ಸದಾ ತನ್ನ ಬಟ್ಟೆಯ ಮೂಲಕ ಸುದ್ದಿಯಲ್ಲಿರುವ ಉರ್ಫಿ ಜಾವೇದ್ನ ಡಯಟ್ ಸೀಕ್ರೆಟ್ ಇಲ್ಲಿದೆ
ಇತ್ತೀಚೆಗೆ ಉರ್ಫಿ ಜಾವೇದ್ ತಾನು ಪ್ರತಿ ದಿನ ಸೇವಿಸುವ ಆಹಾರ ಬಗ್ಗೆ ತನ್ನ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೊಂದು ಫಿಟ್ ಆಗಿದ್ದರೂ ಕೂಡ ಯಾವುದೇ ಆಹಾರದಲ್ಲಿ ನಾನು ಬೆಣ್ಣೆಯನ್ನು ಸ್ಕಿಪ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಉರ್ಫಿ ಜಾವೇದ್(Urfi Javed)ಪ್ರತೀ ಬಾರಿ ತಾನು ಧರಿಸುವ ತುಂಡು ಬಟ್ಟೆಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. 4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಈಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಉರ್ಫಿ ಜಾವೇದ್ ತಾನು ಪ್ರತಿ ದಿನ ಸೇವಿಸುವ ಆಹಾರ ಬಗ್ಗೆ ತನ್ನ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೊಂದು ಫಿಟ್ ಆಗಿದ್ದರೂ ಕೂಡ ಯಾವುದೇ ಆಹಾರದಲ್ಲಿ ನಾನು ಬೆಣ್ಣೆಯನ್ನು ಸ್ಕಿಪ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೆ ಹಂಚಿಕೊಂಡಿರುವ ಸ್ಟೋರಿಯಲ್ಲಿ ಆಕೆ ತಿನ್ನುವ ಆರೋಗ್ಯಕರ ಪರೋಟ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಪರೋಟದಲ್ಲಿ ಬಿಟ್ರೂಟ್ ಹಾಕಿ ತಯಾರಿಸಲಾಗುತ್ತದೆ. ಜೊತೆಗೆ ಬೆಣ್ಣೆಯಂತೂ ಬೇಕೇ ಬೇಕು ಎಂದು ಹೇಳಿಕೊಂಡಿದ್ದಾರೆ.
ಬೀಟ್ರೂಟ್ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ:
ಚಳಿಗಾಲದಲ್ಲಿ ಬೀಟ್ರೂಟ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಪೌಷ್ಟಿಕಾಂಶದ ಹಣ್ಣು, ಇದು ಫೈಬರ್, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದರ ಪರಾಠಗಳನ್ನು ತಿಂದರೆ ಅದು ದೇಹಕ್ಕೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
1. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ಇದು ಕಾಲ ಕ್ರಮೇಣ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಬೀಟ್ರೂಟ್ ಪರಾಠಗಳನ್ನು ತಿನ್ನುವವರು, ಪರಿಧಮನಿಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಯಾಕೆಂದರೆ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
2. ಜೀರ್ಣಕ್ರಿಯೆ ಸುಧಾರಿಸುತ್ತದೆ:
ಒಂದು ಕಪ್ ಕತ್ತರಿಸಿದ ಬೀಟ್‌ರೂಟ್‌ನಲ್ಲಿ ಸುಮಾರು 3.4 ಗ್ರಾಂ ಫೈಬರ್ ಇದೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ತುಂಬಾ ಬಲಪಡಿಸುತ್ತದೆ. ಇದು ಮಲಬದ್ಧತೆ, ಆಮ್ಲೀಯತೆ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿಚಿತ್ರ ಕಾಸ್ಟ್ಯೂಮ್ನಲ್ಲಿ ಪೋಸ್ ಕೊಟ್ಟ ಸ್ಯಾಮ್ ಸ್ಮಿಥ್; ಅಭಿಮಾನಿಗಳು ಫಿದಾ
3. ಮಧುಮೇಹಿಗಳಿಗೆ ಉತ್ತಮ ಆಹಾರ:
ಬೀಟ್ರೂಟ್ನ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ರೀತಿಯ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಅದಕ್ಕಾಗಿಯೇ ಮಧುಮೇಹಿಗಳು ಬೀಟ್ರೂಟ್ ಪರಾಟ ತಿನ್ನಬಹುದು.
4. ಕ್ಯಾನ್ಸರ್ ತಡೆಗಟ್ಟುವಿಕೆ:
ಬೀಟ್ರೂಟ್ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿರುವ ಫೆರುಲಿಕ್ ಆಮ್ಲ, ರುಟಿನ್, ಕೆಂಪ್ಫೆರಾಲ್ ಮತ್ತು ಕೆಫೀಕ್ ಆಮ್ಲಗಳ ಸೇವನೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
ಪರಾಟದೊಂದಿಗೆ ಬೆಣ್ಣೆ ತಿನ್ನುವ ಅಭ್ಯಾಸ ಸಾಮಾನ್ಯವಾಗಿದೆ, ಉರ್ಫಿ ಜಾವೇದ್ ಕೂಡ ಅದೇ ರೀತಿ ಮಾಡಿದ್ದಾರೆ, ಆದರೆ ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಅಪಧಮನಿ ಕಾಯಿಲೆ ಮತ್ತು ಟ್ರಿಪಲ್ ನಾಳದ ಕಾಯಿಲೆಯ ಅಪಾಯವಿದೆ. ಅದಕ್ಕಾಗಿಯೇ ಬೆಣ್ಣೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:29 pm, Thu, 16 February 23