AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಸತತ ಸೋಲಿನ ಬಳಿಕ ಬೇರೆ ಬಿಸ್ನೆಸ್​ ಮಾಡಲು ನಿರ್ಧರಿಸಿದ್ದ ಕಂಗನಾ; ಅದಕ್ಕೂ ಸಾಕಾಗಲಿಲ್ಲ ಹಣ

ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ, ನಿರ್ದೇಶಕಿ ಆಗಿಯೂ ಕಂಗನಾ ರಣಾವತ್​ ಬ್ಯುಸಿ ಆಗಿದ್ದಾರೆ. ಸಿನಿಮಾದ ಜೊತೆಗೆ ಅವರಿಗೆ ಇತರೆ ಕೆಲವು ಬಿಸ್ನೆಸ್​ನಲ್ಲೂ ಆಸಕ್ತಿ ಇದೆ.

Kangana Ranaut: ಸತತ ಸೋಲಿನ ಬಳಿಕ ಬೇರೆ ಬಿಸ್ನೆಸ್​ ಮಾಡಲು ನಿರ್ಧರಿಸಿದ್ದ ಕಂಗನಾ; ಅದಕ್ಕೂ ಸಾಕಾಗಲಿಲ್ಲ ಹಣ
ಕಂಗನಾ ರಣಾವತ್
Follow us
ಮದನ್​ ಕುಮಾರ್​
|

Updated on:Mar 20, 2023 | 12:15 PM

ನಟಿ ಕಂಗನಾ ರಣಾವತ್​ (Kangana Ranaut) ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಅವರು ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತಿವೆ ಎಂಬುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. 2022ರಲ್ಲಿ ತೆರೆಕಂಡ ‘ಧಾಕಡ್​​’ ಸಿನಿಮಾ ಹೀನಾಯವಾಗಿ ಸೋಲುಂಡಿತು. ಸಿನಿಮಾಗಳ ಜೊತೆಗೆ ಬೇರೆ ಬಿಸ್ನೆಸ್​ ಮಾಡಬೇಕು ಎಂಬುದು ಕಂಗನಾ ರಣಾವತ್​ ಪ್ಲ್ಯಾನ್​ ಆಗಿತ್ತು. ಹಿಮಾಚಲ ಪ್ರದೇಶದಲ್ಲಿ ಒಂದು ರೆಸ್ಟೋರೆಂಟ್​ (Restaurant) ಆರಂಭಿಸಬೇಕು ಎಂದು ಅವರು ಆಲೋಚಿಸಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಕಂಗನಾ ರಣಾವತ್​ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ, ನಿರ್ದೇಶಕಿ ಆಗಿಯೂ ಕಂಗನಾ ರಣಾವತ್​ ಬ್ಯುಸಿ ಆಗಿದ್ದಾರೆ. ಸಿನಿಮಾದ ಜೊತೆಗೆ ಅವರಿಗೆ ಇತರೆ ಕೆಲವು ಬಿಸ್ನೆಸ್​ನಲ್ಲೂ ಆಸಕ್ತಿ ಇದೆ. ಸ್ವಂತ ರೆಸ್ಟೋರೆಂಟ್​ ಆರಂಭಿಸಬೇಕು ಎಂದು ಅವರು ತುಂಬ ಹಿಂದೆಯೇ ಕನಸು ಕಂಡಿದ್ದರು. ಆದರೆ ಅದು ಈವರೆಗೂ ನನಸಾಗಿಲ್ಲ.

ಇದನ್ನೂ ಓದಿ: Kangana Ranaut: ದೀಪಿಕಾ ಪಡುಕೋಣೆ ವಿಚಾರದಲ್ಲಿ ಕಂಗನಾ ರಣಾವತ್​ ದ್ವಂದ್ವ ನೀತಿ; ಸ್ವಷ್ಟನೆ ನೀಡಿದ ನಟಿ

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಸಾಲು ಸಾಲು ಸಿನಿಮಾಗಳು ಸೋತಿರುವುದರಿಂದ ಸಹಜವಾಗಿಯೇ ಕಂಗನಾ ರಣಾವತ್​ ಅವರ ಶ್ರೀಮಂತಿಕೆ ಕುಸಿದಿದೆ. ವಿವಾದಗಳಿಂದಲ್ಲೇ ಹೆಚ್ಚು ಸುದ್ದಿ ಆಗುವುದರಿಂದ ಅವರ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುವುದು ಕಡಿಮೆ ಆಗಿದೆ. ಸದ್ಯ ಅವರು ‘ಎಮರ್ಜೆನ್ಸಿ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ. ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದಾರೆ.

ಇದನ್ನೂ ಓದಿ: Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಮೇಲೆ ಕಂಗನಾ ರಣಾವತ್​ ಅವರಿಗೆ ಸಖತ್​ ಭರವಸೆ ಇದೆ. ಹಾಗಾಗಿ ಅವರು ತಮ್ಮ ಆಸ್ತಿಯನ್ನು ಅಡವಿಟ್ಟು, ಅದರಿಂದ ಬಂದ ಹಣವನ್ನು ಚಿತ್ರಕ್ಕೆ ವಿನಿಯೋಗಿಸಿದ್ದಾರೆ. ಒಂದು ವೇಳೆ ಈ ಸಿನಿಮಾ ಕೈ ಕೊಟ್ಟರೆ ಅವರಿಗೆ ದೊಡ್ಡ ಪೆಟ್ಟು ಬೀಳಲಿದೆ.

ವ್ಯಾನಿಟಿ ವ್ಯಾನ್​ಗಾಗಿ 65 ಲಕ್ಷ ಖರ್ಚು ಮಾಡಿದ ಕಂಗನಾ:

ಅತಿ ದುಬಾರಿ ವ್ಯಾನಿಟಿ ವ್ಯಾನ್​ ಹೊಂದಿರುವ ಬಾಲಿವುಡ್​ ಸ್ಟಾರ್​ಗಳ ಪೈಕಿ ಕಂಗನಾ ರಣಾವತ್​ ಹೆಸರು ಕೂಡ ಮುಂಚೂಣಿಯಲ್ಲಿದೆ. ಇದಕ್ಕಾಗಿ ಅವರು ಬರೋಬ್ಬರಿ 65 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸುದ್ದಿ ಆಗಿದೆ. ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗನಾ ರಣಾವತ್​ ಅವರ ವ್ಯಾನಿಟಿ ವ್ಯಾನ್​ ಇದೆ. ಇದರ ಒಳಾಂಗಣ ವಿನ್ಯಾಸ ನೋಡಿದರೆ ಅವರ ಮನೆಯನ್ನು ನೋಡಿದಂತೆ ಆಗುತ್ತದೆ. ಮರದ ಕೆತ್ತನೆಗಳನ್ನು ಹೊಂದಿರುವ ಸೋಫಾ ಮತ್ತು ಕುರ್ಚಿಗಳು ಈ ವಾಹನದಲ್ಲಿವೆ. ಶೂಟಿಂಗ್​ಗೆ ತೆರಳಿದಾಗಲೂ ಕೂಡ ಮನೆಯಲ್ಲಿ ಇರುವಂತಹ ಕಂಫರ್ಟ್​ ಸಿಗಬೇಕು ಎಂಬ ಉದ್ದೇಶದಿಂದ ಈ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲಿ ಬಳಸುವ ಎಲ್ಲ ವಸ್ತುಗಳ ಬ್ರ್ಯಾಂಡ್​ಗಳನ್ನು ಕೂಡ ಕಂಗನಾ ಅವರೇ ಆಯ್ಕೆ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:15 pm, Mon, 20 March 23

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ