‘ಉರ್ಫಿ ಜಾವೇದ್ಗೆ ಕೆಟ್ಟ ಟೇಸ್ಟ್ ಇದೆ’; ಓಪನ್ ಆಗಿ ಹೇಳಿದ ನಟ ರಣಬೀರ್ ಕಪೂರ್
ರಣಬೀರ್ ಕಪೂರ್ ಅವರಿಗೆ ಫನ್ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಮುಖನ ಮರೆ ಮಾಡಿರಲಾಗುತ್ತದೆ. ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದರು.
ನಟಿ ಉರ್ಫಿ ಜಾವೇದ್ (Urfi Javed) ಹಾವಳಿ ಮಿತಿಮೀರಿದೆ. ಅವರು ಹಾಕುವ ಬಟ್ಟೆಯ ನೋಡಿ ಅನೇಕರು ಅಸಹ್ಯಪಟ್ಟುಕೊಳ್ಳುತ್ತಾರೆ. ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ, ಉರ್ಫಿ ಮಾತ್ರ ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಅವರು ನಿತ್ಯ ಚಿತ್ರ ವಿಚಿತ್ರ ಬಟ್ಟೆ ಹಾಕುವುದನ್ನು ಮುಂದುವರಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಿದೆ. ಈಗ ರಣಬೀರ್ ಕಪೂರ್ (Ranabir Kapoor) ಅವರು ಉರ್ಫಿಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕೆ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಉರ್ಫಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರಣಬೀರ್ ಕಪೂರ್ ಅವರು ಕರೀನಾ ಕಪೂರ್ ಶೋಗೆ ಬಂದಿದ್ದರು. ಈ ವೇಳೆ ಅವರಿಗೆ ಫನ್ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಫೋಟೋನ ತೋರಿಸಲಾಗುತ್ತದೆ. ಅಲ್ಲಿ ಸೆಲೆಬ್ರಿಟಿ ಮುಖನ ಮರೆ ಮಾಡಿರಲಾಗುತ್ತದೆ. ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದರು.
ಇದನ್ನೂ ಓದಿ: Urfi Javed: ಕುತ್ತಿಗೆ ತನಕ ಪ್ಯಾಂಟ್ ಧರಿಸಿ ಬಂದ ಉರ್ಫಿ ಜಾವೇದ್; ವಿಚಿತ್ರ ಅವತಾರದ ಫೋಟೋ ವೈರಲ್
‘ನಾನು ಉರ್ಫಿ ಜಾವೇದ್ ಅವರ ಅಭಿಮಾನಿ ಅಲ್ಲ’ ಎಂದು ರಣಬೀರ್ ಹೇಳಿದ್ದಾರೆ. ಅವರ ಬಗ್ಗೆ ಒಂದು ಮಾತಿನಲ್ಲಿ ಉತ್ತರ ನೀಡುವಂತೆ ಕೇಳಲಾಯಿತು. ಇದಕ್ಕೆ ‘ಬ್ಯಾಡ್ ಟೇಸ್ಟ್’ ಎಂದು ಕರೆದರು ರಣಬೀರ್. ಇನ್ನು ಪ್ರಿಯಾಂಕಾ ಚೋಪ್ರಾ ಅವರ ಫೋಟೋ ತೋರಿಸಲಾಯಿತು. ಈ ವೇಳೆ ಅವರ ಡ್ರೆಸ್ಸಿಂಗ್ ಸೆನ್ಸ್ನ ರಣಬೀರ್ ಹೊಗಳಿದರು.
ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಹಿಂದಿ ಒಟಿಟಿ’ ಮೂಲಕ ಜನಪ್ರಿಯತೆ ಪಡೆದರು. ಅವರ ಖ್ಯಾತಿ ಹೆಚ್ಚಿದ್ದು ಇದೇ ಶೋನಿಂದ. ಈ ಶೋನಲ್ಲಿ ಕಸದ ಚೀಲದಿಂದ ದೇಹವನ್ನು ಮುಚ್ಚಿಕೊಂಡಿದ್ದರು. ಅಲ್ಲಿ ಅವರು ಫೇಮಸ್ ಆದ ಬಳಿಕ ಹೊರಗೂ ಇದನ್ನೇ ಮುಂದುವರಿಸಿದರು. ಈಗ ನಟನೆ ಬಿಟ್ಟು ಸಂಪೂರ್ಣವಾಗಿ ಇದೇ ರೀತಿಯ ಕೆಲಸ ಮಾಡುತ್ತಿದ್ದಾರೆ. ಸ್ಟಾರ್ ನಟನೋರ್ವ ಉರ್ಫಿ ಜಾವೇದ್ ಬಗ್ಗೆ ಕಮೆಂಟ್ ಮಾಡಿದ್ದು ಇದೇ ಮೊದಲು.
ಇದನ್ನೂ ಓದಿ: Ranbir Kapoor: ‘ಅನಿಮಲ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ; ರಗಡ್ ಅವತಾರದಲ್ಲಿ ರಣಬೀರ್ ಕಪೂರ್
ರಣಬೀರ್ ಕಪೂರ್ ಅವರು ವರ್ಷದ ಆರಂಭದಲ್ಲೇ ಯಶಸ್ಸು ಕಂಡಿದ್ದಾರೆ. ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದಿಂದ ರಣಬೀರ್ ಯಶಸ್ಸು ಹೆಚ್ಚಿದೆ. ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಒಟ್ಟಾಗಿ ನಟಿಸುತ್ತಿರುವ ‘ಅನಿಮಲ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವರ್ಷವೇ ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:24 am, Mon, 20 March 23