ಸೈಲೆಂಟ್ ಆಗಿ 100 ಕೋಟಿ ರೂ. ಗಳಿಸಿದ ರಣಬೀರ್ ಕಪೂರ್ ಸಿನಿಮಾ ‘ತು ಜೂಟಿ ಮೈ ಮಕ್ಕಾರ್’
Ranbir Kapoor | Tu Jhoothi Main Makkaar: ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ 13 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಎರಡನೇ ವೀಕೆಂಡ್ನಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ.
ನಟ ರಣಬೀರ್ ಕಪೂರ್ (Ranbir Kapoor) ಅವರು ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. 2022ರಲ್ಲಿ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ಭಾರಿ ಯಶಸ್ಸು ಕಂಡಿದ್ದರು. ಈ ವರ್ಷ ‘ತು ಜೂಟಿ ಮೈ ಮಕ್ಕಾರ್’ (Tu Jhoothi Main Makkaar) ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಹೆಚ್ಚೇನೂ ಅಬ್ಬರ ಮಾಡದೇ ಸೈಲೆಂಟ್ ಆಗಿ ಬಂದ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ಗೆ ಜೋಡಿಯಾಗಿ ಶ್ರದ್ಧಾ ಕಪೂರ್ (Shraddha Kapoor) ನಟಿಸಿದ್ದಾರೆ. ಲವ್ ರಂಜನ್ ಅವರು ನಿರ್ದೇಶನ ಮಾಡಿದ್ದಾರೆ. ‘ತು ಜೂಟಿ ಮೈ ಮಕ್ಕಾರ್’ ಸಿನಿಮಾದ ಯಶಸ್ಸಿನಿಂದಾಗಿ ರಣಬೀರ್ ಕಪೂರ್ ಅವರ ಚಾರ್ಮ್ ಹೆಚ್ಚಿದೆ. ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಬಾಲಿವುಡ್ನಲ್ಲಿ ರಣಬೀರ್ ಕಪೂರ್ ಅವರು ಸ್ಟಾರ್ ನಟನಾಗಿ ನೆಲೆ ಕಂಡುಕೊಂಡಿದ್ದಾರೆ. ಹಿಂದಿಯ ಸ್ಟಾರ್ ಹೀರೋಗಳ ಚಿತ್ರಗಳು ಎರಡು ಅಥವಾ ಮೂರು ದಿನಕ್ಕೆ 100 ಕೋಟಿ ರೂಪಾಯಿ ಗಳಿಸುವುದು ವಾಡಿಕೆ. ಆದರೆ ರಣಬೀರ್ ಕಪೂರ್ ಅವರ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ 13 ದಿನಗಳ ಕಾಲ ಪ್ರದರ್ಶನ ಕಂಡಿದ್ದು, ಎರಡನೇ ವೀಕೆಂಡ್ನಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ. ಆ ಮೂಲಕ ಶತಕೋಟಿ ರೂಪಾಯಿ ಬಾಚಿಕೊಂಡಿದೆ.
ಇದನ್ನೂ ಓದಿ: Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್ ಕಪೂರ್
ಮಾರ್ಚ್ 8ರ ಬುಧವಾರ ‘ತು ಜೂಟಿ ಮೈ ಮಕ್ಕಾರ್’ ತೆರೆಕಂಡಿತು. ಮೊದಲ ದಿನ ಈ ಸಿನಿಮಾ ಗಳಿಸಿದ್ದು 15.73 ಕೋಟಿ ರೂಪಾಯಿ. ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ದಿನ ಕಲೆಕ್ಷನ್ ಕೊಂಚ ತಗ್ಗಿತು. 2ನೇ ದಿನ 10.34 ಕೋಟಿ ರೂಪಾಯಿ ಹಾಗೂ ಮೂರನೇ ದಿನ 10.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ವಾರಾಂತ್ಯದಲ್ಲಿ ಮತ್ತೆ ಏರಿಕೆ ಕಂಡಿತು. ಶನಿವಾರ (ಮಾರ್ಚ್ 11) 15.57 ಕೋಟಿ ರೂಪಾಯಿ ಮತ್ತು ಭಾನುವಾರ (ಮಾರ್ಚ್ 12) 17.08 ಕೋಟಿ ರೂಪಾಯಿ ಆದಾಯ ಹರಿದುಬಂತು. ಎರಡನೇ ವೀಕೆಂಡ್ನಲ್ಲಿ ಭರ್ಜರಿ ಕಲೆಕ್ಷನ್ ಆಗಿದ್ದರಿಂದ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಇದನ್ನೂ ಓದಿ: KRK: ಶ್ರದ್ಧಾ ಕಪೂರ್ಗೆ ಬಾಡಿ ಶೇಮಿಂಗ್ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್ ಆರ್. ಖಾನ್
ನಟಿ ಶ್ರದ್ಧಾ ಕಪೂರ್ ಅವರು ‘ತು ಜೂಟಿ ಮೈ ಮಕ್ಕಾರ್’ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್. ಖಾನ್ ಅವರು ಈ ಸಿನಿಮಾದ ವಿಮರ್ಶೆ ಮಾಡುವಾಗ ಶ್ರದ್ಧಾ ಕಪೂರ್ ಮತ್ತು ರಣಬೀರ್ ಕಪೂರ್ಗೆ ಬಾಡಿ ಶೇಮಿಂಗ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Mon, 20 March 23