ಈ ತಿಂಡಿಯನ್ನು ನೀವು ಏನೆಂದು ಕರೆಯುತ್ತೀರಿ? ಇಲ್ಲಿವೆ ಟ್ವಿಟರ್​​​ನಲ್ಲಿ ಕಂಡ ಕುತೂಹಲಕಾರಿ ಉತ್ತರಗಳು

ಮಧುರ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಊಟದ ತಟ್ಟೆಯಲ್ಲಿರುವ ಆಹಾರವನ್ನು ನೋಡಿ ದೇಶದ ವಿವಿಧ ಭಾಗಗಳಿಂದ ಜನರು ಕಾಮೆಂಟ್ ಮಾಡಿ, ತಮ್ಮ-ತಮ್ಮ ಊರಿನಲ್ಲಿ ಈ ಆಹಾರಕ್ಕೆ ಏನು ಹೇಳುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ತಿಂಡಿಯನ್ನು ನೀವು ಏನೆಂದು ಕರೆಯುತ್ತೀರಿ? ಇಲ್ಲಿವೆ ಟ್ವಿಟರ್​​​ನಲ್ಲಿ ಕಂಡ ಕುತೂಹಲಕಾರಿ ಉತ್ತರಗಳು
ಇದು ಯಾವ ತಿಂಡಿಯೆಂದು ಗುರುತಿಸಿ Image Credit source: Twitter
Follow us
TV9 Web
| Updated By: ನಯನಾ ಎಸ್​ಪಿ

Updated on:Feb 14, 2023 | 3:54 PM

Viral News: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಮನೆಯಲ್ಲಿ ಮಾಡುವ ಆಹಾರವನ್ನು ಸೇವಿಸುವಿದಕ್ಕಿಂತ ಚಿರ-ಪರಿಚಿತವಿಲ್ಲದ ಪ್ಯಾನ್ ಏಷ್ಯನ್ (Pan Asian), ಚೈನೀಸ್ (Chinese), ಕೋರಿಯನ್ (Korean) ಹೀಗೆ ವಿದೇಶಿ ಆಹಾರದ ರುಚಿಯನ್ನು ನೋಡಲು ಇಚ್ಛಿಸುತ್ತಾರೆ. ಬೇರೆ ದೇಶದ ಆಹಾರವನ್ನು ಸೇವಿಸಿ ನಮ್ಮ ದೇಶದಲ್ಲಿನ ಯಾವುದೊ ಆಹಾರಕ್ಕೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬರು ಟ್ವೀಟ್ ಮಾಡಿದ ಫೋಟೋದಲ್ಲಿನ ಆಹಾರವನ್ನು ಕಂಡು ನೆಟ್ಟಿಗರು ವಿಭಿನ್ನವಾದ ಉತ್ತರಗಳನ್ನು ನೀಡಿದ್ದಾರೆ.

ಸೋಮವಾರ (ಫೆಬ್ರವರಿ 13), ಟ್ವಿಟರ್  ಬಳಕೆದಾರರಾದ ಮಧುರಾ ರಾವ್ (@madhurarrao) “ಈ ಚಿತ್ರವನ್ನು ನೋಡಿ, ನಾನು ಪ್ರಸ್ತುತ ಭಾರತದ ಯಾವ ಭಾಗದಲ್ಲಿದ್ದೇನೆ ಎಂದು ನೀವು ಊಹಿಸಬಹುದೇ?” ಎಂದು ಒಂದು ಊಟದ ತಟ್ಟೆಯ ಫೋಟೋ ಜೊತೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್ ಬಹಳಷ್ಟು ವೈರಲ್ ಆಗಿದೆ. ಭಾರತದ ವಿವಿಧ ಸಂಸ್ಕೃತಿಗಳು ಹೇಗೆ ಒಂದಕ್ಕೊಂದು ಜೋಡಿಕೊಂಡಿವೆ ಎಂದು ಕಾಮೆಂಟ್ ಓದಿದರೆ ಅರ್ಥವಾಗುತ್ತದೆ.

ಆಹಾರವು ಭಾರತೀಯ ಸಂಸ್ಕೃತಿಯ ಬಹು ಮುಖ್ಯ ಭಾಗ. ವಿವಿಧತೆಯಲ್ಲಿ ಏಕತೆ ತತ್ವವನ್ನು ಭಾರತವು ವಿಶ್ವಕ್ಕೆ ಸಾರುತ್ತದೆ. ಭಾರತವು ವಿವಿಧ ಜಾತಿ, ಧಾರ್ಮ, ಸಂಸ್ಕೃತಿಗಳಿಂದ ರೂಪುಗೊಂಡಿದೆ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯ ಸಂಸ್ಕೃತಿ ಒಂದರ ಮೇಲೊಂದು ಪ್ರಭಾವ ಬೀರುತ್ತದೆ. ಅದೇ ರೀತಿ ಮಧುರ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಊಟದ ತಟ್ಟೆಯಲ್ಲಿರುವ ಆಹಾರವನ್ನು ನೋಡಿ ದೇಶದ ವಿವಿಧ ಭಾಗಗಳಿಂದ ಜನರು ಕಾಮೆಂಟ್ ಮಾಡಿ, ತಮ್ಮ-ತಮ್ಮ ಊರಿನಲ್ಲಿ ಈ ಆಹಾರಕ್ಕೆ ಏನು ಹೇಳುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಧುರ ಅವರು ಹಂಚಿಕೊಂಡದ ಆಹಾರದ ತಟ್ಟೆ ನೋಡಿ ಮಂಗಳೂರಿನವರೊಬ್ಬರು “ನೀವು ಮಂಗಳೂರಿನಲ್ಲಿ ಇದ್ದೀರಾ.. ನಿಮ್ಮ ತಟ್ಟೆಯಲ್ಲಿ ಸೇಮಿಗೆ/ಒತ್ತು ಶಾವಿಗೆ, ಚಿಕನ್ ಸುಕ್ಕ, ಮೂಡೆ, ಚಿಕನ್ ಕರಿ ಇದೆ. ಇದು ನಮ್ಮ ಮಂಗಳೂರಿನಲ್ಲಿ ತುಂಬಾ ಫೇಮಸ್” ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಪ್ರೇಮಿಗಳ ದಿನ; ‘ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಉಡುಗೊರೆ! ಬನ್ನಿ ನಮ್ಮ ದಿನವನ್ನು ಆಚರಿಸೋಣ’

ಅದೇ ರೀತಿ ಇನ್ನೊಬ್ಬರು, “ಬಾಳೆ ಎಲೆಯಲ್ಲಿ ಇರುವುದನ್ನು ಬಂಗಾಳದಲ್ಲಿ ಮಚ್ಚರ್ ಪತೂರಿ ಎನ್ನುತ್ತಾರೆ. ಮಹಾರಾಷ್ಟ್ರ ಅಥವಾ ಗುಜರಾತಿನಲ್ಲಿ ಪತ್ರಾಣಿ ಮಾಚಿ ಎನ್ನುತ್ತಾರೆ.” ಎಂದರು. ಹಾಗೆಯೇ ಇನ್ನು ಕೆಲವರು ಮಹಾರಾಷ್ಟ್ರ ಕೊಂಕಣ ಸೀಮೆಯ ಕುರ್ಡಾಯ್ ಮತ್ತು ಪತ್ರಾಣಿ ಇರಬಹುದೆಂದು ಊಹಿಸಿದರು. ಕೇರಳದವರೊಬ್ಬರು ಇದು ಇಡಿಯಪ್ಪಂ ಎಂದು ಹೇಳಿದರು. ಒಟ್ಟಿನಲ್ಲಿ ಈ ಎಲ್ಲ ಉತ್ತರಗಳನ್ನು ನೋಡಿದರೆ ಭಾರತದ ಆಚಾರ ವಿಚಾರವಷ್ಟೇ ಅಲ್ಲದೆ ಭಾರತದ ಬೇರೆ ಬೇರೆ ಪ್ರದೇಶಗಳ ಆಹಾರದಲ್ಲೂ ಹೋಲಿಕೆಗಳಿವೆ ಎಂಬುದು ತಿಳಿಯುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:49 pm, Tue, 14 February 23

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್