗಿ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಆದರೆ ಈಗ ಪ್ರಿಯಾಂಕಾ ಚೋಪ್ರಾ ಮತ್ತು ಕರಣ್​ ಜೋಹರ್​ ಪರಸ್ಪರ ರಾಜಿ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ವೈರಲ್​ ಆಗಿದೆ.

ಗಾಯಕ ನಿಕ್​ ಜೋನಸ್​ ಜೊತೆ ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಅಪರೂಪಕ್ಕೆ ಅವರು ಭಾರತಕ್ಕೆ ಬರುತ್ತಾರೆ. ಮುಂಬೈನಲ್ಲಿ ನಡೆದ ‘ನೀತಾ ಮುಕೇಶ್​ ಅಂಬಾನಿ ಕಲ್ಚರಲ್​ ಸೆಂಟರ್’​ ಉದ್ಘಾಟನೆ ಸಲುವಾಗಿ ಅವರು ಈಗ ಮುಂಬೈಗೆ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಬಹುತೇಕ ಎಲ್ಲ ಸ್ಟಾರ್​ ನಟ-ನಟಿಯರು, ನಿರ್ದೇಶಕ-ನಿರ್ಮಾಪಕರು ಭಾಗವಹಿಸಿದ್ದಾರೆ. ಈ ವೇಳೆ ಕರಣ್​ ಜೋಹರ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ‘ಲಾಸ್​ ಏಂಜಲಿಸ್​ಗೆ ಬಂದಾಗ ನಿಮ್ಮ ಮಗಳನ್ನು ನೋಡಲು ಬರುತ್ತೇನೆ’ ಎಂದು ಪ್ರಿಯಾಂಕಾಗೆ ಕರಣ್​ ಜೋಹರ್​ ಹೇಳಿದರಂತೆ.

ಇದನ್ನೂ ಓದಿ
Image
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
Image
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
Image
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
Image
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಇದನ್ನೂ ಓದಿ: ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ

‘ನೀತಾ ಮುಕೇಶ್​ ಅಂಬಾನಿ ಕಲ್ಚರಲ್​ ಸೆಂಟರ್’​ ಉದ್ಘಾಟನೆಗೆ ನಿಕ್​ ಜೋನಸ್​ ಕೂಡ ಆಗಮಿಸಿದ್ದರು. ಕರಣ್​ ಜೋಹರ್​ ಮತ್ತು ಪ್ರಿಯಾಂಕಾ ಚೋಪ್ರಾ ತಪ್ಪಿಕೊಂಡು ಪರಸ್ಪರ ವಿಶ್​ ಮಾಡಿದ ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಇಬ್ಬರು ನಡುವೆ ಯಾವುದೇ ಮನಸ್ಥಾಪ ಇಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಆದರೆ ನೇರವಾಗಿ ಮಾತನಾಡಿದ ಕಂಗನಾ ರಣಾವತ್​ ಅವರು ನಿಷ್ಠುರ ಕಟ್ಟಿಕೊಳ್ಳುವಂತಾಗಿದೆ.

ಇದನ್ನೂ ಓದಿ: Kangana Ranaut: ಎಲ್ಲರ ಬಳಿ ಕ್ಷಮೆ ಕೇಳಿದ ಕಂಗನಾ ರಣಾವತ್​; ಬರ್ತ್​ಡೇ ದಿನವೇ ಬದಲಾಯಿತು ಮನಸ್ಸು

‘ಪ್ರಿಯಾಂಕಾ ಚೋಪ್ರಾ ಅವರನ್ನು ಬಾಲಿವುಡ್​ನಲ್ಲಿ ಬ್ಯಾನ್​ ಮಾಡಿದ್ದೇ ಕರಣ್​ ಜೋಹರ್​’ ಎಂದು ಕಂಗನಾ ರಣಾವತ್​ ಹೇಳಿದ್ದರು. ಈ ವಿಚಾರವಾಗಿ ಅವರು ಮುಂಬೈ ಏರ್​ಪೋರ್ಟ್​ನಲ್ಲೂ ಪಾಪರಾಜಿಗಳನ್ನು ವ್ಯಂಗ್ಯವಾಡಿದ್ದರು. ಇದಕ್ಕೆ ಪರೋಕ್ಷವಾಗಿ ತಿರುಗೇಟ್ ನೀಡಿದ ಕರಣ್​ ಜೋಹರ್​ ಅವರು, ‘ವಿಮಾನ ನಿಲ್ದಾಣ ಒಂದು ರನ್​ ವೇ. ಅದು ಸುದ್ದಿಗೋಷ್ಠಿ ಮಾಡುವ ಸ್ಥಳ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಅದು ಟ್ರೇಲರ್​ ಲಾಂಚ್​ ಮಾಡುವ ಜಾಗವೂ ಆಗಬಹುದು’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:58 am, Sun, 2 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ