Kangana Ranaut: ವ್ಯಾನಿಟಿ ವ್ಯಾನ್​ಗಾಗಿ 65 ಲಕ್ಷ ರೂಪಾಯಿ ಖರ್ಚು ಮಾಡಿದ ಕಂಗನಾ ರಣಾವತ್​; ಏನಿದರ ವಿಶೇಷ?

Kangana Ranaut Vanity Van: ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗನಾ ರಣಾವತ್​ ಅವರ ವ್ಯಾನಿಟಿ ವ್ಯಾನ್​ ಇದೆ. ಇದರ ಒಳಾಂಗಣ ವಿನ್ಯಾಸ ನೋಡಿದರೆ ಅವರ ಮನೆಯನ್ನು ನೋಡಿದಂತೆ ಆಗುತ್ತದೆ.

Kangana Ranaut: ವ್ಯಾನಿಟಿ ವ್ಯಾನ್​ಗಾಗಿ 65 ಲಕ್ಷ ರೂಪಾಯಿ ಖರ್ಚು ಮಾಡಿದ ಕಂಗನಾ ರಣಾವತ್​; ಏನಿದರ ವಿಶೇಷ?
ಕಂಗನಾ ರಣಾವತ್
Follow us
ಮದನ್​ ಕುಮಾರ್​
|

Updated on: Mar 20, 2023 | 7:30 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಿರುತ್ತಾರೆ. ನಟಿ, ನಿರ್ದೇಶಕಿ, ನಿರ್ಮಾಪಕಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ. ವಿವಾದಗಳು ಕೂಡ ಅವರಿಗೆ ಹೊಸದೇನೂ ಅಲ್ಲ. ಈಗ ಬೇರೊಂದು ಕಾರಣಕ್ಕೆ ಅವರ ಬಗ್ಗೆ ಚರ್ಚೆ ಆಗುತ್ತಿದೆ. ಅದು ಅವರ ವ್ಯಾನಿಟಿ ವ್ಯಾನ್​ (Vanity Van) ವಿಚಾರ. ಹೌದು, ವ್ಯಾನಿಟಿ ವ್ಯಾನ್​ಗಾಗಿ ಕಂಗನಾ ರಣಾವತ್​ ಅವರು ಬರೋಬ್ಬರಿ 65 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸುದ್ದಿ ಆಗಿದೆ. ನಟ-ನಟಿಯರು, ಸ್ಟಾರ್​ ನಿರ್ದೇಶಕರು ಶೂಟಿಂಗ್​ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಮೇಕಪ್​ ಮಾಡಿಕೊಳ್ಳಲು ಬಳಸುವ ವಾಹನಕ್ಕೆ ವ್ಯಾನಿಟಿ ವ್ಯಾನ್​ ಎನ್ನುತ್ತಾರೆ. ಕಂಗನಾ ರಣಾವತ್​ ಅವರು ಬಳಸುವ ವ್ಯಾನಿಟಿ ವ್ಯಾನ್​ (Kangana Ranaut Vanity Van) ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಕಂಗನಾ ರಣಾವತ್​ ಅವರು ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳು ಸೋತರೂ ಕೂಡ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಸೈದ್ಧಾಂತಿಕ ಕಾರಣದಿಂದ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಅದೇನೇ ಇರಲಿ, ಕಂಗನಾ ಅವರನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅತಿ ದುಬಾರಿ ವ್ಯಾನಿಟಿ ವ್ಯಾನ್​ ಹೊಂದಿರುವ ಬಾಲಿವುಡ್​ ಸ್ಟಾರ್​ಗಳ ಪೈಕಿ ಕಂಗನಾ ರಣಾವತ್​ ಹೆಸರು ಕೂಡ ಮುಂಚೂಣಿಯಲ್ಲಿದೆ.

ಇದನ್ನೂ ಓದಿ: Kangana Ranaut: ದೀಪಿಕಾ ಪಡುಕೋಣೆ ವಿಚಾರದಲ್ಲಿ ಕಂಗನಾ ರಣಾವತ್​ ದ್ವಂದ್ವ ನೀತಿ; ಸ್ವಷ್ಟನೆ ನೀಡಿದ ನಟಿ

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ನಗರ ಪ್ರದೇಶದಿಂದ ದೂರು ಇರುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವಾಗ ನಟಿಯರಿಗೆ ಕೆಲವು ಅನಾನುಕೂಲಗಳು ಆಗುತ್ತವೆ. ಆ ಬಗ್ಗೆ ಕಂಗನಾ ರಣಾವತ್​ ಅವರು ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ಅಂಥ ಕಿರಿಕಿರಿಗಳನ್ನು ತಪ್ಪಿಸಲು ಹಾಗೂ ಚಿಂತೆಯಿಲ್ಲದೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಸುಸಜ್ಜಿತವಾದ ವ್ಯಾನಿಟಿ ವ್ಯಾನ್​ ಇಟ್ಟುಕೊಳ್ಳಲಾಗುತ್ತದೆ. ಅದಕ್ಕಾಗಿ ಕಂಗನಾ ರಣಾವತ್​ ಅವರು 65 ಲಕ್ಷ ರೂಪಾಯಿ ವಿನಿಯೋಗಿಸಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್​ ವಾಟ್ಸಪ್​ ಮೆಸೇಜ್​ ಲೀಕ್​; ಸ್ಟಾರ್​ ದಂಪತಿ ಮೇಲೆ ಅನುಮಾನ

ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗನಾ ರಣಾವತ್​ ಅವರ ವ್ಯಾನಿಟಿ ವ್ಯಾನ್​ ಇದೆ. ಇದರ ಒಳಾಂಗಣ ವಿನ್ಯಾಸ ನೋಡಿದರೆ ಅವರ ಮನೆಯನ್ನು ನೋಡಿದಂತೆ ಆಗುತ್ತದೆ. ಮರದ ಕೆತ್ತನೆಗಳನ್ನು ಹೊಂದಿರುವ ಸೋಫಾ ಮತ್ತು ಕುರ್ಚಿಗಳು ಈ ವಾಹನದಲ್ಲಿವೆ. ಶೂಟಿಂಗ್​ಗೆ ತೆರಳಿದಾಗಲೂ ಕೂಡ ಮನೆಯಲ್ಲಿ ಇರುವಂತಹ ಕಂಫರ್ಟ್​ ಸಿಗಬೇಕು ಎಂಬ ಉದ್ದೇಶದಿಂದ ಈ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲಿ ಬಳಸುವ ಎಲ್ಲ ವಸ್ತುಗಳ ಬ್ರ್ಯಾಂಡ್​ಗಳನ್ನು ಕೂಡ ಕಂಗನಾ ಅವರೇ ಆಯ್ಕೆ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಕಂಗನಾ ಅವರು ಈಗ ‘ಎಮರ್ಜೆನ್ಸಿ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಇಂದಿರಾ ಗಾಂಧಿಯ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದು, ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಆಸ್ತಿ-ಮನೆಯನ್ನು ಅಡವಿಟ್ಟು ಈ ಚಿತ್ರಕ್ಕೆ ಹಣ ಹೂಡಿರುವುದಾಗಿ ಅವರು ಈ ಹಿಂದೆ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ