AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಕಂಗನಾ ರಣಾವತ್​ ವಾಟ್ಸಪ್​ ಮೆಸೇಜ್​ ಲೀಕ್​; ಸ್ಟಾರ್​ ದಂಪತಿ ಮೇಲೆ ಅನುಮಾನ

Kangana Ranaut WhatsApp Leak: ಕಂಗನಾ ರಣಾವತ್​ ಅವರು ಸೂಚ್ಯವಾಗಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಅದನ್ನೆಲ್ಲ ಗಮನಿಸಿದರೆ ರಣಬೀರ್​ ಕಪೂರ್ ಮತ್ತು ಆಲಿಯಾ ಭಟ್​ ಕುರಿತಾಗಿಯೇ ಹೇಳಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

Kangana Ranaut: ಕಂಗನಾ ರಣಾವತ್​ ವಾಟ್ಸಪ್​ ಮೆಸೇಜ್​ ಲೀಕ್​; ಸ್ಟಾರ್​ ದಂಪತಿ ಮೇಲೆ ಅನುಮಾನ
ಕಂಗನಾ ರಣಾವತ್
ಮದನ್​ ಕುಮಾರ್​
|

Updated on: Feb 06, 2023 | 6:30 PM

Share

ಒಂದಿಲ್ಲೊಂದು ಕಾರಣಕ್ಕೆ ನಟಿ ಕಂಗನಾ ರಣಾವತ್​ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಸದ್ಯ ಅವರ ‘ಎಮರ್ಜೆನ್ಸಿ’ (Emergency Movie) ಸಿನಿಮಾದ ಕೆಲಸಗಳು ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿವೆ. ಅದರ ನಡುವೆ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಆಗಿದೆ. ಅಚ್ಚರಿ ಏನೆಂದರೆ, ಕಂಗನಾ ರಣಾವತ್​ ಅವರ ವಾಟ್ಸಪ್​ (WhatsApp) ಸಂದೇಶ ಲೀಕ್​ ಆಗಿದೆ. ಇದು ಗಾಸಿಪ್​ ಅಲ್ಲವೇ ಅಲ್ಲ. ಸ್ವತಃ ಕಂಗನಾ ಅವರೇ ಈ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಗೂಢಚಾರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೆಲ್ಲ ಮಾಡುತ್ತಿರುವುದು ಬಾಲಿವುಡ್​ನ ಸ್ಟಾರ್​ ದಂಪತಿ ಎಂದು ಕೂಡ ಕಂಗನಾ ರಣಾವತ್​ (Kangana Ranaut) ಹೇಳಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕಂಗನಾ ರಣಾವತ್​ ಅವರು ಈ ವಿಷಯ ಹಂಚಿಕೊಂಡಿದ್ದಾರೆ. ಒಂದಷ್ಟು ದಿನಗಳಿಂದ ಅವರನ್ನು ಯಾರೋ ಹಿಂಬಾಲಿಸುತ್ತಿದ್ದಾರೆ. ಹೋದಲ್ಲಿ, ಬಂದಲ್ಲಿ ಅವರ ಫೋಟೋ ಕ್ಲಿಕ್ಕಿಸಲಾಗುತ್ತಿದೆ. ಅಲ್ಲದೇ ಆನ್​ಲೈನ್​ ಚಟುವಟಿಕೆಗಳ ಮೇಲೂ ಕಣ್ಣು ಇಡಲಾಗಿದೆ. ಇದನ್ನೆಲ್ಲ ಮಾಡಿಸುತ್ತಿರುವ ಸ್ಟಾರ್​ ದಂಪತಿಗೆ ಕಂಗನಾ ರಣಾವತ್​ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Kangana Ranaut: ‘ಸಿದ್ದಾರ್ಥ್​ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಅವರದ್ದು ನಿಜವಾದ ಪ್ರೀತಿ’: ಕಂಗನಾ ರಣಾವತ್​

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಆ ಸ್ಟಾರ್​ ನಟನ ಮೇಲೆ ಕಂಗನಾ ಅವರು ಒಂದು ಗಂಭೀರ ಆರೋಪ ಹೊರಿಸಿದ್ದಾರೆ. ‘ನೆಪೋಟಿಸಂ ಮಾಫಿಯಾದ ಆ ವಿದೂಷಕ ಒಮ್ಮೆ ನನ್ನ ಮನೆ ಬಾಗಿಲಿಗೆ ಬಂದು ಬಲವಂತಕ್ಕೆ ಯತ್ನಿಸಿದ್ದ. ಆತ ಸ್ತ್ರಿಲೋಲ ಅಂತಲೇ ಗುರುತಿಸಿಕೊಂಡಿದ್ದವನು. ಈಗ ನೆಪೋಟಿಸಂ ಸಂಘದ ಉಪಾಧ್ಯಕ್ಷ ಆಗಿದ್ದಾನೆ. ತನ್ನ ಹೆಂಡತಿಯನ್ನು ನಿರ್ಮಾಪಕಿ ಆಗು ಅಂತ ಒತ್ತಾಯಿಸುತ್ತಿದ್ದಾನೆ. ಮಹಿಳಾಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kangana Ranaut: ‘ನನ್ನ ಧಾಕಡ್​ ಚಿತ್ರದ್ದು ಐತಿಹಾಸಿಕ ಸೋಲು ನಿಜ’: ಕಂಗನಾ ರಣಾವತ್​ ಬಹಿರಂಗ ಹೇಳಿಕೆ

ಎಲ್ಲಿಯೂ ಅವರು ಬಾಲಿವುಡ್​ನ ಯಾವುದೇ ಸೆಲೆಬ್ರಿಟಿ ಜೋಡಿಯ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಂಗನಾ ರಣಾವತ್​ ಅವರು ಸೂಚ್ಯವಾಗಿ ಹೇಳಿರುವ ವಿಚಾರಗಳನ್ನು ಗಮನಿಸಿದರೆ ರಣಬೀರ್​ ಕಪೂರ್ ಮತ್ತು ಆಲಿಯಾ ಭಟ್​ ಕುರಿತಾಗಿಯೇ ಅವರು ಇಷ್ಟೆಲ್ಲ ಹೇಳಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್​

ಈ ವಿಚಾರಗಳನ್ನು ಬಹಿರಂಗ ಪಡಿಸಿದ ಮೇಲೆ ಆ ಸೆಲೆಬ್ರಿಟಿ ದಂಪತಿ ಸೈಲೆಂಟ್​ ಆಗಿದ್ದಾರೆ. ಆ ಬಗ್ಗೆಯೂ ಕಂಗನಾ ರಣಾವತ್​ ಅವರು ಮಾಹಿತಿ ನೀಡಿದ್ದಾರೆ. ಈಗ ಅವರ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಬಾಲಿವುಡ್​ನಲ್ಲಿ ಅನೇಕರನ್ನು ಕಂಗನಾ ರಣಾವತ್​ ಎದುರು ಹಾಕಿಕೊಂಡಿದ್ದಾರೆ. ಈ ಹಿಂದೆ ಅವರು ನಟಿಸಿದ್ದ ‘ಧಾಕಡ್​’ ಸಿನಿಮಾ ಹೀನಾಯವಾಗಿ ಸೋತಿತ್ತು. ಈಗ ‘ಎಮರ್ಜೆನ್ಸಿ’ ಚಿತ್ರದ ಮೂಲಕ ಗೆಲ್ಲುವ ಅನಿವಾರ್ಯತೆ ಅವರಿಗೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ