ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ದೂರು; ಈ ಬಾರಿ ಶಿಲ್ಪಾ ಶೆಟ್ಟಿಗೂ ಕಾದಿಗೆ ಸಂಕಷ್ಟ

ರಾಜ್​ ಕುಂದ್ರಾ ವಿರುದ್ಧ ಶೆರ್ಲಿನ್​ ಚೋಪ್ರಾ ಅವರು ದೂರು ನೀಡಿದ್ದು, ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಈ ದೂರಿನಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಇದು ಶಿಲ್ಪಾಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ದೂರು; ಈ ಬಾರಿ ಶಿಲ್ಪಾ ಶೆಟ್ಟಿಗೂ ಕಾದಿಗೆ ಸಂಕಷ್ಟ
ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ

ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ ಹೊತ್ತು ಜೈಲು ಸೇರಿದ್ದ ಉದ್ಯಮಿ ರಾಜ್​ ಕುಂದ್ರಾ ಸದ್ಯಕ್ಕೆ ಜಾಮೀನು ಪಡೆದು ಮನೆಯಲ್ಲಿದ್ದಾರೆ. ಯಾರ ಕಣ್ಣಿಗೂ ಅವರು ಕಾಣಿಸಿಕೊಳ್ಳುತ್ತಿಲ್ಲ. ಅವರ ವಿರುದ್ಧ ಈಗ ಇನ್ನೊಂದು ದೂರು ದಾಖಲಾಗಿದೆ. ಮಾದಕ ನಟಿ ಶೆರ್ಲಿನ್​ ಚೋಪ್ರಾ ಅವರು ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಲ್ಲದೇ ಅವರು ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಹೆಸರನ್ನೂ ತಮ್ಮ ದೂರಿನಲ್ಲಿ ಸೇರಿಸಿದ್ದಾರೆ. ಹಾಗಾಗಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ.

ರಾಜ್​ ಕುಂದ್ರಾ ಬಂಧನಕ್ಕೆ ಒಳಗಾದ ದಿನದಿಂದಲೂ ಅವರ ವಿರುದ್ಧ ಶೆರ್ಲಿನ್​ ಚೋಪ್ರಾ ಹಲವು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಂತೆ ತಮ್ಮ ಮೇಲೆ ಒತ್ತಡ ಹೇರಿದ್ದೇ ರಾಜ್​ ಕುಂದ್ರಾ ಎಂದು ಅವರು ಹೇಳಿದ್ದರು. ಬೆತ್ತಲಾಗಿ ನಟಿಸುವಂತೆ ಬ್ಲ್ಯಾಕ್​ ಮೇಲ್​ ಮಾಡಲಾಯಿತು. ಅದಕ್ಕೆ ಒಪ್ಪದಿದ್ದಾಗ ಮಾನಸಿಕವಾಗಿ ಕಿರುಕುಳ ನೀಡಿದರು ಎಂದು ಶೆರ್ಲಿನ್​ ಆರೋಪಿಸಿದ್ದರು. ಈಗ ರಾಜ್​ ಕುಂದ್ರಾ ವಿರುದ್ಧ ಅವರು ದೂರು ನೀಡಿದ್ದು, ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ.

ಈ ದೂರಿನಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಈ ಮೊದಲು ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಸಿಕ್ಕಿಬಿದ್ದಾಗ ಆ ಒಟ್ಟಾರೆ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಹೊರಗೆ ಉಳಿದುಕೊಂಡಿದ್ದರು. ಪತಿಯ ದಂಧೆ ಬಗ್ಗೆ ಅವರಿಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ ಎನ್ನಲಾಗಿತ್ತು. ಹಾಗಾಗಿ ಅವರು ಎಸ್ಕೇಪ್​ ಆದರು. ಆದರೆ ಈಗ ಶೆರ್ಲಿನ್​ ಚೋಪ್ರಾ ಅವರು ಶಿಲ್ಪಾ ಶೆಟ್ಟಿ ಮೇಲೂ ದೂರು ನೀಡಿದ್ದು, ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಹಲವು ದಿನಗಳಿಂದ ಶೆರ್ಲಿನ್ ಚೋಪ್ರಾ ಅವರು ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಮಾನಹಾನಿ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದರು. ಅದಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಅವರು ಕಾನೂನು ಸಮರ ಸಾರಲು ಮುಂದಾಗಿದ್ದರು. ತಮ್ಮ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿಸಿದ್ದರು. ಇದರ ಬೆನ್ನಲೇ ಶೆರ್ಲಿನ್​ ಚೋಪ್ರಾ ಈ ದೂರು ನೀಡಿದ್ದಾರೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ

Click on your DTH Provider to Add TV9 Kannada