AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಮಿರ್​ ಖಾನ್​ ಬೋಗಸ್​ ಮತ್ತು ಫ್ರಾಡ್​’; ನೇರ ಟೀಕೆ ಮಾಡಿದ ‘ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​

Vivek Agnihotri: ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಪ್ರಾಮಾಣಿಕತೆಯೇ ಇಲ್ಲ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಆಮಿರ್ ಖಾನ್​ ಬಗ್ಗೆ ಅವರು ಕಟು ಟೀಕೆ ಮಾಡಿದ್ದಾರೆ.

‘ಆಮಿರ್​ ಖಾನ್​ ಬೋಗಸ್​ ಮತ್ತು ಫ್ರಾಡ್​’; ನೇರ ಟೀಕೆ ಮಾಡಿದ ‘ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​
ವಿವೇಕ್ ಅಗ್ನಿಹೋತ್ರಿ, ಆಮಿರ್ ಖಾನ್
TV9 Web
| Edited By: |

Updated on: Sep 05, 2022 | 3:41 PM

Share

ಸದ್ಯಕ್ಕೆ ನಟ ಆಮಿರ್ ಖಾನ್​ (Aamir Khan) ಅವರ ಟೈಮ್​ ಚೆನ್ನಾಗಿಲ್ಲ ಎನಿಸುತ್ತಿದೆ. ಅವರು ಮಾಡಿದ ಎಲ್ಲ ಪ್ರಯತ್ನಗಳು ಕೈ ಹಿಡಿಯುತ್ತಿಲ್ಲ. ಈ ಹಿಂದೆ ‘ಥಗ್ಸ್​ ಆಫ್​ ಹಿಂದೂಸ್ತಾನ್​’ ಸಿನಿಮಾ ಸೋಲುಂಡಿತು. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾ ಈ ವರ್ಷ ತೆರೆಕಂಡಿತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಹೀನಾಯವಾಗಿ ಸೋತಿದೆ. ಆ ಬಳಿಕ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಕೂಡ ಮುಲಾಜಿಲ್ಲದೇ ಕೆಲವೊಂದು ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಆಮಿರ್​ ಖಾನ್​ 100-150 ಕೋಟಿ ರೂಪಾಯಿ ಸಂಭಾವನೆ ಪಡೆಯುವುದು ಒಂದು ಬೋಗಸ್​ ಮತ್ತು ಫ್ರಾಡ್​ ಒಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಬಾಲಿವುಡ್​ನ ಅನೇಕರ ಬಗ್ಗೆ ಅವರು ನಿಷ್ಠುರವಾಗಿ ಮಾನಾಡಿದ್ದಾರೆ. ಈಗ ಆಮಿರ್​ ಖಾನ್​ ಅವರನ್ನು ವಿವೇಕ್​ ಅಗ್ನಿಹೋತ್ರಿ ಟಾರ್ಗೆಟ್​ ಮಾಡಿದ್ದಾರೆ.

ಜನರು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಿದ್ದರಿಂದ ಈ ಚಿತ್ರ ಸೋತಿಲ್ಲ ಎಂಬುದು ವಿವೇಕ್​ ಅಗ್ನಿಹೋತ್ರಿ ಅವರ ವಾದ. ‘ಆಮಿರ್​ ಖಾನ್​ ಅವರಿಗೆ ನಿಷ್ಠಾವಂತ ಅಭಿಮಾನಿಗಳು ಇಲ್ಲ. ಹಾಗಿದ್ದ ಮೇಲೆ ಎಲ್ಲವೂ ಬೋಗಸ್​ ಮತ್ತು ಫ್ರಾಡ್​. ನೀವು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ನೀವು ಯಾಕೆ 100-150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೀರಿ?’ ಎಂದು ವಿವೇಕ್​ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಪ್ರಾಮಾಣಿಕತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಆಮಿರ್​​ Vs ಅಕ್ಷಯ್​​; ಮೊದಲ ದಿನ ‘ಲಾಲ್​ ಸಿಂಗ್​ ಚಡ್ಡಾ’ ಗಳಿಕೆ 12 ಕೋಟಿ
Image
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Image
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Image
Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್​’: ಆಮಿರ್​ ಖಾನ್​

‘ಈ ಹಿಂದೆ ‘ದಂಗಲ್​’ ಚಿತ್ರ ರಿಲೀಸ್​ ಆದಾಗಲೂ ಜನರು ಬಹಿಷ್ಕಾರದ ಮಾತುಗಳನ್ನು ಆಡಿದ್ದರು. ಆದರೂ ಕೂಡ ಆ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಯಾಕೆಂದರೆ ಅದರಲ್ಲಿ ಪ್ರಾಮಾಣಿಕತೆ ಇತ್ತು. ತಂದೆಯ ಪಾತ್ರಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ನಂತರ ತೂಕ ಕಡಿಮೆ ಮಾಡಿಕೊಂಡಿದ್ದರು’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

‘ಭಕ್ತರಿಂದಾಗಿ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಸೋತಿತು ಎಂದು ಕೆಲವರು ಹೇಳ್ತಾರೆ. ನರೇಂದ್ರ ಮೋದಿಗೆ ಎಷ್ಟು ಜನ ವೂಟ್​ ಮಾಡಬಹುದು. ಶೇಕಡ 40ರಿಂದ ಶೇಕಡ 50ರಷ್ಟು ಇರಬಹುದಾ? ಇನ್ನುಳಿದವರು ಯಾಕೆ ಸಿನಿಮಾವನ್ನು ಗೆಲ್ಲಿಸಲಿಲ್ಲ’ ಎಂದು ವಿವೇಕ್​ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ