ಅಭಿಮಾನಿಗಳಿಗೆ ಹೊಸ ವಾರ್ಮ್​​ಅಪ್​ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್

ಶಿಲ್ಪಾ ಮತ್ತೆ ತಮ್ಮ ಬಣ್ಣದ ಲೋಕದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ಯೋಗ ಮತ್ತು ವರ್ಕೌಟ್​ಗಳನ್ನು ಕೂಡ ಮಾಡುತ್ತಿದ್ದಾರೆ.

ಅಭಿಮಾನಿಗಳಿಗೆ ಹೊಸ ವಾರ್ಮ್​​ಅಪ್​ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್
ಶಿಲ್ಪಾ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 18, 2021 | 8:36 PM

ಪತಿ ರಾಜ್​ಕುಂದ್ರಾ ಬಂಧನದ ನಂತರ ಸೈಲೆಂಟ್​ ಆಗಿದ್ದ ಶಿಲ್ಪಾ ಶೆಟ್ಟಿ ಈಗ ಸೋಶಿಯಲ್​ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿಯನ್ನು ಅವರು ಪೋಸ್ಟ್​ ಮಾಡುತ್ತಾ, ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಪ್ರಯತ್ನಿಸುತ್ತಿದ್ದಾರೆ. ಈಗ ಅವರು ವಾರ್ಮ್​ಅಪ್​​ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ಇದರಿಂದ ಆಗುವ ಲಾಭಗಳೇನು ಎಂದು ಅವರು ಅಭಿಮಾನಿಗಳಿಗೆ ವಿವರಿಸಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಒಂದು ತಿಂಗಳವರೆಗೆ ಅವರು ರಿಯಾಲಿಟಿ ಶೋಗಳಿಗೂ ತೆರಳಿರಲಿಲ್ಲ. ಈಗ ಅವರು ಮತ್ತೆ ತಮ್ಮ ಬಣ್ಣದ ಲೋಕದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ಯೋಗ ಮತ್ತು ವರ್ಕೌಟ್​ಗಳನ್ನು ಕೂಡ ಮಾಡುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಅವರು ನಿತ್ಯವೂ ಯೋಗಾಭ್ಯಾಸ ಮಾಡುತ್ತಾರೆ. ಇದರ ಜತೆಗೆ ಬಾಡಿನ ಫಿಟ್​ ಆಗಿಟ್ಟುಕೊಳ್ಳೋಕೆ ನಾನಾ ಕಸರತ್ತು ಮಾಡುತ್ತಾರೆ. ಈಗ ಅವರು ಜಿಮ್​ನಲ್ಲಿ ವಾರ್ಮ್​​ಅಪ್​ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಕೆಲ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ.

‘ನೀವು ರಿಸ್ಕ್​ ತೆಗೆದುಕೊಳ್ಳದೆ ಮತ್ತು ನಿಮ್ಮ ಆರಾಮ ಜೋನ್​ನಿಂದ ಹೊರಬರದೆ ಬದುಕಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ದಿಟ್ಟತನ ಬೇಕು. ನಾನು ಹೊಸ ಏರೋಬಿಕ್ ತಾಲೀಮು ನಡೆಸುತ್ತಿದ್ದೇನೆ. ಇದಕ್ಕೆ ಬುಡಕಟ್ಟು ಸ್ಕ್ವಾಟ್ಸ್ ಎನ್ನುತ್ತೇವೆ. ಇದು ದೇಹದ ಕೆಳಭಾಗದ ಎಲ್ಲಾ ಸ್ನಾಯುಗಳು, ಭುಜಗಳು, ತೋಳು ಮತ್ತು ಕಾಲುಗಳ ಸ್ನಾಯುಗಳಿಗೆ ಸಹಕಾರಿ. ಪ್ರತಿನಿತ್ಯ ಒಂದು ನಿಮಿಷದಂತೆ 4 ಸೆಟ್‌ಗಳನ್ನು ಮಾಡಬೇಕು. ಪ್ರತಿ ಸೆಟ್​ನ ನಡುವೆ ಕೇವಲ 30 ಸೆಕೆಂಡುಗಳ ವಿರಾಮವನ್ನು ನೀಡಬೇಕು. ವ್ಯತ್ಯಾಸವನ್ನು ನೋಡಲು ಸತತವಾಗಿ ಪ್ರಯತ್ನ ಮಾಡಿ. ಧೈರ್ಯವಿಲ್ಲದೆ ಏನೂ ಬರುವುದಿಲ್ಲ’ ಎಂದಿದ್ದಾರೆ ಅವರು.

ರಾಜ್​ ಕುಂದ್ರಾ ಬಂಧನಕ್ಕೆ ಒಳಗಾದ ದಿನದಿಂದಲೂ ಅವರ ವಿರುದ್ಧ ಶೆರ್ಲಿನ್​ ಚೋಪ್ರಾ ಹಲವು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಂತೆ ತಮ್ಮ ಮೇಲೆ ಒತ್ತಡ ಹೇರಿದ್ದೇ ರಾಜ್​ ಕುಂದ್ರಾ ಎಂದು ಅವರು ಹೇಳಿದ್ದರು. ಬೆತ್ತಲಾಗಿ ನಟಿಸುವಂತೆ ಬ್ಲ್ಯಾಕ್​ ಮೇಲ್​ ಮಾಡಲಾಯಿತು. ಅದಕ್ಕೆ ಒಪ್ಪದಿದ್ದಾಗ ಮಾನಸಿಕವಾಗಿ ಕಿರುಕುಳ ನೀಡಿದರು ಎಂದು ಶೆರ್ಲಿನ್​ ಆರೋಪಿಸಿದ್ದರು. ಈಗ ರಾಜ್​ ಕುಂದ್ರಾ ವಿರುದ್ಧ ಅವರು ದೂರು ನೀಡಿದ್ದು, ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಇದರ ಜತೆಗೆ ಶಿಲ್ಪಾ ಮೇಲೂ ದೂರು ಹೊರಿಸಿದ್ದಾರೆ.

ಇದನ್ನೂ ಓದಿ: Shilpa Shetty: ಮತ್ಸ್ಯಕನ್ಯೆಯ ಅವತಾರದಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ; ಅಭಿಮಾನಿಗಳು ಹೇಳಿದ್ದೇನು?

ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ದೂರು; ಈ ಬಾರಿ ಶಿಲ್ಪಾ ಶೆಟ್ಟಿಗೂ ಕಾದಿಗೆ ಸಂಕಷ್ಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ