AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಬೆಂಕಿಯಿಂದ ಈ ನಾಯಿಮರಿಗಳನ್ನು ರಕ್ಷಿಸಿದ ಅಮೇಝಾನ್ ಲೇಡಿ ಡ್ರೈವರ್

Dog Love : ಅಮೇಝಾನ್​ ಡೆಲಿವರಿಗೆಂದು ಈ ಯುವತಿ ಗ್ರಾಹಕರ ಮನೆಗೆ ಹೋಗಿದ್ದಾರೆ. ಒಳಗೆ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ಈ ಮೂರೂ ನಾಯಿಮರಿಗಳನ್ನು ರಕ್ಷಿಸಿದ್ದಾರೆ. ನೆಟ್ಟಿಗರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Viral Video : ಬೆಂಕಿಯಿಂದ ಈ ನಾಯಿಮರಿಗಳನ್ನು ರಕ್ಷಿಸಿದ ಅಮೇಝಾನ್ ಲೇಡಿ ಡ್ರೈವರ್
ಅಮೇಝಾನ್ ಲೇಡಿ ಡ್ರೈವರ್ ಈ ನಾಯಿಮರಿಯನ್ನು ರಕ್ಷಿಸುತ್ತಿರುವುದು
TV9 Web
| Edited By: |

Updated on:Sep 06, 2022 | 3:41 PM

Share

Viral : ಅಮೆರಿಕದಲ್ಲಿರುವ ಕೊಲಂಬಿಯಾ ಕೌಂಟಿ ಫೈರ್​ ರೆಸ್ಕ್ಯೂ ತನ್ನ ಅಧಿಕೃತ ಫೇಸ್​ಬುಕ್​ ಪುಟದಲ್ಲಿ ಮೇಲ್ಕಂಡ ಚಿತ್ರಗಳನ್ನು ಹಂಚಿಕೊಂಡಿದೆ. ಇಲ್ಲಿರುವ ಈ ಯುವತಿ ಅಮೇಝಾನ್​ ಡೆಲಿವರಿ ಡ್ರೈವರ್. ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯಿಂದ ನಾಯಿಮರಿಗಳನ್ನು ರಕ್ಷಿಸಿದ್ದಾರೆ. ತನ್ನ ಜೀವ ಪಣಕ್ಕಿಟ್ಟು ಒಟ್ಟು ಮೂರು ನಾಯಿಮರಿಗಳ ಜೀವ ಉಳಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಕೆಚ್ಚೆದೆಯ ಈ ಯುವತಿಯ ಕಥೆಯನ್ನು ಕೌಂಟಿ ಫೈರ್​ ರೆಸ್ಕ್ಯೂ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಈ ಪೋಸ್ಟ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತನಕ 541 ಜನರು ಈ ಪೋಸ್ಟ್​ ರೀಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆಗಸ್ಟ್​ 31ರಂದು ಈ ಪೋಸ್ಟ್ ಮಾಡಲಾಗಿದೆ. ‘ಮನೆಯಲ್ಲಿ ಮಾಲಿಕರು ಇಲ್ಲದ ವೇಳೆಯಲ್ಲಿ ಮನೆಗೆ ಬೆಂಕಿ ಬಿದ್ದಿದೆ. ಆಗ ಬೆಂಕಿಗೆ ಆಹುತಿಯಾಗುತ್ತಿದ್ದ ಈ ನಾಯಿಮರಿಗಳ ಜೀವವನ್ನು ಈ ಯುವತಿ ಉಳಿಸಿದ್ದಾರೆ. ಹೊಗೆಯಿಂದಾಗಿ ಉಸಿರಾಟದ ತೊಂದರೆಗೆ ಒಳಗಾಗಿದ್ದ ಮೂರು ನಾಯಿಮರಿಗಳ ಆರೈಕೆ ಮಾಡಿ ಕಾಪಾಡಿದ್ದಾರೆ. ಹೊಗೆಯನ್ನು ಗಮನಿಸಿ 911 ಗೆ ಕರೆ ಮಾಡಿ ಅಮೇಝಾನ್ ಡ್ರೈವರ್​ಗೆ ಧನ್ಯವಾದಗಳು’ ಎಂದು ಪೋಸ್ಟ್​ನ ಒಕ್ಕಣೆ ಹೇಳುತ್ತದೆ. 700ಕ್ಕೂ ಹೆಚ್ಚು ಲೈಕ್ಸ್​ ಈ ಪೋಸ್ಟ್​ಗೆ ಒದಗಿದೆ.

ಈ ಯುವತಿಗೆ ಧನ್ಯವಾದ ಹೇಳಿದ ನಾಯಿಮರಿಗಳ ಪೋಷಕಿ, ‘ತುಂಬಾ ಧನ್ಯವಾದಗಳು ನನ್ನ ಮರಿಗಳನ್ನು ರಕ್ಷಿಸಿದ್ದಕ್ಕೆ. ಇವು ನನ್ನ ಮಗಳು ತುಂಬಾ ಪ್ರೀತಿಸುವ ನಾಯಿಮರಿಗಳು. ಆಸ್ಪತ್ರೆಯಲ್ಲಿರುವ ಅವು ಆರೋಗ್ಯವಾಗಿವೆ. ಧನ್ಯವಾದ ಎಷ್ಟು ಹೇಳಿದರೂ ಸಾಕಾಗದು’ ಎಂದಿದ್ದಾರೆ.

ಫೇಸ್​ಬುಕ್ ಖಾತೆದಾರರು, ಪ್ರತಿಕ್ರಿಯೆಗಳ ಮೂಲಕ ಡ್ರೈವರ್​ಗೆ ಅಭಿನಂದನೆಗಳ ಮಳೆ ಸುರಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:40 pm, Tue, 6 September 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ