ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್ ಕಲಾವಿದ ದೀಪನ್; ವಿಡಿಯೋ ವೈರಲ್
Makeup Artist : ಈ ಮೇಕಪ್ ಗ್ರಾಫಿಕ್ ಅನ್ನೂ ಇದು ಮೀರಿಸಿದೆ. ಈತನಕ ಸಾಕಷ್ಟು ದೇವಿ ಪಾತ್ರಧಾರಿಗಳನ್ನು ನೋಡಿದ್ದೇವೆ. ಆದರೆ ಈ ಬಾಲೆ ಅದೃಷ್ಟವಂತಳು. ನಿಜವಾಗಲೂ ದೇವಿಯೇ ಪ್ರತ್ಯಕ್ಷವಾದ ಹಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ಸಾಮಾಜಿಕ ಜಾಲತಾಣವು ಅನೇಕ ಕಲಾವಿದರ ಪ್ರತಿಭೆಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಜೊತೆಗೆ ಅನ್ನಮಾರ್ಗವಾಗಿಯೂ ಸಾರ್ವಜನಿಕ ಜಗತ್ತಿಗೆ ಕೊಂಡಿಯಂತಾಗಿ ಪರಿಣಮಿಸಿದೆ. ಇತ್ತೀಚೆಗೆ ಚೆನ್ನೈನ ಮೇಕಪ್ ಕಲಾವಿದರೊಬ್ಬರು ತಮ್ಮ ಕಲಾನೈಪುಣ್ಯದಿಂದ ಪ್ರತ್ಯಂಗಿರಾ ದೇವಿಯನ್ನು ಸೃಷ್ಟಿಸಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರು ಇದು ಗ್ರಾಫಿಕ್ ಅನ್ನೂ ಮೀರಿಸುವ ಹಾಗಿದೆ ಎಂದು ಕೊಂಡಾಡುತ್ತಿದ್ದಾರೆ.
View this post on Instagram ಇದನ್ನೂ ಓದಿ
ದೀಪನ್ ಡಿ’ಕ್ರೂಝ್ ಎನ್ನುವ ಕಲಾವಿದರೇ ಈ ದೇವಿಯ ಸೃಷ್ಟಿಕರ್ತರು. ಗಾಡೆಸ್ ಮೇಕಪ್ ಸೆಮಿನಾರ್ನಲ್ಲಿ ಈ ದೇವಿ ಪವಡಿಸಿದ್ದಾಳೆ. ಈತನಕ ಈ ವಿಡಿಯೋ ಅನ್ನು ಸುಮಾರು 3 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಅದ್ಭುತವಾದ ಈ ಕಲೆಯನ್ನ ನೋಡಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್
ದೇವರೇ, ನಿಜವಾಗಲೂ ನಾನು ಭಾವುಕಳಾಗುತ್ತಿದ್ದೀನಿ ಎಂದಿದ್ದಾರೆ ಒಬ್ಬರು. ಈತನಕ ಸಾಕಷ್ಟು ದೇವಿ ಪಾತ್ರಧಾರಿಗಳನ್ನು ನೋಡಿದ್ದೀರಿ. ಆದರೆ ಈ ಬಾಲೆ ನಿಜಕ್ಕೂ ಅದೃಷ್ಟವಂತಳು. ನಿಜವಾಗಲೂ ದೇವಿಯೇ ಪ್ರತ್ಯಕ್ಷವಾದ ಹಾಗಿದೆ ಎಂದಿದ್ದಾರೆ ಮತ್ತೊಬ್ಬರು. ಇದು ಮೇಕಪ್ ಅಲ್ಲ. ನಿಜವಾಗಲೂ ಪ್ರತ್ಯಂಗಿರಾ ದೇವಿಯೇ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : ಧ್ವನಿಮಾಯಾ ಕಲಾವಿದೆ ಇಂದುಶ್ರೀಯ ತಾತ ಹೆಂಡತಿಗೆ ಸೀರೆ ತರಲು ಮಧ್ಯಪ್ರದೇಶಕ್ಕೆ ಹೋದಾಗ
ಇದು ಹೆಣ್ಣುರೂಪಿ ಹನುಮಂತನೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಲ್ಲಿ ಏನು ನಡೀತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇಷ್ಟೊಂದು ಮೇಕಪ್ ಹಾಕಿಕೊಂಡು ಇವರೆಲ್ಲ ಯಾಕೆ ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ ಎಂದು ಮಗದೊಬ್ಬರು ಕೇಳಿದ್ದಾರೆ. ಬರೀ ಹಿಂದೂ ದೇವತೆಗಳು ಮಾತ್ರವಾ? ಎಂದು ಇನ್ನೊಬ್ಬರು ಕೇಳಿದ್ದಾರೆ. ಕಲೆಯನ್ನು ಕಲೆಯ ದೃಷ್ಟಿಯಿಂದ ನೋಡಿದರೆ ಬೇರೆ ರೀತಿಯ ಪ್ರಶ್ನೆಗಳು ಹುಟ್ಟುತ್ತವೆ ಎಂದು ಅದಕ್ಕೆ ಪ್ರತ್ಯುತ್ತರ ನೀಡಿದ್ದಾರೆ ಯಾರೋ ಒಬ್ಬರು.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:22 pm, Fri, 10 February 23