AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಮೇಕ್ ಮಾಡಿ ಕೈ ಸುಟ್ಟುಕೊಂಡ ಅಜಯ್ ದೇವಗನ್; ಹೀನಾಯ ಪರಿಸ್ಥಿತಿಯಲ್ಲಿ ‘ಭೋಲಾ’ ಸಿನಿಮಾ ಕಲೆಕ್ಷನ್

Bholaa Collection: ಶನಿವಾರ ಕೂಡ ‘ಭೋಲಾ’ ಚಿತ್ರಕ್ಕೆ ಹೇಳಿಕೊಳ್ಳುವಂತ ಬುಕಿಂಗ್ ಆಗುತ್ತಿಲ್ಲ. ಒಂದೊಮ್ಮೆ ಇಂದು ಹಾಗೂ ನಾಳೆ ಚಿತ್ರಕ್ಕೆ ಉತ್ತಮ ಗಳಿಕೆ ಆಗದೇ ಇದ್ದರೆ ನಿರ್ಮಾಪಕರ ಪರಿಸ್ಥಿತಿ ಹೀನಾಯ ಮಟ್ಟ ತಲುಪಲಿದೆ.

ರಿಮೇಕ್ ಮಾಡಿ ಕೈ ಸುಟ್ಟುಕೊಂಡ ಅಜಯ್ ದೇವಗನ್; ಹೀನಾಯ ಪರಿಸ್ಥಿತಿಯಲ್ಲಿ ‘ಭೋಲಾ’ ಸಿನಿಮಾ ಕಲೆಕ್ಷನ್
ರಾಜೇಶ್ ದುಗ್ಗುಮನೆ
|

Updated on: Apr 01, 2023 | 1:05 PM

Share

ಮುಖ್ಯಾಂಶಗಳು

  • ರಾಮ ನವಮಿ ಪ್ರಯುಕ್ತ ಬಿಡುಗಡೆ ಆದ ‘ಭೋಲಾ’ ಸಿನಿಮಾ
  • ಎರಡನೇ ದಿನವೂ ‘ಭೋಲಾ’ ಚಿತ್ರಕ್ಕೆ ಆಗಿದ್ದು ಸಾಧಾರಣ ಕಲೆಕ್ಷನ್​
  • ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಅಜಯ್​ ದೇವಗನ್​ ಸಿನಿಮಾ

ಬಾಲಿವುಡ್​ ನಟರಾದ ಅಜಯ್ ದೇವಗನ್ (Ajay Devgn) ಹಾಗೂ ಅಕ್ಷಯ್ ಕುಮಾರ್ ಅವರು ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದರಲ್ಲಿ ಕೆಲವೇ ಕೆಲವು ಗೆದ್ದಿವೆ. ಹಲವು ಸಿನಿಮಾಗಳು ಸೋತಿವೆ. ಮಲಯಾಲಂನ ‘ದೃಶ್ಯಂ 2’ ಚಿತ್ರವನ್ನು (Drishyam 2) ರಿಮೇಕ್ ಮಾಡಿ ಅಜಯ್ ದೇವಗನ್ ಗೆದ್ದಿದ್ದರು. ಇದೇ ನಂಬಿಕೆಮೇರೆಗೆ ಅಜಯ್ ದೇವಗನ್ ಅವರು ‘ಕೈದಿ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ‘ಭೋಲಾ’ ಹೆಸರಲ್ಲಿ ಈ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ ಅಜಯ್ ದೇವಗನ್. ಆದರೆ, ಇದರಿಂದ ಅವರು ಕೈ ಸುಟ್ಟುಕೊಂಡಿದ್ದಾರೆ. ಈ ಸಿನಿಮಾ ಸೋಲುವ ಸೂಚನೆ ಸಿಕ್ಕಿದೆ.

ಲೋಕೇಶ್ ಕನಗರಾಜ್ ನಿರ್ದೇಶನದ, ಕಾರ್ತಿ ನಟನೆಯ ತಮಿಳಿನ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಅಜಯ್ ದೇವಗನ್ ರಿಮೇಕ್ ಮಾಡಿದರು. ಈ ಚಿತ್ರದ ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡರು. ಈ ಸಿನಿಮಾ ಮೊದಲ ದಿನ (ಮಾರ್ಚ್​ 30) 11.20 ಕೋಟಿ ರೂಪಾಯಿ ಹಾಗೂ ಎರಡನೇ ದಿನ (ಮಾರ್ಚ್​ 31) 7.40 ಕೋಟಿ ರೂಪಾಯಿ ಮಾತ್ರ ಕಮಾಯಿ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 18.60 ಕೋಟಿ ರೂಪಾಯಿ ಆಗಿದೆ.

ಶನಿವಾರ (ಏಪ್ರಿಲ್ 1) ಕೂಡ ‘ಭೋಲಾ’ ಚಿತ್ರಕ್ಕೆ ಹೇಳಿಕೊಳ್ಳುವಂತ ಬುಕಿಂಗ್ ಆಗುತ್ತಿಲ್ಲ. ಒಂದೊಮ್ಮೆ ಇಂದು ಹಾಗೂ ನಾಳೆ (ಏಪ್ರಿಲ್ 2) ಚಿತ್ರಕ್ಕೆ ಉತ್ತಮ ಗಳಿಕೆ ಆಗದೇ ಇದ್ದರೆ ನಿರ್ಮಾಪಕರ ಪರಿಸ್ಥಿತಿ ಹೀನಾಯ ಮಟ್ಟ ತಲುಪಲಿದೆ. ‘ದೃಶ್ಯಂ 2’ ಚಿತ್ರ 200+ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೇ ಹುಮ್ಮಸ್ಸಿನಲ್ಲಿ ಅಜಯ್ ದೇವಗನ್ ದಕ್ಷಿಣ ಭಾರತದ ಸಿನಿಮಾದ ರಿಮೇಕ್ ಮೊರೆ ಹೋಗಿದ್ದರು. ಆದರೆ, ಸಿನಿಮಾದ ಪರಿಸ್ಥಿತಿ ಹೀನಾಯ ಮಟ್ಟ ತಲುಪುತ್ತಿದೆ.

ಇದನ್ನೂ ಓದಿ: Bholaa Collection: ಅಜಯ್​ ದೇವಗನ್​ ನಟನೆಯ ‘ಭೋಲಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಇದೆ. ತೆಲುಗಿನಲ್ಲಿ ನಾನಿ ನಟನೆಯ ‘ದಸರಾ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ತೆಲುಗು ಹಾಗೂ ಆಂಧ್ರದಲ್ಲಿ ‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಕರ್ನಾಟಕದಲ್ಲಿ ಡಾಲಿ ನಟನೆಯ ‘ಹೊಯ್ಸಳ’ ಸಿನಿಮಾ ಕೂಡ ಕಾಂಪಿಟೇಷನ್ ನೀಡುತ್ತಿದೆ.

ಅಜಯ್ ದೇವಗನ್ ಜೊತೆ ಭೂಷಣ್ ಕುಮಾರ್, ಕೃಷನ್ ಕುಮಾರ್ ಮೊದಲಾದವರು ‘ಭೋಲಾ’ ಚಿತ್ರವನ್ನು ನಿರ್ಮಾಣ ಮಾಡಲು ಕೈ ಜೋಡಿಸಿದ್ದಾರೆ. ಟಬು, ಸಂಜಯ್ ಮಿಶ್ರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ