AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

Dog : ನಮಗೂ ಬೇಜಾರು ಬಂದುಹೋಗಿದೆ ಕೆಲಸ ಮಾಡಿ ಮಾಡಿ. ನಿನ್ನ ಜೊತೆ ನಾವೂ ಆಟವಾಡೋದಕ್ಕೆ ಬರುತ್ತೇವೆ ಇರು. ಬರುವ ತನಕ ಅಲ್ಲೇ ಇರು. ಒಟ್ಟಿಗೇ ಆಡೋಣ ಎನ್ನುತ್ತಿದ್ದಾರೆ ನೆಟ್ಟಿಗರು.

ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್
ಎಸ್ಕಲೇಟರ್​ ಹುಚ್ಚು ಹಿಡಿಸಿಕೊಂಡ ನಾಯಿ
TV9 Web
| Updated By: ಶ್ರೀದೇವಿ ಕಳಸದ|

Updated on: Feb 14, 2023 | 1:24 PM

Share

Viral Video : ಏಕತಾನತೆ ಬೇಸರ ಬಂದು ಹೊಸತನ್ನು ಮನಸ್ಸು ಹುಡುಕುತ್ತಿರುತ್ತದೆ. ಹೀಗೆ ಏನಾದರೂ ಒಂದು ಎಳೆ ಸಿಕ್ಕರೆ ಸ್ವಲ್ಪ ಹೊತ್ತು ಅದರಲ್ಲಿ ಕಳೆದುಹೋಗುವುದೇ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಅದು ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ. ಇಲ್ಲಿರುವ ಈ ನಾಯಿಯನ್ನು ನೋಡಿ. ಎಸ್ಕಲೇಟರ್​ನ ಹುಚ್ಚು ಹಿಡಿಸಿಕೊಂಡಿದೆ. ಎಸ್ಕಲೇಟರ್​ ಮೇಲೆ ಏರಿಬರುವುದು, ಮೆಟ್ಟಿಲು ಇಳಿದು ಹೋಗುವುದು. ಹೀಗೇ ಆಟವಾಡುತ್ತ ನಿಂತುಬಿಡುವುದು.

ನಮಗೆ ಬೇಸರವಾದಾಗ ಸ್ನೇಹಿತರೊಂದಿಗೆ ಹರಟುತ್ತೇವೆ. ಪಾರ್ಟಿ ಮಾಡುತ್ತೇವೆ. ಸಣ್ಣ ಟ್ರಿಪ್ ಹೋಗುತ್ತೇವೆ. ಓದುತ್ತೇವೆ. ಬರೆಯುತ್ತೇವೆ. ನಮ್ಮಿಷ್ಟದ ಹವ್ಯಾಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ಪ್ರಾಣಿಗಳು? ಪ್ರಾಣಿಗಳೂ ನಮ್ಮಂತೆಯೇ ಕಳೆದುಹೋಗುತ್ತವೆ, ಕೆಲ ಕ್ಷಣಗಳಾದರೂ. ನೆಟ್ಟಿಗರು ಇದನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ.

ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್​ ಕಲಾವಿದ ದೀಪನ್; ವಿಡಿಯೋ ವೈರಲ್

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 1,64,00 ಜನರು ನೋಡಿದ್ದಾರೆ. ಸುಮಾರು 5,000 ಜನ ಇಷ್ಟಪಟ್ಟಿದ್ದಾರೆ. ಐನೂರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಾನೂ ಈ ವಿಡಿಯೋ ನೋಡಿ ನಗುತ್ತಿದ್ದೇನೆ, ಬಹಳ ಮುದ್ಧಾಗಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : ಧ್ವನಿಮಾಯಾ ಕಲಾವಿದೆ ಇಂದುಶ್ರೀಯ ತಾತ ಹೆಂಡತಿಗೆ ಸೀರೆ ತರಲು ಮಧ್ಯಪ್ರದೇಶಕ್ಕೆ ಹೋದಾಗ

ಇದಕ್ಕಿಂತ ಮಜಾ ಬೇರೆ ಏನೂ ಜೀವನದಲ್ಲಿ, ಉಡಾಯಿಸು ಎಂದಿದ್ದಾರೆ ಅನೇಕರು. ಸೇಫ್ ಪ್ಲೇಯರ್ ಎಂದಿದ್ದಾರೆ ಕೆಲವರು. ಹುಷಾರು ಬಾಲ ಸಿಕ್ಕಿಕೊಂಡೀತು ಎಂದಿದ್ದಾರೆ ಒಬ್ಬರು. ಇದು ಹೇಗೆ ಇಲ್ಲಿ ಒಳಗೆ ಬಂದಿತು? ಭದ್ರತಾ ಸಿಬ್ಬಂದಿ ಇಲ್ಲವೆ? ಇದರ ಪ್ರಾಣಕ್ಕೆ ಹಾನಿಯಾದರೆ? ಎಂದು ಕಾಳಜಿ ವಹಿಸಿದ್ದಾರೆ ಮತ್ತೊಬ್ಬರು. ನಾನೂ ನಿನ್ನೊಂದಿಗೆ ಬರುತ್ತೇನೆ ಇರು ಆಟವಾಡಲು ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ