ವಿವ್ ರಿಚರ್ಡ್ನಿಂದ ಪ್ರೆಗ್ನೆಂಟ್ ಆಗಿದ್ದ ನೀನಾ ಗುಪ್ತಾನ ಮದುವೆ ಆಗಲು ಮುಂದೆ ಬಂದಿದ್ದ ಸತೀಶ್ ಕೌಶಿಕ್
Satish Kaushik: ನೀನಾ ಗುಪ್ತಾ ಅವರ ಬಾಳಲ್ಲಿ ಕೆಟ್ಟ ಘಟನೆ ನಡೆದಿತ್ತು. 1980ರಲ್ಲಿ ಮಾಜಿ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜತೆ ಅವರ ಪ್ರೀತಿಯಲ್ಲಿದ್ದರು. ಈ ವೇಳೆ ರಿಚರ್ಡ್ ಅವರಿಂದ ನೀನಾ ಗುಪ್ತಾ ಪ್ರೆಗ್ನೆಂಟ್ ಆದರು.
ಬಾಲಿವುಡ್ನ ಹಿರಿಯ ನಟ ಸತೀಶ್ ಕೌಶಿಕ್ (Satish Kaushik) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 66ನೇ ವಯಸ್ಸಿಗೆ ಅವರು ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ನಿಧನದಿಂದ ಬಾಲಿವುಡ್ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅನುಪಮ್ ಖೇರ್ ಸೇರಿ ಅನೇಕರು ಕೌಶಿಕ್ ನಿಧನ ವಾರ್ತೆ ಕೇಳಿ ಸಂತಾಪ ಸೂಚಿಸಿದ್ದಾರೆ. ಸತೀಶ್ ಅವರು ಬಾಲಿವುಡ್ ನಟಿ ನೀನಾ ಗುಪ್ತಾ (Neena Gupta) ಜೊತೆ ಒಳ್ಳೆಯ ಫ್ರೆಂಡ್ಶಿಪ್ ಹೊಂದಿದ್ದರು. ನೀನಾ ಗುಪ್ತಾ ಕಷ್ಟದಲ್ಲಿದ್ದಾಗ ಸತೀಶ್ ಅವರು ಸಹಾಯಕ್ಕೆ ಮುಂದಾಗಿದ್ದರು.
ನೀನಾ ಗುಪ್ತಾ ಅವರ ಬಾಳಲ್ಲಿ ಕೆಟ್ಟ ಘಟನೆ ನಡೆದಿತ್ತು. 1980ರಲ್ಲಿ ಮಾಜಿ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜತೆ ಅವರ ಪ್ರೀತಿಯಲ್ಲಿದ್ದರು. ಈ ವೇಳೆ ರಿಚರ್ಡ್ ಅವರಿಂದ ನೀನಾ ಗುಪ್ತಾ ಪ್ರೆಗ್ನೆಂಟ್ ಆದರು. ಈ ಮಗುವಿಗೆ ತಂದೆ ಆಗೋಕೆ ರಿಚರ್ಡ್ ರೆಡಿ ಇರಲಿಲ್ಲ. ಮಗುವಿಗೆ ತಂದೆ ಆಗುತ್ತೇನೆ ಎಂದು ಸತೀಶ್ ಕೌಶಿಕ್ ಮುಂದೆ ಬಂದಿದ್ದರು.
ಇದನ್ನೂ ಓದಿ: ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ
ಆತ್ಮಕಥನದಲ್ಲಿ ಬರೆದುಕೊಂಡಿದ್ದ ನೀನಾ ಗುಪ್ತಾ
ನೀನಾ ಗುಪ್ತಾ ಜನಪ್ರಿಯ ನಟಿ. ಇದರ ಜೊತೆಗೆ ಒಳ್ಳೆಯ ಬರಹಗಾರ್ತಿ ಕೂಡ ಹೌದು. ಅವರು ‘ಸಚ್ ಕಹೂ ತೋ’ ಆಟೋಬಯೋಗ್ರಫಿ ಬರೆದಿದ್ದಾರೆ. ಇದು 2021ರಲ್ಲಿ ಬಿಡುಗಡೆ ಆಯಿತು. ಈ ಪುಸ್ತಕದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಅನೇಕ ಘಟನೆಗಳ ಕುರಿತು ಬರೆದುಕೊಂಡಿದ್ದಾರೆ. ಅದರಲ್ಲಿ ಈ ವಿಚಾರವೂ ಇತ್ತು.
ಕಪ್ಪಗಿದ್ದರೂ ಒಪ್ಪಿಕೊಳ್ಳುತ್ತೇನೆ..
1980ರಲ್ಲಿ ರಿಚರ್ಡ್ನಿಂದ ನೀನಾ ಪ್ರೆಗ್ನೆಂಟ್ ಆದರು. ಪ್ರೆಗ್ನೆಂಟ್ ಆಗಿರುವಾಗಲೇ ಅವರನ್ನು ಮದುವೆ ಆಗೋಕೆ ಸತೀಶ್ ಮುಂದೆ ಬಂದರು. ‘ಮಗುವಿನ ಬಣ್ಣ ಕಪ್ಪಗೆ ಇದ್ದರೆ ಭಯ ಬೇಡ. ನಾನು ಅದನ್ನು ನನ್ನ ಮಗು ಎಂದು ಒಪ್ಪಿಕೊಳ್ಳುತ್ತೇನೆ. ಆಗ ಯಾರಿಗೂ ಅನುಮಾನ ಬರುವುದಿಲ್ಲ’ ಎಂದು ಸತೀಶ್ ಕೌಶಿಕ್ ಹೇಳಿದ್ದಾಗಿ ನೀನಾ ಬರೆದುಕೊಂಡಿದ್ದರು. ಅಷ್ಟೇ ಅಲ್ಲ ಕಷ್ಟದಲ್ಲಿದ್ದಾಗ ಸಹಾಯ ಮಾಡಲು ಬಂದ ಗೆಳೆಯ ಕೌಶಿಕ್ ಅವರನ್ನು ಬಾಯ್ತುಂಬ ಹೊಗಳಿದ್ದರು ನೀನಾ.
ಸತೀಶ್ ಮೊದಲ ಚಿತ್ರದಲ್ಲಿ ನೀನಾ
ನೀನಾಗೆ ಹೆಣ್ಣುಮಗು ಜನಿಸಿತು. ಮಗಳಿಗೆ ಮಸಾಬಾ ಗುಪ್ತಾ ಎಂದು ನೀನಾ ಹೆಸರಿಟ್ಟರು. ಇದಾದ ಎರಡು ವರ್ಷದ ಬಳಿಕ ಅಂದರೆ 1982ರಲ್ಲಿ ನೀನಾ ಚಿತ್ರರಂಗಕ್ಕೆ ಕಾಲಿಟ್ಟರು. 1983ರಲ್ಲಿ ಸತೀಶ್ ಚಿತ್ರರಂಗಕ್ಕೆ ಬಂದರು. ಸತೀಶ್ ಅವರ ಮೊದಲ ಸಿನಿಮಾ ‘ಜಾನೆ ಭಿ ದೋ ಯಾರೋ’. ಈ ಸಿನಿಮಾದಲ್ಲಿ ನೀನಾ ಗುಪ್ತಾ ಕೂಡ ಬಣ್ಣ ಹಚ್ಚಿದ್ದರು.
ಅನುಪಮ್ ಖೇರ್ಗೆ ಆಪ್ತವಾಗಿದ್ದ ಸತೀಶ್
ಅನುಪಮ್ ಖೇರ್ ಹಾಗೂ ಸತೀಶ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಸತೀಶ್ ನಿಧನ ವಾರ್ತೆಯನ್ನು ಅನುಪಮ್ ಖೇರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ