AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಳ ದಿನ; ‘ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಉಡುಗೊರೆ! ಬನ್ನಿ ನಮ್ಮ ದಿನವನ್ನು ಆಚರಿಸೋಣ’

Valentine’s Day : ಅತ್ಯದ್ಭುತ ಸರ್! ಆಲ್​ ಇಂಡಿಯಾ ಸಿಂಗಲ್​ ಪೀಪಲ್ ಅಸೋಸಿಯೇಷನ್​ಗೆ ನೀವೇ ಅಧ್ಯಕ್ಷರು ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಿದ್ದರೆ ತೆಮ್ಜೆನ್​ ಒಬ್ಬಂಟಿಗರಿಗೆ ಏನೆಂದು ಸಂದೇಶ ನೀಡಿದ್ದಾರೆ? ಓದಿ.

ಪ್ರೇಮಿಗಳ ದಿನ; ‘ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಉಡುಗೊರೆ! ಬನ್ನಿ ನಮ್ಮ ದಿನವನ್ನು ಆಚರಿಸೋಣ’
ನಾಗಾಲ್ಯಾಂಡ್ ಸಚಿವ ತೆಮ್ಜೆನ್​ ಇಮ್ನಾ ಅಲಾಂಗ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 14, 2023 | 2:34 PM

Viral Video : ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್​ (Temjen Imna Along) ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಇವರ ನವಿರಾದ ಹಾಸ್ಯಪ್ರಜ್ಞೆ ನೆಟ್ಟಿಗರನ್ನು ಪ್ರತಿಕ್ರಿಯಿಸುವಂತೆ ಪ್ರೇರೇಪಿಸುತ್ತಿರುತ್ತದೆ. ಇದೀಗ ಪ್ರೇಮಿಗಳ ದಿನದಂದು (Valentine’s Day) ಒಬ್ಬಂಟಿಗರಿಗೆ ವಿಶೇಷ ಸಂದೇಶ ನೀಡಿದ್ದಾರೆ. ನೆಟ್ಟಿಗರು ಆಹಾ ಎಂದು ಸಂಭ್ರಮಿಸುತ್ತಿದ್ದಾರೆ.

ಇಂದು ಪ್ರೇಮಿಗಳ ದಿನ. ಜಗತ್ತಿನ ಸಾಕಷ್ಟು ಜೋಡಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿವೆ. ನೀವೂ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿದ್ದರೆ ಬಹಳೇ ಖುಷಿ. ಆದರೆ ನಿಮ್ಮಲ್ಲಿ ಕೆಲವರು ಒಂಟಿಯಾಗಿರುತ್ತೀರಿ. ಅಂಥವರು ದಯವಿಟ್ಟು ಬೇಸರಿಸಿಕೊಳ್ಳಬೇಡಿ, ದುಃಖಿಸಬೇಡಿ. ನೀವು ಸಂಗಾತಿಗಾಗಿ ಹುಡುಕಾಟವನ್ನು ನಿಲ್ಲಿಸಿ. ಆದರೆ ನಿಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸಿ!

ಇದನ್ನೂ ಓದಿ : ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

‘ಒಬ್ಬಂಟಿಗರಿಗೆ ನಮಸ್ಕಾರ! ಸ್ವಾತಂತ್ರ್ಯ ಎನ್ನುವುದು ಉಡುಗೊರೆ. ಆದರೆ ಎಲ್ಲರಿಗೂ ಇದು ಸಿಗುವಂಥದ್ದಲ್ಲ. ಬನ್ನಿ ನಮ್ಮ ಈ ದಿನವನ್ನು ಆಚರಿಸೋಣ.’ ಎಂದಿದ್ದಾರೆ ತೆಮ್ಜೆನ್​.  ಅನೇಕರು ಈ ಟ್ವೀಟ್ ನೋಡಿ, ಓಹ್​ ನೀವು ಸಿಂಗಲ್ ಎಂದು ನಮಗೀಗಲೇ ತಿಳಿಯಿತು ಎಂದು ನಕ್ಕಿದ್ದಾರೆ.

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ನೋಡಿದ್ದಾರೆ. 18,400 ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 1,300ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಲವಾರು ಜನ, ನಿಮಗಾಗಿ ನಾವು ಹುಡುಗಿ ಹುಡುಕುತ್ತಿದ್ದೇವೆ ಎಂದು ತೆಮ್ಜೆನ್​ ಅವರಿಗೆ ಹೇಳಿದ್ದಾರೆ.

ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

ಬನ್ನಿ ನಿಮಗೂ ಸ್ವಾಗತ ಎಂದು ಯೋಗಿ ಆದಿತ್ಯನಾಥ ಫೋಟೋ ಟ್ವೀಟ್ ಮಾಡಿದ್ದಾರೆ ಒಬ್ಬರು. ತೆಮ್ಜೆನ್​ ಬಹಳ ಬೇಡಿಕೆಯಲ್ಲಿರುವ ಅವಿವಾಹಿತ ಪುರುಷ ನೀವು. ನಿಮಗಾಗಿ ಖಂಡಿತ ಹುಡುಗಿ ಹುಡುಕೋಣ ಎಂದಿದ್ಧಾರೆ ಮತ್ತೊಬ್ಬರು. ಆಲ್​ ಇಂಡಿಯಾ ಸಿಂಗಲ್​ ಪೀಪಲ್ ಅಸೋಸಿಯೇಷನ್​ಗೆ ನೀವೇ ಅಧ್ಯಕ್ಷರು ಸರ್ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:31 pm, Tue, 14 February 23

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​