Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಎಲ್ಲರ ಬಳಿ ಕ್ಷಮೆ ಕೇಳಿದ ಕಂಗನಾ ರಣಾವತ್​; ಬರ್ತ್​ಡೇ ದಿನವೇ ಬದಲಾಯಿತು ಮನಸ್ಸು

Kangana Ranaut Birthday: ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಆಪ್ತರು ಹಾಗೂ ಶತ್ರುಗಳಿಗಾಗಿ ಕಂಗನಾ ರಣಾವತ್ ಒಂದು ವಿಶೇಷ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಅದರಲ್ಲಿ ಅವರು ಕ್ಷಮೆ ಕೇಳಿದ್ದಾರೆ.

Kangana Ranaut: ಎಲ್ಲರ ಬಳಿ ಕ್ಷಮೆ ಕೇಳಿದ ಕಂಗನಾ ರಣಾವತ್​; ಬರ್ತ್​ಡೇ ದಿನವೇ ಬದಲಾಯಿತು ಮನಸ್ಸು
ಕಂಗನಾ ರಣಾವತ್
Follow us
ಮದನ್​ ಕುಮಾರ್​
|

Updated on:Mar 23, 2023 | 3:52 PM

ಖ್ಯಾತ ನಟಿ ಕಂಗನಾ ರಣಾವತ್​ (Kangana Ranaut) ಅವರು ಇಂದು 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್​ಡೇ (Kangana Ranaut Birthday) ಪ್ರಯುಕ್ತ ಎಲ್ಲರೂ ಶುಭ ಕೋರಿದ್ದಾರೆ. ಅದೇನೂ ವಿಶೇಷ ಅಲ್ಲ. ಆದರೆ ಇದೇ ಮೊದಲ ಬಾರಿಗೆ ಕಂಗನಾ ರಣಾವತ್​ ಅವರು ಎಲ್ಲರ ಬಗ್ಗೆಯೂ ಬಹಳ ಸ್ನೇಹಪೂರ್ವಕವಾಗಿ ಮಾತನಾಡಿದ್ದಾರೆ ಮತ್ತು ಕ್ಷಮೆ ಕೇಳಿದ್ದಾರೆ! ಕಂಗನಾ ರಣಾವತ್​ ಅವರು ಸದಾ ಕಾಲ ಕಿರಿಕ್​ ಮಾಡುತ್ತಲೇ ಸುದ್ದಿ ಆಗುವವರು. ಅನೇಕ ಬಾಲಿವುಡ್​ (Bollywood) ಸೆಲೆಬ್ರಿಟಿಗಳನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಆದರೆ ಈಗ ಅವರು ಏಕಾಏಕಿ ಕ್ಷಮೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಜನ್ಮದಿನದ ಪ್ರಯುಕ್ತ ಅವರು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹುಟ್ಟುಹಬ್ಬದ ಸಲುವಾಗಿ ಕಂಗನಾ ರಣಾವತ್​ ಅವರು ಸಾಂಪ್ರದಾಯಿಕ ಉಡುಗೆ ಧರಿಸಿದ್ದಾರೆ. ಲಕ್ಷಣವಾಗಿ ಸೀರೆ ಧರಿಸಿ, ಬಗೆಬಗೆಯ ಆಭರಣಗಳನ್ನು ಹಾಕಿಕೊಂಡು ಕ್ಯಾಮೆರಾ ಎದುರು ಬಂದಿದ್ದಾರೆ. ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಆಪ್ತರು ಹಾಗೂ ಶತ್ರುಗಳಿಗಾಗಿ ಒಂದು ವಿಶೇಷ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಅದರಲ್ಲಿ ಅವರು ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

Kangana Ranaut: ಸತತ ಸೋಲಿನ ಬಳಿಕ ಬೇರೆ ಬಿಸ್ನೆಸ್​ ಮಾಡಲು ನಿರ್ಧರಿಸಿದ್ದ ಕಂಗನಾ; ಅದಕ್ಕೂ ಸಾಕಾಗಲಿಲ್ಲ ಹಣ

‘ಇಂದು ನನ್ನ ಜನ್ಮದಿನದ ಅಂಗವಾಗಿ ತಂದೆ-ತಾಯಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸದ್ಗುರು, ಸ್ವಾಮಿ ವಿವೇಕಾನಂದ ಸೇರಿದಂತೆ ಎಲ್ಲ ಗುರುಗಳಿಗೆ ನಮಿಸುತ್ತೇನೆ. ಸಹೋದ್ಯೋಗಿಗಳಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಅಭಾರಿ ಆಗಿದ್ದೇನೆ. ನನ್ನ ಶತ್ರುಗಳು ಈವರೆಗೂ ನನ್ನನ್ನು ಆರಾಮಾಗಿ ಇರಲು ಬಿಟ್ಟಿಲ್ಲ. ನನಗೆ ಹೋರಾಡುವುದನ್ನು ಕಲಿಸಿದ್ದೇ ಅವರು. ಎಷ್ಟೇ ಯಶಸ್ಸು ಸಿಕ್ಕರೂ ಕೂಡ ಇಂದಿಗೂ ನನ್ನನ್ನು ಜಾಗೃತವಾಗಿ ಇರುವಂತೆ ಮಾಡಿದ ಶತ್ರುಗಳಿಗೆ ಧನ್ಯವಾದಗಳು’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

Kangana Ranaut: ವ್ಯಾನಿಟಿ ವ್ಯಾನ್​ಗಾಗಿ 65 ಲಕ್ಷ ರೂಪಾಯಿ ಖರ್ಚು ಮಾಡಿದ ಕಂಗನಾ ರಣಾವತ್​; ಏನಿದರ ವಿಶೇಷ?

‘ನನ್ನ ವಿಚಾರಧಾರೆ ತುಂಬ ಸರಳವಾಗಿದೆ. ನಾನು ಎಲ್ಲರ ಒಳಿತು ಬಯಸುತ್ತೇನೆ. ಆ ಉದ್ದೇಶದಿಂದ ನಾನು ಯಾವುದಾದರೂ ಹೇಳಿಕೆ ನೀಡಿದಾಗ ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಶ್ರೀಕೃಷ್ಣನ ಕೃಪೆಯಿಂದ ನನಗೆ ಸೌಭಾಗ್ಯಯುತ ಜೀವನ ಸಿಕ್ಕಿದೆ. ಎಲ್ಲರ ಬಗ್ಗೆಯೂ ನನ್ನ ಮನಸ್ಸಿನಲ್ಲಿ ಸ್ನೇಹಪೂರ್ವಕವಾದ ಆಲೋಚನೆ ಇದೆ. ಯಾವುದೇ ಕೆಟ್ಟ ಯೋಚನೆ ಇಲ್ಲ’ ಎಂದಿದ್ದಾರೆ ಕಂಗನಾ ರಣಾವತ್​.

ಇತ್ತೀಚಿನ ವರ್ಷಗಳಲ್ಲಿ ಕಂಗನಾ ರಣಾವತ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಸದ್ಯ ಅವರು ‘ಚಂದ್ರಮುಖಿ 2’ ಮತ್ತು ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಎಮರ್ಜೆನ್ಸಿ’ ಚಿತ್ರದಲ್ಲಿ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:52 pm, Thu, 23 March 23

ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್