ಹಲ್ಲುಜ್ಜಲು ಚಾಟ್ ಮಸಾಲಾ? ಅಮೇಝಾನ್ನಿಂದ ಎಲೆಕ್ಟ್ರಿಕ್ ಟೂತ್ಬ್ರಷ್ ಬದಲಾಗಿ ಮಸಾಲಾಪುಡಿ ಡೆಲಿವರಿ
Amazon : ಅಮೇಝಾನ್ನಿಂದ ಅನುಭವಿಸಿದ ಇಂಥ ಯಡವಟ್ಟುಗಳನ್ನು ಜನರು ಸ್ಕ್ರೀನ್ ಶಾಟ್ ಸಮೇತ ಈ ಥ್ರೆಡ್ಗೆ ಟ್ವೀಟ್ ಮಾಡುತ್ತಿದ್ದಾರೆ. ಅಮೇಝಾನ್ ಹೆಲ್ಪ್ ಎಲ್ಲರಿಗೂ ಉತ್ತರಿಸುತ್ತ ಹೋಗುತ್ತಿದೆ. ಮುಂದೆ?
Viral News : ಆನ್ಲೈನ್ ಶಾಪಿಂಗ್ನ ಅನಾಹುತಗಳ ಬಗ್ಗೆ ಈಗಾಗಲೇ ಓದಿದ್ದೀರಿ ಮತ್ತು ಸ್ವತಃ ಅನುಭವಿಸಿದ್ದೀರಿ. ಮೊಬೈಲ್ ಆರ್ಡರ್ ಮಾಡಿದರೆ ಈರುಳ್ಳಿ, ಡ್ರೋಣ್ ಆರ್ಡರ್ ಮಾಡಿದರೆ ಆಲೂಗಡ್ಡೆ, ಐಫೋನ್ ಆರ್ಡರ್ ಮಾಡಿದರೆ ವಾಷಿಂಗ್ ಸೋಪ್ ಹೀಗೆ ಒಂದೇ ಎರಡೆ? ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಒಬ್ಬ ಮಹಿಳೆ ಅಮೇಝಾನ್ ಮೂಲಕ ಓರಲ್ ಬಿ ಎಲೆಕ್ಟ್ರಿಕ್ ಬ್ರಷ್ ಆರ್ಡರ್ ಮಾಡಿದ್ದಾಳೆ. ಆಕೆ ಬ್ರಷ್ ಬದಲಾಗಿ 4 ಎಂಡಿಎಚ್ ಚಾಟ್ ಮಸಾಲಾ ಬಾಕ್ಸ್ಗಳನ್ನು ಪಡೆದಿದ್ದಾರೆ!
Dear @amazonIN, why haven’t you removed a seller who’s been scamming buyers for over a year? My mom ordered an Oral-B electric toothbrush worth ₹12k, and received 4 boxes of MDH Chat Masala instead! Turns out seller MEPLTD has done this to dozens of customers since Jan 2022. pic.twitter.com/vvgf1apA38
ಇದನ್ನೂ ಓದಿ— N?? (@badassflowerbby) February 12, 2023
ರೂ. 12,000 ಮೌಲ್ಯದ ಎಲೆಕ್ಟ್ರಿಕ್ ಬ್ರಷ್ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ ಕೈಗೆ ಬಂದಿದ್ದು ನಾಲ್ಕು ಚಾಟ್ ಮಸಾಲಾ ಡಬ್ಬಿಗಳು. ಹೇಗನ್ನಿಸಬೇಡ ಗ್ರಾಹಕರಿಗೆ? ಈ ವಿಷಯವನ್ನು ಚರ್ಚಿಸಲು ಟ್ವೀಟ್ ಮಾಡಿದ್ದಾರೆ ಈ ಮಹಿಳೆಯ ಮಗಳು. ಅಮೇಝಾನ್ ಅನ್ನು ಕೂಡ ಟ್ಯಾಗ್ ಮಾಡಿದ್ದಾಳೆ. ಉತ್ಪನ್ನದ ಬಗ್ಗೆ ಅಭಿಪ್ರಾಯಗಳು ಒಳ್ಳೆಯ ರೀತಿಯಿಂದ ಕೂಡಿದ್ದವು. ಆದರೆ ಮಾರಾಟಗಾರರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳಿದ್ದವು ಎಂದಿದ್ದಾಳೆ. ಆದಾಗ್ಯೂ ನೀವು ಯಾಕೆ ಆರ್ಡರ್ ಮಾಡಿದಿರಿ ಎಂದು ಕೇಳಿದ್ದಾರೆ ಅನೇಕರು.
ಇದನ್ನೂ ಓದಿ : ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್ಲೈನ್ ಚಳವಳಿ
ಈ ಪೋಸ್ಟ್ ನೋಡಿದ ಅನೇಕರು ತಮ್ಮ ಇಂಥ ಅನೇಕ ಅನುಭವಗಳನ್ನೂ ಸ್ಕ್ರೀನ್ ಶಾಟ್ ಸಮೇತ ಹಂಚಿಕೊಂಡಿದ್ದಾರೆ. ಅಮೇಝಾನ್ ಹೆಲ್ಪ್ ಎಲ್ಲರ ಟ್ವೀಟ್ಗೂ ಪ್ರತಿಕ್ರಿಯಿಸುತ್ತಿದೆ. ಇದೊಂದು ದೊಡ್ಡ ಸ್ಕ್ಯಾಮ್, ಅಮೇಝಾನ್ ಕೂಡ ಇಂಥ ಮಾರಾಟಗಾರರನ್ನು ತನ್ನ ಪಟ್ಟಿಯಿಂದ ಹೊರಹಾಕುವುದಿಲ್ಲ. ಇವರೊಂದಿಗೆ ಸೇರಿ ಹಣ ಕಮಾಯಿಸುತ್ತಾರೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video : ಬೆಂಕಿಯಿಂದ ಈ ನಾಯಿಮರಿಗಳನ್ನು ರಕ್ಷಿಸಿದ ಅಮೇಝಾನ್ ಲೇಡಿ ಡ್ರೈವರ್
ಜಾಸ್ತಿ ಬೆಲೆಯ ವಸ್ತುಗಳನ್ನು ಥರ್ಡ್ ಪಾರ್ಟಿಯಿಂದ ಖರೀದಿಸಲೇಬಾರದು. ಒಂದುವೇಳೆ ಖರೀದಿಸುವುದಾದರೆ ಕಂಪೆನಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದಿದ್ದಾರೆ ಇನ್ನೊಬ್ಬರು. ಯಾವುದೇ ವಸ್ತುವನ್ನು ಖರೀದಿಸುವಾಗ ರಿವ್ಯೂ ನೋಡುವುದು ಒಳ್ಳೆಯದು ಎಂದಿದ್ದಾರೆ ಕೆಲವರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ