Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ

Sach Kahun Toh: ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಕಣ್ಣಿನ ಡಾಕ್ಟರ್​ ಕೂಡ ನೀನಾ ಗುಪ್ತಾ ಅವರ ದೇಹದ ಇತರ ಅಂಗಗಳನ್ನು ಪರಿಶೀಲಿಸುತ್ತಿದ್ದ. ಆ ಬಗ್ಗೆ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ
ನೀನಾ ಗುಪ್ತಾ
Follow us
TV9 Web
| Updated By: ಮದನ್​ ಕುಮಾರ್​

Updated on:Oct 18, 2021 | 4:23 PM

ನಟಿ ನೀನಾ ಗುಪ್ತಾ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಫೇಮಸ್​ ಆಗಿದ್ದಾರೆ. ತಮಗೆ ಅನಿಸಿದ್ದನ್ನು ಅವರು ಮುಲಾಜಿಲ್ಲದೇ ಹೇಳಿಕೊಳ್ಳುತ್ತಾರೆ. ಆದರೆ ಬಾಲ್ಯದಲ್ಲಿ ಅವರ ಮನಸ್ಥಿತಿ ಆ ರೀತಿ ಇರಲಿಲ್ಲ. ತಮ್ಮ ಮೇಲೆ ಲೈಂಗಿಕ ಶೋಷಣೆ ಆಗಿದ್ದರೂ ಕೂಡ ಅವರು ಅದನ್ನು ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ. ನೀನಾ ಗುಪ್ತಾಗೆ ವೈದ್ಯರು ಮತ್ತು ಟೇಲರ್​ ಕಿರುಕುಳ ನೀಡಿದ್ದರು. ಆ ಕಹಿ ಘಟನೆ ಬಗ್ಗೆ ತಮ್ಮ ಕುಟುಂಬದವರ ಬಳಿಯೂ ನೀನಾ ಹೇಳಿಕೊಂಡಿರಲಿಲ್ಲ. ಅದನ್ನು ತಮ್ಮ ಆತ್ಮಚರಿತ್ರೆಯಲ್ಲಿ ತೆರೆದಿಟ್ಟಿದ್ದಾರೆ.

‘ಸಚ್​ ಕಹೂ ತೋ’ ಶೀರ್ಷಿಕೆಯಲ್ಲಿ ನೀನಾ ಗುಪ್ತಾ ಆಟೋ ಬಯೋಗ್ರಫಿ ಬರೆದಿದ್ದಾರೆ. ಅದರಲ್ಲಿ ಈ ಘಟನೆ ಬಗ್ಗೆ ವಿವರಿಸಲಾಗಿದೆ. ಬಾಲಕಿ ಆಗಿದ್ದಾಗ ಒಮ್ಮೆ ಅವರು ಕಣ್ಣಿನ ಆಸ್ಪತ್ರೆಗೆ ಹೋಗಿದ್ದರು. ಆರಂಭದಲ್ಲಿ ಕಣ್ಣು ಪರಿಶೀಲಿಸಿದ ವೈದ್ಯರು ನಂತರ ದೇಹದ ಇತರ ಭಾಗಗಳನ್ನು ನೋಡಲು ಆರಂಭಿಸಿದರಂತೆ. ಆ ಅಂಗಗಳು ಕಣ್ಣಿಗೆ ಸಂಬಂಧಿಸಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ನೀನಾ ಗುಪ್ತಾ ಒಬ್ಬರೇ ಕುಳಿತು ಅತ್ತಿದ್ದರು. ಒಂದು ವೇಳೆ ತಾಯಿ ಬಳಿ ಹೇಳಿಕೊಂಡರೇ ತಮ್ಮದೇ ಏನೂ ತಪ್ಪಿರಬಹುದು ಅಂತ ಹೇಳಬಹುದು ಎಂಬ ಭಯದಲ್ಲಿ ಆ ವಿಚಾರವನ್ನು ನೀನಾ ಗುಪ್ತಾ ಮುಚ್ಚಿಟ್ಟರು.

ಅದೇ ರೀತಿ ಬಟ್ಟೆ ಹೊಲಿಸಲು ಟೇಲರ್​ ಬಳಿ ಹೋದಾಗಲೂ ನೀನಾ ಲೈಂಗಿಕ ಶೋಷಣೆಗೆ ಒಳಗಾಗಬೇಕಾಯಿತು. ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಅದನ್ನು ಕೂಡ ಮನೆಯವರ ಬಳಿ ನೀನಾ ಗುಪ್ತಾ ಹೇಳಿಕೊಳ್ಳಲಿಲ್ಲ. ಆ ಟೇಲರ್​ ಬಳಿ ಹೋಗುವುದಿಲ್ಲ ಎಂದು ಹೇಳಿದರೆ ಅದಕ್ಕೆ ಮನೆಯವರು ಕಾರಣ ಕೇಳುತ್ತಾರೆ. ಅದೆಲ್ಲ ಕಿರಿಕ್​ ಬೇಡ ಎಂದು ಅನಿವಾರ್ಯವಾಗಿ ಅದೇ ಟೇಲರ್​ ಬಳಿ ಪದೇಪದೇ ಹೋಗಬೇಕಾಯಿತು ಎಂದು ಆ ಕಹಿ ಘಟನೆಯನ್ನು ನೀನಾ ಗುಪ್ತಾ ವಿವರಿಸಿದ್ದಾರೆ.

‘ನಮ್ಮ ಕಾಲದ ಅನೇಕ ಹುಡುಗಿಯರು ಇದೇ ರೀತಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದರು. ಆದರೆ ಅದನ್ನು ಮನೆಯಲ್ಲಿ ಹೇಳಿಕೊಂಡರೆ, ಸಿಕ್ಕಿರುವ ಸಣ್ಣ ಸ್ವಾತಂತ್ರ್ಯವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಎಲ್ಲರೂ ಮೌನವಾಗಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

ಕಾಲೇಜು ದಿನಗಳಲ್ಲೇ ಮದುವೆಯಾಗಿದ್ದರು ನೀನಾ ಗುಪ್ತಾ; ವರ್ಷದೊಳಗೆ ಮುರಿದು ಬಿದ್ದ ಮೊದಲ ವಿವಾಹದ ಸತ್ಯ ಆತ್ಮಚರಿತ್ರೆಯಲ್ಲಿ ಬಹಿರಂಗ

Published On - 4:04 pm, Mon, 18 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ