KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್​ ಆರ್​. ಖಾನ್​ ಅರೆಸ್ಟ್​; ಒಂದೇ ವಾರದಲ್ಲಿ ಡಬಲ್​ ಸಂಕಟ

Kamaal R. Khan | Molestation Case: ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಆರಂಭ ಆಗಿದೆ. ಕಮಾಲ್​ ಆರ್​. ಖಾನ್​ ಮಾಡಿದ ಇನ್ನಷ್ಟು ಅವಾಂತರಗಳು ಹೊರಬರುವ ಸಾಧ್ಯತೆ ಇದೆ.

KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್​ ಆರ್​. ಖಾನ್​ ಅರೆಸ್ಟ್​; ಒಂದೇ ವಾರದಲ್ಲಿ ಡಬಲ್​ ಸಂಕಟ
ಕಮಾಲ್ ಆರ್. ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 06, 2022 | 8:09 AM

ನಟ, ನಿರ್ಮಾಪಕ ಹಾಗೂ ಸ್ವಯಂ ಘೋಷಿತ ವಿಮರ್ಶಕ ಕಮಾಲ್​ ಆರ್​. ಖಾನ್​ (Kamaal R. Khan) ಮಾಡಿಕೊಂಡ ಕಿರಿಕ್​ಗಳು ಒಂದೆರಡಲ್ಲ. ಈ ಹಿಂದಿ ಮಾಡಿದ ವಿವಾದಗಳಿಗೆಲ್ಲ ಈಗ ಅವರು ಬೆಲೆ ತೆತ್ತುವಂತಾಗಿದೆ. ಅವರ ಒಂದೊಂದೇ ಕೇಸ್​ಗಳು ಹೊರಬರುತ್ತಿವೆ. ಕೆಆರ್​ಕೆ (KRK) ಎಂದೇ ಫೇಮಸ್​ ಆಗಿರುವ ಅವರನ್ನು ಕೆಲವೇ ದಿನಗಳ ಹಿಂದೆ ಅರೆಸ್ಟ್​ ಮಾಡಲಾಗಿತ್ತು. ಆಕ್ಷೇಪಾರ್ಹ ಟ್ವೀಟ್ ಮಾಡಿದ ತಪ್ಪಿಗೆ ಅವರನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಘಟನೆ ನಡೆದು ಒಂದು ವಾರ ಕಳೆಯುವುದರೊಳಗೆ ಕಮಾಲ್​ ಆರ್​. ಖಾನ್​ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಮಹಿಳಾ ಜಿಮ್​ ಟ್ರೇನರ್​ಗೆ ಲೈಂಗಿಕ ಕಿರುಕುಳ (Molestation) ನೀಡಿದ ಆರೋಪದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದೆ. ಈ ಬಾರಿ ಅವರ ಮೇಲಿರುವ ಆರೋಪ ಗಂಭೀರವಾಗಿದೆ.

ಮಹಿಳೆ ನೀಡಿದ ದೂರಿನ ಪ್ರಕಾರ, ಒಂದು ಪಾರ್ಟಿಯಲ್ಲಿ ಅವರಿಗೆ ಕಮಾಲ್​ ಆರ್​. ಖಾನ್​ ಪರಿಚಯ ಆಯಿತು. ಇಬ್ಬರೂ ಫೋನ್​ ನಂಬರ್​ ವಿನಿಮಯ ಮಾಡಿಕೊಂಡರು. ‘ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಕಮಾಲ್​ ಆರ್​. ಖಾನ್ ನನಗೆ​ ಭರವಸೆ ನೀಡಿದ್ದರು. ನಂತರ ಲೈಂಗಿಕ ಕಿರುಕುಳ ಆಗುವಂತಹ ಮೆಸೇಜ್​ಗಳನ್ನು​ ಕಳಿಸಲು ಆರಂಭಿಸಿದರು. 2019ರಲ್ಲಿ ತಮ್ಮ ಬರ್ತ್​ಡೇ ಪಾರ್ಟಿಗೆ ನನ್ನನ್ನು ಕರೆದರು. ಆದರೆ ನಾನು ಹೋಗಲಿಲ್ಲ. ಒಂದು ದಿನ ರೂಮ್​ಗೆ ಕರೆದು ಜ್ಯೂಸ್​ ನೀಡಿದರು. ಅದರಲ್ಲಿ ಏನೋ ಬೆರೆಸಿದ್ದರು. ನಂತರ ನನ್ನನ್ನು ಕೆಟ್ಟದಾಗಿ ಮುಟ್ಟಲು ಆರಂಭಿಸಿದರು. ನಾನು ಅಲ್ಲಿಂದ ಓಡಿಬಂದೆ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಬಹಳ ಹಿಂದೆ ಆದರೂ ಕೂಡ ತಕ್ಷಣಕ್ಕೆ ದೂರು ನೀಡಲು ಮಹಿಳೆಗೆ ಸಾಧ್ಯವಾಗಲಿಲ್ಲ. ‘ಚಿತ್ರರಂಗದಲ್ಲಿ ಕಮಾಲ್​ ಆರ್​. ಖಾನ್​ ಅವರಿಗೆ ಹೆಚ್ಚು ಕನೆಕ್ಷನ್​ ಇದೆ. ಆದ್ದರಿಂದ ದೂರು ನೀಡಲು ಭಯ ಆಯಿತು’ ಎಂದು ಅವರು ಹೇಳಿದ್ದಾರೆ. ಈ ಕೇಸ್​ನ ವಿಚಾರಣೆ ಆರಂಭ ಆಗಿದ್ದು, ಕೆಆರ್​ಕೆ ಮಾಡಿದ ಇನ್ನಷ್ಟು ಅವಾಂತರಗಳು ಹೊರಬರುವ ಸಾಧ್ಯತೆ ಇದೆ.

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

ನಟನಾಗಬೇಕು ಎಂಬುದು ಕಮಾಲ್​ ಆರ್​. ಖಾನ್ ಅವರ ಉದ್ದೇಶ ಆಗಿತ್ತು. ಆದರೆ ಚಿತ್ರರಂಗದಲ್ಲಿ ಅವರಿಗೆ ಸಕ್ಸಸ್​ ಸಿಗಲಿಲ್ಲ. ಅವರೇ ನಿರ್ಮಿಸಿ, ನಟಿಸಿದ್ದ ‘ದೇಶದ್ರೋಹಿ’ ಸಿನಿಮಾ ಹೀನಾಯವಾಗಿ ಸೋತಿತು. ಬಳಿಕ ಬೇರೆಯವರ ಸಿನಿಮಾಗಳನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಅವರ ಯೂಟ್ಯೂಬ್​ ಚಾನೆಲ್​ಗೆ​ 10 ಲಕ್ಷಕ್ಕೂ ಅಧಿಕ subscribes ಇದ್ದಾರೆ. ಪದೇಪದೇ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್​ ಮಾಡುವ ಚಾಳಿ ಕಮಾಲ್​ ಆರ್​. ಖಾನ್​ ಅವರಿಗೆ ಇದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Tue, 6 September 22

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್