KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​

Kamaal R. Khan | Shraddha Kapoor: ಒಮ್ಮೆ ಜೈಲು ಊಟ ತಿಂದು ಬಂದ ಬಳಿಕ ಕಮಾಲ್​ ಆರ್. ಖಾನ್​ ಅವರು ಸೈಲೆಂಟ್​ ಆಗಿದ್ದರು. ಆದರೆ ಈಗ ಮತ್ತೆ ಮನಬಂದಂತೆ ಮಾತನಾಡಲು ಶುರು ಮಾಡಿದ್ದಾರೆ.

KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​
ಕಮಾಲ್ ಆರ್. ಖಾನ್, ಶ್ರದ್ಧಾ ಕಪೂರ್
Follow us
ಮದನ್​ ಕುಮಾರ್​
|

Updated on: Mar 10, 2023 | 8:00 AM

ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ (Kamaal R. Khan) ಅವರು ಮಾಡಿಕೊಂಡಿರುವ ಎಡವಟ್ಟುಗಳು ಒಂದೆರಡಲ್ಲ. ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅವರು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಕೂಡ ತಮ್ಮ ಹಳೇ ಚಾಳಿಯನ್ನು ಕಮಾಲ್​ ಆರ್​. ಖಾನ್​ ಬಿಟ್ಟಿಲ್ಲ. ನಟಿ ಶ್ರದ್ಧಾ ಕಪೂರ್​ (Shraddha Kapoor) ಮತ್ತು ನಟ ರಣಬೀರ್​ ಕಪೂರ್​ ಬಗ್ಗೆ ಅವರು ನಾಲಿಗೆ ಹರಿಬಿಟ್ಟಿ​ದ್ದಾರೆ. ಇದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಲವ್​ ರಂಜನ್​ ನಿರ್ದೇಶನದ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾದ ವಿಮರ್ಶೆ ಮಾಡಿರುವ ಕಮಾಲ್​ ಆರ್​. ಖಾನ್​ ಅವರು ಈ ಚಿತ್ರದ ಹೀರೋ-ಹೀರೋಯಿನ್​ಗೆ ಬಾಡಿ ಶೇಮಿಂಗ್​ (Body Shaming) ಮಾಡಿದ್ದಾರೆ. ಇದಕ್ಕೆ ಚಿತ್ರತಂಡದವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಒಮ್ಮೆ ಜೈಲು ಊಟ ತಿಂದು ಬಂದ ಬಳಿಕ ಕಮಾಲ್​ ಆರ್. ಖಾನ್​ ಅವರು ಸೈಲೆಂಟ್​ ಆಗಿದ್ದರು. ಇನ್ಮುಂದೆ ಯಾವುದೇ ಸಿನಿಮಾದ ವಿಮರ್ಶೆ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಈಗ ಉಲ್ಟಾ ಹೊಡೆದಿದ್ದಾರೆ. ಮಾರ್ಚ್​ 8ರಂದು ಬಿಡುಗಡೆ ಆಗಿರುವ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾವನ್ನು ಅವರು ವಿಮರ್ಶೆ ಮಾಡಿದ್ದಾರೆ. ವಿಮರ್ಶೆ ಮಾಡಿದ್ದು ತಪ್ಪಲ್ಲ. ಆದರೆ ಬಾಡಿ ಶೇಮಿಂಗ್​ ಮಾಡಿದ್ದರಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Ranbir Kapoor: ‘ತು ಜೂಟಿ ಮೈ ಮಕ್ಕಾರ್​’ ಚಿತ್ರಕ್ಕೆ ಮೊದಲ ದಿನ ಆದ ಕಲೆಕ್ಷನ್​ ಎಷ್ಟು? ಇಲ್ಲಿದೆ ರಿಪೋರ್ಟ್​

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

‘ನಿರ್ದೇಶಕ ಲವ್​ ರಂಜನ್ ಅವರೇ.. ನೀವು ಪದೇ ಪದೇ ಶ್ರದ್ಧಾ ಕಪೂರ್​ ಅವರನ್ನು ನೀರಿಗೆ ಬೀಳಿಸುತ್ತೀರಿ. ಆದರೆ ರಣಬೀರ್​ ಕಪೂರ್​ ಅವರನ್ನು ದಡದ ಮೇಲೆ ನಿಲ್ಲಿಸುತ್ತೀರಿ. ಯಾಕೆಂದರೆ, ಅವರು ನೀರಿಗೆ ಬಿದ್ದರೆ ವಿಗ್​ ಕಿತ್ತು ಬರುತ್ತದೆ’ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ. ಇಷ್ಟೇ ಆಗಿದ್ದರೆ ಹೆಚ್ಚು ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಶ್ರದ್ಧಾ ಕಪೂರ್​ ದೇಹದ ಬಗ್ಗೆ ಅವರು ಚೀಪ್​ ಆಗಿ ಮಾತನಾಡಿದ್ದಾರೆ.

ಇದನ್ನೂ ಓದಿ:  KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್​ ಆರ್​. ಖಾನ್​ ಅರೆಸ್ಟ್​; ಒಂದೇ ವಾರದಲ್ಲಿ ಡಬಲ್​ ಸಂಕಟ

‘ಶ್ರದ್ಧಾ ಕಪೂರ್​ ಅವರನ್ನು ನೀವು ಪದೇ ಪದೇ ಬಿಕಿನಿಯಲ್ಲಿ ತೋರಿಸಿದ್ದೀರಿ. ಏನನ್ನು ತೋರಿಸಲು ನೀವು ಬಯಸಿದ್ದೀರಿ? ಆಕೆ ದೀಪಿಕಾ ಅಲ್ಲ, ಕತ್ರಿಕಾ ಕೈಫ್​ ಕೂಡ ಅಲ್ಲ, ಕರೀನಾನೂ ಅಲ್ಲ. ಆ ಹುಡುಗಿ ಬಳಿ ಏನೂ ಇಲ್ಲದಿರುವಾಗ ನೀವು ಆಕೆಯನ್ನು ಮತ್ತೆ ಮತ್ತೆ ಹೀಗೆ ತೋರಿಸಿ ಏನು ಸಾಬೀತು ಮಾಡುತ್ತೀರಿ’ ಎಂದು ಕಮಾಲ್​ ಆರ್​. ಖಾನ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ

ಈ ರೀತಿ ಬಾಡಿ ಶೇಮಿಂಗ್​ ಮಾಡಿದ್ದಕ್ಕಾಗಿ ಕಮಾಲ್​ ಆರ್​. ಖಾನ್​ ಅವರಿಗೆ ಚಿತ್ರತಂಡದವರು ಲೀಗಲ್​ ನೋಟಿಸ್​ ಕಳಿಸಿದರೂ ಅಚ್ಚರಿ ಏನಿಲ್ಲ. ಈ ಹಿಂದೆ ಸಲ್ಮಾನ್​ ಖಾನ್​ ಅವರು ಕಮಾಲ್​ ಆರ್​. ಖಾನ್​ ವಿರುದ್ಧ ಕಾನೂನು ಸಮರ ಸಾರಿದ್ದರು. ಕರಣ್​ ಜೋಹರ್​ ಕೂಡ ಬುದ್ಧಿ ಕಲಿಸಲು ಮುಂದಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು