Outfit for 2023: ವಿಚಿತ್ರ ಕಾಸ್ಟ್ಯೂಮ್ನಲ್ಲಿ ಪೋಸ್ ಕೊಟ್ಟ ಸ್ಯಾಮ್ ಸ್ಮಿಥ್; ಅಭಿಮಾನಿಗಳು ಫಿದಾ
ಸ್ವತಃ ಸ್ಯಾಮ್ ಸ್ಮಿತ್ ತನ್ನ ಇನ್ಟಾಗ್ರಾಮ್ನಲ್ಲಿ 2023 ರ ಬ್ರಿಟ್ ಆವರ್ಡ್ ರೆಡ್ಕಾರ್ಪೆಟ್ನಲ್ಲಿ ಲ್ಯಾಟೆಕ್ಸ್ ಬಲೂನ್ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಪೋಸ್ ಕೊಟ್ಟ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ.
2023 ರ ಬ್ರಿಟ್ ಆವರ್ಡ್(Brit Awards) ಈವೆಂಟ್ನಲ್ಲಿ ಅಮೇರಿಕಾದ ಜನಪ್ರಿಯ ಪಾಪ್ ಗಾಯಕ ಸ್ಯಾಮ್ ಸ್ಮಿತ್ (Sam Smith) ಲ್ಯಾಟೆಕ್ಸ್ ಬಲೂನ್ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಸಾಕಷ್ಟು ಜನರ ಗಮನ ಸೆಳೆದ್ದಿದ್ದಾರೆ. ಸ್ಯಾಮ್ ಸ್ಮಿತ್ ತನ್ನ ಹಾಡುಗಳ ಮೂಲಕ ಮಾತ್ರವಲ್ಲದೇ ಪ್ರತಿಬಾರಿ ತಾನು ಧರಿಸುವ ಮೂಲಕ ಭಾರೀ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ನಡೆದ 2023ರ ಗ್ರ್ಯಾಮಿ ಅವಾರ್ಡ್ನಲ್ಲಿ ಕೆಂಪು ಬಣ್ಣದ ವ್ಯಾಲೆಂಟಿನೋ ಗೌನ್‌ನಲ್ಲಿ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಗ್ರ್ಯಾಮಿ ಅವಾರ್ಡ್ನಲ್ಲಿ ಪ್ರಶಸ್ತಿಯನ್ನೂ ಕೂಡ ಪಡೆದ್ದಿದ್ದರು.
2023 ರ ಬ್ರಿಟ್ ಆವರ್ಡ್ ಈವೆಂಟ್ನ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ನಂತರ, ಸಾಮಾಜಿಕ ಜಾಲತಾಣದಲ್ಲಿ ಧರಿಸಿರುವ ಬಗ್ಗೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಈ ಬಟ್ಟೆಯ ಬಗ್ಗೆ ನೆಟ್ಟಿಗರು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿ ಸಾಕಷ್ಟು ಟ್ರೋಲ್ಗಳಿಗೆ ಕಾರಣವಾಗಿದೆ.ಸ್ವತಃ ಸ್ಯಾಮ್ ಸ್ಮಿತ್ ತನ್ನ ಇನ್ಟಾಗ್ರಾಮ್ನಲ್ಲಿ 2023 ರ ಬ್ರಿಟ್ ಆವರ್ಡ್ ರೆಡ್ಕಾರ್ಪೆಟ್ನಲ್ಲಿ ಲ್ಯಾಟೆಕ್ಸ್ ಬಲೂನ್ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಪೋಸ್ ಕೊಟ್ಟ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ.
View this post on Instagram
ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್ನಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡಿದ್ದು ಹೀಗೆ
ಪೇಜ್ ಸಿಕ್ಸ್ ಪ್ರಕಾರ ಭಾರತೀಯ ಮೂಲದ ಲಂಡನ್ನ ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಹರಿ ಕೃಷ್ಣನ್ ಈ ಬಟ್ಟೆಯಲ್ಲಿ ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಟ್ಟೆಯ ಭುಜ ಹಾಗು ಕಾಲುಗಳಲ್ಲಿ ಪ್ಯಾಡ್‌ಗಳನ್ನು ಇರಿಸಲಾಗಿದೆ. ಜೊತೆಗೆ ಕಪ್ಪು ಲ್ಯಾಟೆಕ್ಸ್ ಗ್ಲೌಸ್ ಹಾಗೂ ಕಪ್ಪು ಬಣ್ಣದ ಬೂಟುಗಳನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಒರ್ವ ಬಳಕೆದಾರ ಇವರು ಬಿದ್ದರೆ, ಜಂಪ್ ಆಗಿ ಮತ್ತೇ ಹಾಗೆಯೇ ನಿಲ್ಲಬಹುದು ಎಂದು ಹೇಳಿದರೆ, ಮತ್ತೊಬ್ಬ ಬಳಕೆದಾರ ಫ್ಯಾಶನ್ ಈವೆಂಟ್ ನಿಲ್ಲಿಸಬೇಕು ಏಕೆಂದರೆ ಅದು ಫ್ಯಾಷನ್‌ನಿಂದ ದೂರ ಹೋಗಿ ವಿಲಕ್ಷಣ ವೇಷಭೂಷಣಗಳಾಗಿ ಮಾರ್ಪಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:49 pm, Tue, 14 February 23